ಕುಂದುಜ್: ಅಫ್ಗಾನಿಸ್ತಾನದ ಕುಂದುಜ್ನಲ್ಲಿ ಶಿಯಾ ಮಸೀದಿಯೊಂದರ ಮೇಲೆ ಶುಕ್ರವಾರ ನಡೆದ ಭೀಕರ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ.

ದಾಳಿಯಲ್ಲಿ ಅಲ್ಪಸಂಖ್ಯಾತ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ. ಯಾವುದೇ ಸಂಘಟನೆ ದಾಳಿಯ ಹೊಣೆಹೊತ್ತುಕೊಂಡಿಲ್ಲ.

ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲೇ ಸ್ಫೋಟ ಸಂಭವಿಸಿದೆ ಎಂದು ಕುಂದುಜ್ ನಿವಾಸಿಗಳು ಹೇಳಿದ್ದಾರೆ.

ಓದಿ:ಅಫ್ಗಾನಿಸ್ತಾನ: ವಿಜಯದ ಮೆರವಣಿಗೆ ಮೂಲಕ ತಾಲಿಬಾನ್ ಶಕ್ತಿ ಪ್ರದರ್ಶನ

ತಾಲಿಬಾನ್ನ ವಿರೋಧಿಗಳೆಂದು ಪರಿಗಣಿಸಲಾಗಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರು ಸುನ್ನಿ ಸಮುದಾಯದವರು ಬಹುಸಂಖ್ಯಾತರಾಗಿರುವ ಅಫ್ಗಾನಿಸ್ತಾನದಲ್ಲಿ ಶಿಯಾ ಸಮುದಾಯದವರನ್ನು ಗುರಿಯಾಗಿಸುತ್ತಿದ್ದಾರೆ. ಪಂಥೀಯ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ಮಸೀದಿ ಮೇಲೆ ಆತ್ಮಹತ್ಯಾ ದಾಳಿ ನಡೆದಿರುವುದನ್ನು ಅಫ್ಗಾನಿಸ್ತಾನದ ನೂತನ ತಾಲಿಬಾನ್ ಸರ್ಕಾರದ ಕುಂದುಜ್ನ ಸಂಸ್ಕೃತಿ ಮತ್ತು ಮಾಹಿತಿ ನಿರ್ದೇಶಕ ಮತಿಯುಲ್ಲಾ ರೊಹಾನಿ ಖಚಿತಪಡಿಸಿದ್ದಾರೆ.

ಓದಿ:32 ವಿಭಾಗಗಳಲ್ಲಿ ಮಹಿಳೆಯರ ಹಕ್ಕು ಕಸಿಯುತ್ತಿರುವ ತಾಲಿಬಾನ್: ವರದಿ

ಕುಂದುಜ್ನ ಶಿಯಾ ಮಸೀದಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಅನೇಕ ಮಂದಿ ಮೃತಪಟ್ಟಿದ್ದಾರೆ ಎಂದು ಈ ಹಿಂದೆ ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.