ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಆಭರಣ ಸಂಗ್ರಹದಲ್ಲಿ ಪೊಲ್ಕಿ ಆಭರಣಕ್ಕೆ ವಿಶೇಷ ಸ್ಥಾನ. ಮದುಮಗಳು, ರೂಪದರ್ಶಿಯರಿಗೆ ಈ ಆಭರಣಗಳು ಅಚ್ಚುಮೆಚ್ಚು. ಕತ್ತಿನಿಂದ ಎದೆತನಕ ಮುಚ್ಚುವ ಪೊಲ್ಕಿ ನೆಕ್ಲೇಸ್ ಟ್ರೆಂಡಿ, ಫ್ಯಾಷನೇಬಲ್ ಎನಿಸಿಕೊಂಡಿದೆ.

ಈ ಪೊಲ್ಕಿ ಆಭರಣಗಳು ಮೊಘಲರ ಕಾಲದಿಂದಲೇ ಬಂದತವು. ಫ್ಯಾಷನ್ ಜಗತ್ತಿನಲ್ಲಿ ಬದಲಾವಣೆಯಾಗುತ್ತಲೇ ಇರುತ್ತದೆ. ಈ ಬದಲಾವಣೆಯಿಂದ ಪೊಲ್ಕಿ ಆಭರಣಗಳು ಹೊರತಾಗಿಲ್ಲ. ಆದರೂ ಬೇಡಿಕೆ, ಮಹತ್ವದಲ್ಲಿ ಹಿಂದೆ ಸರಿದಿಲ್ಲ. ಪುರಾತನ ವಿನ್ಯಾಸದ ಪೊಲ್ಕಿಯ ಆಭರಣದ ಚಂದಕ್ಕೆ ಸೆಲೆಬ್ರಟಿಗಳು ಸೇರಿದಂತೆ ಹೆಂಗಳೆಯರು ಮನಸೋತಿದ್ದಾರೆ. ಅದರ ಮೋಡಿಯೇ ಅಂತಹದ್ದು.

ಸ್ಟೇಟ್ಮೆಂಟ್ ಲುಕ್ನಿಂದಲೇಪೊಲ್ಕಿ ಒಡವೆಯದ್ದು ಬ್ರೈಡಲ್ ಕಲೆಕ್ಷನ್ನಲ್ಲಿ ಮುಖ್ಯವಾದ ಸ್ಥಾನ. ಪೊಲ್ಕಿ ಎಂದರೆ ಕತ್ತರಿಸದ ಹಾಗೂ ಪಾಲಿಷ್ ಮಾಡಿಲ್ಲದ ವಜ್ರ. ಇಲ್ಲಿ ಆಭರಣ ವಿನ್ಯಾಸ ಮಾಡುವಾಗ ವಜ್ರವನ್ನು ಅದರ ಮೂಲರೂಪದಲ್ಲಿಯೇ ವಿನ್ಯಾಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಯಾವುದೇ ರೀತಿಯ ರಾಸಾಯನಿಕ ಕ್ರಿಯೆಗೆ ಒಳಪಡಿಸುವುದಿಲ್ಲ. ವಜ್ರವನ್ನು ಕತ್ತರಿಸದೇ ಇರುವುದರಿಂದ ಆಭರಣದ ವಿನ್ಯಾಸವು ಮೂಲ ಹರಳಿನ ರಚನೆಯನ್ನು ಅವಲಂಭಿಸಿರುತ್ತದೆ.

ಪೊಲ್ಕಿ ವಜ್ರದಲ್ಲಿ ಫ್ಲ್ಯಾಟ್ ಇಂಗ್ಲಿಷ್ ಪೊಲ್ಕಿ, ರೋಸ್ಕಟ್... ಹೀಗೆ ವಿವಿಧ ಮಾದರಿಗಳಿವೆ. ಆಭರಣ ವಿನ್ಯಾಸ ಮಾಡುವಾಗ ಸಿಲ್ವರ್ ಫಾಯ್ಲಿಂಗ್, 24 ಕ್ಯಾರೆಟ್ ಶುದ್ಧ ಚಿನ್ನ ಬಳಸಲಾಗುತ್ತದೆ. ಬೇರೆ ಬೇರೆ ಬಣ್ಣದ ಹರಳು, ಮುತ್ತುಗಳನ್ನು ಬಳಸಿ ಮಾಡಲಾಗುತ್ತದೆ.ಇಂತಹ ಅನನ್ಯತೆ ಹಾಗೂ ಹರಳನ್ನು ಕಚ್ಛಾರೂಪದಲ್ಲಿಯೇ ಬಳಸುವುದರಿಂದ ಈ ಆಭರಣ ಕೊಂಚ ದುಬಾರಿ ಎಂದು ಮಾಹಿತಿ ನೀಡಿದರು ಬೆಂಗಳೂರಿನ ಮಲ್ಲೇಶ್ವರದ ಸನ್ರೈಸ್ ಆಭರಣ ಮಳಿಗೆಯಆಭರಣ ವಿನ್ಯಾಸಕ ವೈ.ಎಸ್. ಗೋಪಿನಾಥ್.

ಪೊಲ್ಕಿ ಆಭರಣವಿನ್ಯಾಸದಲ್ಲೂ ಎರಡು ಬಗೆಗಳಿವೆ. ರಾಜಸ್ತಾನಿ ಹಾಗೂ ಹೈದರಾಬಾದ್ ವಿನ್ಯಾಸದಲ್ಲಿ ಪೊಲ್ಕಿ ಆಭರಣ ಲಭ್ಯ. ರಾಜಸ್ತಾನಿ ಶೈಲಿಯಲ್ಲಿ ಪೊಲ್ಕಿ ಹರಳುಗಳನ್ನು ಚಿನ್ನದಲ್ಲಿ ಕಟ್ಟಿ, ಹಿಂದಿನಿಂದ ವ್ಯಾಕ್ಸ್ನಿಂದ ಮುಚ್ಚಲಾಗುತ್ತದೆ. ಇದಕ್ಕೆ ಜಡಾವ್ ಜ್ಯುವೆಲ್ಲರಿ ಎಂದೂ ಕರೆಯುತ್ತಾರೆ. ಹೈದಾರಾಬಾದ್ ವಿನ್ಯಾಸದಲ್ಲಿ ಚಿನ್ನ, ಹರಳು ಸೆಟ್ ಮಾಡಲು ಸಿಲ್ವರ್ ಫಾಯ್ಲಿಂಗ್ ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಪೊಲ್ಕಿ ಆಭರಣ ವಿನ್ಯಾಸಕ್ಕೆ ಬಹು ಸಮಯ ತೆಗೆದುಕೊಳ್ಳುತ್ತದೆ. ಕಿವಿಯೋಲೆ ಮಾಡಲು ಕನಿಷ್ಠ 1 ವಾರ ಹಾಗೂ ನೆಕ್ಲೇಸ್ಗೆ 15 ದಿನ ಬೇಕು.ಪೊಲ್ಕಿಯಲ್ಲಿ ನೆಕ್ಲೇಸ್, ಚೋಕರ್,, ಬಳೆ,ಚಾಂದ್ಬಲೀ ಎಲ್ಲವೂ ಲಭ್ಯ.ಈಗ ಕತ್ತಿನಿಂದ ಎದೆ ಮುಚ್ಚುವ ತನಕಿರುವ ಲೇಯರ್ ಪೊಲ್ಕಿ ನೆಕ್ಲೆಸ್ಗೆ ಹೆಚ್ಚು ಬೇಡಿಕೆಯಿದೆ. ಕಿವಿಯೋಲೆಗಳಲ್ಲಿ ಚಾಂದ್ಬಾಲಿಸ್ಗಳಿಗೆ ಬೇಡಿಕೆ ಎನ್ನುತ್ತಾರೆ ಗೋಪಿನಾಥ್.

ಈ ಒಡವೆಗಳು ಮದುವೆಯಂತಹ ಅದ್ದೂರಿ ಕಾರ್ಯಕ್ರಮಗಳಿಗೆ ಚಂದ. ಸೀರೆ, ಲೆಹೆಂಗಾದ ಜೊತೆ ಈ ಆಭರಣ ತೊಟ್ಟರೆ ಅಂದ ಇಮ್ಮಡಿಯಾಗುವುದರಲ್ಲಿ ಸಂದೇಹವೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.