ಕೀವ್: ರಷ್ಯಾದಿಂದ ಆಕ್ರಮಣ ಭೀತಿ ಹೆಚ್ಚಿದ ಬೆನ್ನಲ್ಲೇ ಉಕ್ರೇನ್ ತುರ್ತು ಪರಿಸ್ಥಿತಿ ಘೋಷಿಸಿದೆ. ಇದು ಫೆಬ್ರುವರಿ 24ರಿಂದ ಜಾರಿಗೆ ಬರಲಿದ್ದು, 30 ದಿನಗಳವರೆಗೆ ಜಾರಿಯಲ್ಲಿರಲಿದೆ.

ರಕ್ಷಣೆಗಾಗಿ ಸೇನಾ ಮೀಸಲು ಪಡೆಗಳನ್ನು ಒಗ್ಗೂಡಿಸುತ್ತಿರುವ ಉಕ್ರೇನ್, ರಷ್ಯಾದಲ್ಲಿರುವ ನಾಗರಿಕರು ತಕ್ಷಣವೇ ಸ್ವದೇಶಕ್ಕೆ ವಾಪಸಾಗುವಂತೆ ಸೂಚಿಸಿದೆ.

ಈ ಮಧ್ಯೆ, ಪೂರ್ವ ಉಕ್ರೇನ್‌ನಲ್ಲಿ ಬಂಡುಕೋರರ ಹಿಡಿತದಲ್ಲಿರುವ ಎರಡು ಪ್ರದೇಶಗಳನ್ನು ಆಕ್ರಮಿಸಿಕೊಳ್ಳಲು ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಸೇನಾ ಪಡೆಗಳನ್ನು ನಿಯೋಜಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸೇನೆಯ 2 ಲಕ್ಷಕ್ಕೂ ಹೆಚ್ಚು ಮೀಸಲು ಸಿಬ್ಬಂದಿಗೆ ಕರ್ತವ್ಯಕ್ಕೆ ಮರಳಲು ಸೂಚಿಸಿದ್ದಾರೆ. ಈ ಬೆಳವಣಿಗೆಗಳು ಉದ್ವಿಗ್ನತೆಯನ್ನು ಹೆಚ್ಚಿಸಿವೆ.

ಉಕ್ರೇನ್ ಗಡಿಯಿಂದ 20 ಕಿ.ಮೀ ದೂರದಲ್ಲಿ ರಷ್ಯಾ ಸೇನೆ: ಉಪಗ್ರಹ ಚಿತ್ರಗಳಲ್ಲಿ ದೃಢ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.