ಕೈತೋಟ ಅಥವಾ ಜಮೀನಿನಲ್ಲಿ ಬೆಳೆಯುವ ತರಕಾರಿಗೆ ರೋಗ ಮತ್ತು ಕೀಟಬಾಧೆ ಕಾಡುತ್ತದೆ. ಅದರಲ್ಲೂ ರಸಹೀರುವ ಕೀಟಗಳು ಸಾಮಾನ್ಯ. ಈ ಕೀಟಗಳನ್ನು ತಡೆಗಟ್ಟಲು, ಈ ಕೆಳಗೆ ತಿಳಿಸಿರುವ ಐದು ಎಲೆಗಳ ಕಷಾಯವನ್ನು ಬಳಸಬಹುದು.

ಐದು ಎಲೆಗಳ ಕಷಾಯ

ಕಿತ್ತಾಗ ಹಾಲು ಒಸರುವ (ಉದಾ: ಪಪ್ಪಾಯ), ಕಹಿ ಗುಣವುಳ್ಳ(ಬೇವು), ದನಕರುಗಳು ತಿನ್ನದ (ಆಡುಸೋಗೆ), ಸುವಾಸನೆ
ಯುಳ್ಳ(ಸೀತಾಫಲ) ಹಾಗೂ ರೋಗಬಾರದ (ಉಮ್ಮತಿ)- ಈ ಐದು ಜಾತಿಯ ಎಲೆಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಅವು
ಗಳನ್ನು ಜಜ್ಜಿ ಒಂದು ಮಣ್ಣಿನ ಮಡಕೆಗೆ ಹಾಕಿ. ಅದಕ್ಕೆ ಎರಡರಷ್ಟು ಪ್ರಮಾಣದ ನೀರು ಮತ್ತು ಒಂದು ಲೀಟರ್ ಗಂಜಲ, 100 ಗ್ರಾಂ ಇಂಗು ಹಾಕಿ. ಮಡಕೆಯ ಬಾಯಿಯನ್ನು ಹತ್ತಿ ಬಟ್ಟೆಯಿಂದ ಮುಚ್ಚಿ. ಈ ಮಿಶ್ರಣವನ್ನು ಪ್ರತಿ ದಿನ ಸಂಜೆ ಒಂದು ಬಾರಿ ಕಲಕಬೇಕು. 7ದಿನಗಳ ನಂತರ ಮಿಶ್ರಣವನ್ನು ಬಟ್ಟೆಯಲ್ಲಿ ಸೋಸಿ. ಸಂಗ್ರಹವಾದ ದ್ರಾವಣದ ಒಂದು ಭಾಗಕ್ಕೆ 10 ಭಾಗ ನೀರು ಸೇರಿಸಿ (1ಕಷಾಯ:10 ನೀರು) ಬೆಳೆಗಳಿಗೆ ಸಿಂಪಡಣೆ ಮಾಡಿ. ಈ ಕಷಾಯವನ್ನು ಒಂದು ತಿಂಗಳ ಕಾಲ ಸಂಗ್ರಹಿಸಿಟ್ಟು ಬಳಸಬಹುದು.

ಈ ಕಷಾಯವನ್ನು ಮೆಣಸಿನಕಾಯಿ, ಟೊಮೆಟೊ, ಬದನೆ ಬೆಳೆಗಳಿಗೆ ತಗಲುವ ರಸಹೀರುವ ಕೀಟಗಳ ಹಾವಳಿ ನಿಯಂತ್ರಿಸಲು ಉಪಯೋಗಿಸಬಹುದು.

ಎಲೆ, ಮೊಗ್ಗು, ಹೂವು- ಕಾಯಿಗಳನ್ನು ತಿನ್ನುವ ಕೀಟಗಳ ನಿಯಂತ್ರಣಕ್ಕೆ ಶುಂಠಿ, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ರಸದ ಕಷಾಯ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ತಯಾರಿಸುವ ವಿಧಾನ ಹೀಗಿದೆ; ಸ್ವಲ್ಪ ಶುಂಠಿ ಹಾಗೂ ಮೂರು ಗೆಡ್ಡೆ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಸಿಪ್ಪೆ ಸುಲಿದು, ಒಂದು ಹಿಡಿ ಹಸಿ ಮೆಣಸಿನಕಾಯಿ ಜತೆ ಬೆರೆಸಿ ರುಬ್ಬಿಕೊಳ್ಳಬೇಕು. ಅದನ್ನು ಎರಡು ಲೀಟರ್ ನೀರಿಗೆ ಸೇರಿಸಿ, ಮಡಿಕೆಯಲ್ಲಿ ಹಾಕಿ ಕುದಿಸಬೇಕು. ಇದಕ್ಕೆ 50 ಗ್ರಾಂ ಖಾದಿ ಸೋಪನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಒಂದು ತಿಂಗಳ ಕಾಲ ಇಡಬೇಕು. ಈ ಕಷಾಯವನ್ನು ಸೋಸಿಕೊಂಡು, ನಂತರ ಗಿಡಗಳ ಮೇಲೆ ಸಿಂಪಡಣೆ ಮಾಡಬೇಕು.

(ಮಾಹಿತಿ ಕೃಪೆ: ಹಿತ್ತಲ ಚಿತ್ತಾರಗಳು, ಪೀಪಲ್ ಟ್ರೀ ಪ್ರಕಟಣೆ, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.