ಕೊರೊನಾ ಸೋಂಕಿನ ಕಾಲದಲ್ಲಿ ಲಾಕ್‌ಡೌನ್‌ನಿಂದ ಮನೆಯಲ್ಲೇ ಇದ್ದ ಯುವ ಜನ ಪಾರ್ಲರ್, ಸ್ಪಾ, ಸಲೂನ್‌ಗಳಿಗೆ ಹೋಗದೆ ಉದ್ದ ಕೂದಲು, ಗಡ್ಡ ಬಿಟ್ಟು ಅದೇ ಫ್ಯಾಷನ್ ಎಂದರು. ಈ ವರ್ಷದಿಂದ ಸಲೂನ್‌ಗಳು ತೆರೆದಿದ್ದು; ಕೂದಲು ವಿನ್ಯಾಸದಲ್ಲೂ ಹೊಸ ಪ್ರಯೋಗಗಳು ಹುಟ್ಟಿಕೊಂಡಿವೆ. ಗಿಡ್ಡ ಕೂದಲು ಮಹಿಳೆ ಮತ್ತು ಪುರುಷರಲ್ಲಿ ಟ್ರೆಂಡ್ ಆಗಿದೆ.

ಆಚರಿಸದೆ– ಆಯೋಜಿಸದೆ ಉಳಿದ ಹಬ್ಬ, ಮದುವೆಗಳು ಮತ್ತೆ ಸಂಭ್ರಮಿಸುತ್ತಿವೆ. ಶಾಪಿಂಗ್ ಇಲ್ಲದೆ, ಮದುವೆಗಳಲ್ಲಿ ಸಿಂಗಾರ ಮಾಡಿಕೊಂಡು ಮೆರೆಯದೇ ಕೊರೊನಾ ವರ್ಷಗಳ ಕಳೆದಿದ್ದು, ಈ ವರ್ಷ ಭರ್ಜರಿ ಮೇಕ್ ಓವರ್‌ಗಳನ್ನು ಕಾಣಬಹುದು. ಅದರಲ್ಲೂ ಹೊಸ ಹೇರ್‌ಸ್ಟೈಲ್, ಹೇರ್‌ಕಟ್ ಯುವತಿಯರಿಗೆ ನವಚೈತನ್ಯ ತರುತ್ತಿದೆ. ಪಿಂಟ್‌ರೆಸ್ಟ್, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣದಲ್ಲಿ ಈ ವರ್ಷದ ಕೆಲವು ಜನಪ್ರಿಯ ಹೇರ್‌ಕಟ್‌ಗಳ ಮಾಹಿತಿ ಇಲ್ಲಿದೆ.

ಅಲ್ಟ್ರಾ ಶಾರ್ಟ್: ಅತಿ ಚಿಕ್ಕದಾದ ಕಟ್ ಇದು. ಸುರುಳಿ ಅಥವಾ ಗುಂಗರು ಕೂದಲಿಗೆ ಈ ಕಟ್ ಸೂಕ್ತ. ಇದನ್ನು ಬಿಗ್ ಕಟ್ ಎಂದೂ ಕರೆಯುತ್ತಾರೆ. ಇದರ ನಿರ್ವಹಣೆ ಹೆಚ್ಚು ಇರುವುದಿಲ್ಲ.

ಲೇಯರ್ಡ್ ಲೋಬ್: ಕುತ್ತಿಗೆಯವರೆಗೆ ಕೂದಲು ಬರುವ ಹಾಗೆ ಈ ಕಟ್ ಮಾಡಲಾಗುತ್ತದೆ. ಹಣೆ ಭಾಗದಲ್ಲಿ ಬ್ಯಾಂಗ್ಸ್ ಮಾಡಿಸಿಕೊಂಡೂ ಈ ಕಟ್ ಮಾಡಿಸಿಕೊಳ್ಳಬಹುದು. ತೆಳುವಾದ ಕೂದಲು ಇರುವವರು ಈ ಕಟ್ ಮಾಡಿಸಿಕೊಂಡರೆ ಚೆಂದ. ಲೇಯರ್ಡ್‌ನಿಂದ ಕೂದಲು ಹೆಚ್ಚು ದಟ್ಟವಾಗಿ ಕಾಣಿಸುತ್ತದೆ. ಬೇಸಿಗೆಗೆ ಈ ಕಟ್ ಸೂಕ್ತ. ಸ್ಟ್ರೈಟ್ ಮತ್ತು ಸುರಳಿ ಕೂದಲಿಗೆ ಈ ಕಟ್ ಹೊಂದುತ್ತದೆ.

ಬಿಕ್ಸಿ: 90ರ ದಶಕದಲ್ಲಿ ಜನಪ್ರಿಯವಾಗಿದ್ದ ಬಿಕ್ಸಿ ಹೇರ್‌ಕಟ್ ಮತ್ತೆ ಮುನ್ನೆಲೆಗೆ ಬಂದಿದೆ. ಬಿಕ್ಸಿ ಎಂದರೆ ಸಮಾನ ಭಾಗಗಳ ಪಿಕ್ಸಿ ಕಟ್ ಎಂದು ಹೇಳಲಾಗುತ್ತದೆ. ಸ್ವಲ್ಪ ಬಾಬ್ ಕಟ್ ಅನ್ನೂ ಹೋಲುತ್ತದೆ. ನೆತ್ತಿಯಿಂದ ಕತ್ತಿನವರೆಗೆ ನೇರವಾಗಿ ಇರುವಂತೆ ಈ ಕಟ್ ಕಾಣುತ್ತದೆ. ಈ ಕಟ್ ಮಾಡಿದ ನಂತರ ಹೇರ್‌ಜೆಲ್‌ನಲ್ಲಿ ಸೆಟ್ ಮಾಡಿ ತಲೆಗೆ ಅಂಟಿರುವಂತೆ ಬಾಚಿಕೊಳ್ಳಬೇಕು. ಕೂದಲು ಬಿಡಿಬಿಡಿಯಾಗಿ ಇದ್ದರೆ ಚೆನ್ನಾಗಿ ಕಾಣುವುದಿಲ್ಲ.

ಬ್ರೋಕನ್ ಬೌಲ್: ‘ಇಲಿ ಕಚ್ಚಿದ ಹಾಗೆ ನಿನ್ನ ಕೂದಲು ಆಗಿದೆ’ ಎಂದು ಯಾರಾದರೂ ತಮಾಷೆ ಮಾಡಿದರೆ ಚಿಂತಿಸಬೇಡಿ. ಈ ವಿನ್ಯಾಸವನ್ನು ಬ್ರೋಕನ್ ಬೌಲ್ ಹೇರ್‌ಕಟ್. ಹಾಲಿವುಡ್‌ನಲ್ಲಿ ಟಾಪ್‌ರೇಟೆಡ್ ಕಟ್ ಇದು. ಕಿವಿ ಬಳಿ, ಹಣೆ ಮೇಲೆ ಅಂದಾಜು ಇಲ್ಲದಂತೆ ಕೂದಲು ಕತ್ತರಿಸುವ ಈ ಕಟ್ ‘ಐಕಾನಿಕ್ ಹೇರ್‌ಕಟ್’ ಎಂದೇ ಜನಪ್ರಿಯ.

ಕ್ಲಾಸಿಕ್ ಬಾಬ್: ಇದು ಸರ್ವಕಾಲಿಕ ಜನಪ್ರಿಯ ಹೇರ್‌ಕಟ್. ಕಿವಿ ತುದಿವರೆಗೆ ಹಿಂಬದಿಯಿಂದ ಲೇಯರ್ ನೀಡಿ ಕಟ್ ಮಾಡುವುದು. ಹೆಚ್ಚು ಪ್ರಯೋಗವಿಲ್ಲದೆ, ಗಿಡ್ಡ ಕೂದಲು ಒಪ್ಪುವ ಎಲ್ಲರಿಗೂ ಹೊಂದುತ್ತದೆ.

ಎಡ್ಜಿ ಅಂಡರ್‌ಕಟ್: ತಲೆಯ ಮಧ್ಯಭಾಗದಲ್ಲಿ ಮಾತ್ರ ಉದ್ದನೆಯ ಕೂದಲು ಬಿಟ್ಟು ಕಿವಿಗಳ ಬಳಿ ಪೂರ್ಣ ಶೇವ್ ಮಾಡಿದಂತೆ ಈ ಕಟ್ ಕಾಣಿಸುತ್ತದೆ. ಇದನ್ನು ರೆಡ್‌ಕಾರ್ಪೆಟ್ ಲುಕ್ ಎಂದೂ ಬಣ್ಣಿಸಲಾಗುತ್ತದೆ. ಎರಡು ಕಿವಿ ಬದಿ ಶೇವ್ ಮಾಡಿ ಮಧ್ಯಭಾಗದ ಕೂದಲನ್ನು ಉದ್ದವಾಗಿ ಕೂಡ ಉಳಿಸಿಕೊಳ್ಳಬಹುದು ಅಥವಾ ಕುತ್ತಿಗೆವರೆಗೆ ಗಿಡ್ಡವಾಗಿ ಇಟ್ಟುಕೊಳ್ಳಬಹುದು. ತುದಿ ನೇರವಾಗಿರಬೇಕು. ಲೇಯರ್‌ಗಳು ಹೆಚ್ಚು ಇರುವುದಿಲ್ಲ.

ಮುಖದ ಆಕಾರಕ್ಕೆ ತಕ್ಕ ಹೇರ್‌ಕಟ್

ಎಲ್ಲರಿಗೂ ಎಲ್ಲಾಬಗೆಯ ಹೇರ್‌ಕಟ್ ಹೊಂದುವುದಿಲ್ಲ. ಕೇಶವಿನ್ಯಾಸಕರ ಸಲಹೆ ಮೇರೆಗೆ ತಮ್ಮ ಮುಖದ ಆಕಾರಕ್ಕೆ ಒಪ್ಪುವ ಕಟ್ ಮಾಡಿಸಿಕೊಳ್ಳುವುದು ಸೂಕ್ತ. ಈ ಬಗ್ಗೆ ಸಲಹೆ ನೀಡಿದ್ದಾರೆ ಬೆಂಗಳೂರಿನ ಬಸವೇಶ್ವರ ನಗರದ ಹೇರ್‌ಸ್ಟೈಲಿಸ್ಟ್ ಸಮೀರ್ ತಮೊಂಗ್.

ಆಯತ (ರೆಕ್ಟ್‌ಆ್ಯಂಗಲ್) ಆಕಾರ ಮುಖ: ಕೆನ್ನೆಮೂಳೆ ಸ್ವಲ್ಪ ದೊಡ್ಡ ಇರುವ ಈ ಮುಖ ಆಕಾರ ಇರುವವರಿಗೆ ಲೇಯರ್ಡ್ ಕಟ್‌ಗಳು, ಉದ್ದದ ಸುರುಳಿ ವಿನ್ಯಾಸ, ಚಿಗ್ನಾನ್ (ಗಂಟಿನಂಥ ವಿನ್ಯಾಸ), ಕರ್ಟನ್ ಬ್ಯಾಂಗ್ಸ್ ಹೇರ್‌ಕಟ್ ಸೂಕ್ತವಾಗಿ ಹೊಂದುತ್ತವೆ.

ಓವಲ್ ಆಕಾರ ಮುಖ: ಮೊಂಡಾದ ತುದಿಯ ಬಾಬ್ ಕಟ್ ಮತ್ತು ಲೋಬ್‌ಗಳು ಸೂಕ್ತ, ಹೆಚ್ಚು ಪದರ ಉಳ್ಳ ಗಿಡ್ಡ ಲೇಯರ್ ಕಟ್, ಗಿಡ್ಡ ಬೇಡ ಎನಿಸಿದರೆ ಉದ್ದ ಲೇಯರ್ ಕೂಡ ಮಾಡಿಸಿಕೊಳ್ಳಬಹುದು.

ಚೌಕ ಆಕಾರ ಮುಖ: ಸೈಡ್-ಪಾರ್ಟೆಡ್ ಮಾಡಿರುವ ಹೇರ್‌ಕಟ್, ಉದ್ದ ಮತ್ತು ಪದರಗಳು ಇರುವ ಕಟ್, ಚಿಕ್ಕ ಲೇಯರ್ಡ್ ಬಾಬ್, ಸೈಡ್-ಸ್ವೆಪ್ ಬ್ಯಾಂಗ್ಸ್ ಸೂಕ್ತವಾಗಿ ಹೊಂದುತ್ತದೆ.

ಹಾರ್ಟ್ ಆಕಾರ ಮುಖ: ಉದ್ದನೆಯ ಸೈಡ್-ಸ್ವೀಪ್ ಕಟ್‌ಗಳು, ಕಿವಿಯ ಕೆಳಗೆ ಪ್ರಾರಂಭವಾಗುವ ಲೇಯರ್ಡ್ ಕಟ್ ಅಥವಾ ಸುರುಳಿಗಳು, ಬಾಬ್ ಕಟ್ ಮತ್ತು ಲಾಬ್ ಕಟ್‌ಗಳು ಸೂಕ್ತ.

ವಜ್ರ: ಕೆದರಿದ ಕಾಣುವ ಲೇಯರ್ಡ್ ಕಟ್, ವೀ ಕಟ್, ಗಲ್ಲದ ಉದ್ದಕ್ಕೆ ಬರುವ ಬಾಬ್ ಕಟ್, ಪೋನಿಟೇಲ್, ಮಧ್ಯ ಅಥವಾ ಉದ್ದನೆಯ ಲೇಯರ್ಡ್ ಕಟ್ ಸೂಕ್ತ.

ರೌಂಡ್: ಲಾಂಗ್ ಲೇಯರ್ಡ್ ಕಟ್‌ಗಳು, ಚಪ್ಪಿ ಪಿಕ್ಸಿ ಕಟ್ಸ್, ಶಾರ್ಟ್ ಸೈಡ್ ಬ್ಯಾಂಗ್ಸ್ ಕಟ್ ಇವರಿಗೆ ಹೊಂದುತ್ತದೆ.

ತ್ರಿಕೋನ: ಕಣ್ಣುಗಳು/ ಕೆನ್ನೆಯ ಮೂಳೆಗಳು ಅಥವಾ ಕಾಲರ್‌ಬೋನ್‌ವರೆಗೆ ಬರುವ ಹೇರ್ ಕಟ್ ಹೊಂದುತ್ತದೆ. ಚಪ್ಪಟೆಯಾದ ಪಿಕ್ಸಿ ಕಟ್‌ಗಳು, ಶಾರ್ಟ್ ಸೈಡ್ ಬ್ಯಾಂಗ್ಸ್ ಸೂಕ್ತ.

ಸಿನಿಮಾ ಪ್ರಭಾವ

ಫ್ಯಾಷನ್, ಕೇಶವಿನ್ಯಾಸದ ಮೇಲೆ ಮಾಧ್ಯಮದ ಪ್ರಭಾವ ಹೆಚ್ಚು. 70 ದಶಕದಲ್ಲಿ ಕಿವಿ ಪಕ್ಕದ ಕೂದಲನ್ನು ಕೆನ್ನೆ ಮೇಲೆ ಸುರಳಿ ಕೂರಿಸಿಕೊಳ್ಳುತ್ತಿದ್ದರಿಂದ ಹಿಡಿದು ರಸ್ನಾ ಜ್ಯೂಸ್‌ನ ಜಾಹೀರಾತಿನಲ್ಲಿ ಬರುತ್ತಿದ್ದ ಮುದ್ದು ಹುಡುಗಿಯ ಬಾಬ್ ಕಟ್, ಅಮೂಲ್ ಬೆಣ್ಣೆ ಜಾಹೀರಾತಿನ ಹುಡುಗಿಯ ನೆತ್ತಿ ಮೇಲೆ ಪೋನಿಟೇಲ್ ವಿನ್ಯಾಸ, ರಜನಿಕಾತ್ ಅವರ ಕಬಾಲಿ ಹೇರ್‌ಕಟ್, ಏರ್‌ಟೆಲ್ 4ಜಿ ಮುಖವಾಣಿ ಹುಡುಗಿಯ ಹೇರ್‌ಕಟ್, ಸುದೀಪ್ ಅವರ ಹೆಬ್ಬುಲಿ ಸಿನಿಮಾದಲ್ಲಿನ ಹೇರ್‌ಕಟ್ ಸೇರಿ ಇಂದು ಟ್ರೆಂಡ್‌ನಲ್ಲಿರುವ ಕೆಜಿಎಫ್ ಸಿನಿಮಾದಲ್ಲಿ ಯಶ್ ಅವರ ಹೇರ್‌ಕಟ್‌ವರೆಗೂ ಜನ ಸಿನಿಮಾ ನಾಯಕ–ನಾಯಕಿಯರಿಂದ ಯುವಕರು ಪ್ರೇರಣೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.