ಕೀವ್: ಕಳೆದ ತಿಂಗಳು ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಆರಂಭಿಸಿದಾಗಿನಿಂದ ಬಂದರು ನಗರ ಮರಿಯುಪೊಲ್‌ನಲ್ಲಿ ಕನಿಷ್ಠ 5,000 ಜನರು ಸಾವಿಗೀಡಾಗಿರುವುದಾಗಿ ಉಕ್ರೇನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಸುಮಾರು 5,000 ಜನರ ಶವಗಳನ್ನು ಹೂಳಲಾಗಿದೆ. ಆದರೆ, ನಿರಂತರವಾಗಿ ಷೆಲ್ ದಾಳಿ ನಡೆಯುತ್ತಿರುವುದರಿಂದ 10 ದಿನಗಳ ಹಿಂದೆ ಅಂತ್ಯ ಸಂಸ್ಕಾರ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ' ಎಂದು ಮಾನವೀಯ ಕಾರಿಡಾರ್‌ಗಳ ಉಸ್ತುವಾರಿ ವಹಿಸಿರುವ ಟೆಟ್ಯಾನಾ ಲೊಮಾಕಿನಾ ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.

ಅವಶೇಷಗಳ ಅಡಿಯಲ್ಲಿ ಸಿಲುಕಿರುವ ದೇಹಗಳನ್ನು ಆಧರಿಸಿ ಸಾವಿನ ಸಂಖ್ಯೆಯನ್ನು ಅಂದಾಜಿಸಲಾಗುತ್ತಿದೆ. 10,000 ಮಂದಿ ಸಾವಿಗೀಡಾಗಿರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ–ಉಕ್ರೇನ್ ತ್ವರಿತವಾಗಿ ಶಾಂತಿ ಬಯಸುತ್ತಿದೆ: ಝೆಲೆನ್ಸ್ಕಿ

ಮರಿಯುಪೋಲ್‌ನಲ್ಲಿ ಸುಮಾರು 1,60,000 ನಾಗರಿಕರು ರಷ್ಯಾ ಪಡೆಗಳಿಂದ ಸುತ್ತುವರಿಯಲ್ಪಟ್ಟಿದ್ದಾರೆ. ಅಲ್ಲಿನ ಜನರು ನೀರು, ಆಹಾರ ಹಾಗೂ ಔಷಧಗಳಿಗೆ ಎದುರು ನೋಡುತ್ತಿದ್ದಾರೆ ಎಂದಿದ್ದಾರೆ.

ಹಿಂದೆ 4,50,000 ಜನರಿಗೆ ಆಶ್ರಯ ನೀಡಿದ್ದ ನಗರದ ಮೇಲೆ ರಷ್ಯಾ ಭೂ ಮಾರ್ಗ, ವಾಯು ಹಾಗೂ ಸಮುದ್ರ ಮಾರ್ಗದಿಂದಲೂ ದಾಳಿ ನಡೆಸಿದ್ದು, ದುರಂತ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯವು ಹೇಳಿದೆ.

ಇದನ್ನೂ ಓದಿ–ರಷ್ಯಾ ಮಾರಕ ದಾಳಿಯಿಂದ ಉಕ್ರೇನ್ಗೆ ಇದುವರೆಗೆ ಆದ ಹಾನಿ ಪ್ರಮಾಣ ಎಷ್ಟು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.