ಕರು ಹಾಕಿದ ಪ್ರಾರಂಭಿಕ ದಿನಗಳಲ್ಲಿ, ಅದರಲ್ಲೂ ಆರಂಭದ ಆರು ವಾರಗಳಲ್ಲಿ ಮಿಶ್ರ ತಳಿಯ ಹಸುಗಳನ್ನು ಸಾಮಾನ್ಯವಾಗಿ ಬಾಧಿಸುವ ಕಾಯಿಲೆಯೇ ಕಿಟೋಸಿಸ್. ಕರು ಹಾಕುವ ಮೊದಲು ಕೆಲವು ಆಕಳುಗಳಲ್ಲಿ ಇದು ಅಪರೂಪವಾಗಿ ಬರುತ್ತದೆ. ಎಮ್ಮೆಗಳಲ್ಲೂ ಈ ಕಾಯಿಲೆ ಬಹಳ ಸಾಮಾನ್ಯ. ಶರೀರದಲ್ಲಿ ಗ್ಲುಕೋಸ್ ಅಂಶವಿದ್ದರೂ ಅದನ್ನು ಬಳಸಿಕೊಳ್ಳುವಲ್ಲಿ ಆಕಳು ವಿಫಲವಾಗುವುದರಿಂದ ಇದನ್ನು ಜಾನುವಾರುಗಳ ಮಧುಮೇಹ ಎನ್ನಬಹುದು.

ಆಕಳು ಕರು ಹಾಕಿದ ಕೂಡಲೇ ಹಾಲು ಉತ್ಪಾದನೆ ಪ್ರಾರಂಭವಾಗುತ್ತದೆ. ಆಗ ಅವುಗಳ ಶರೀರದಿಂದ ಹಾಲಿನ ರೂಪದಲ್ಲಿ ಅಗಾಧ ಪ್ರಮಾಣದ ಶಕ್ತಿ ಬಸಿದು ಹೋಗುತ್ತದೆ.ಇದನ್ನು ಭರಿಸಲು ಆಕಳು ಗರ್ಭ ಧರಿಸಿದ ಸಮಯದಲ್ಲಿ ಶಕ್ತಿಯ ಅಂಶವನ್ನು ಕೊಬ್ಬಿನ ರೂಪದಲ್ಲಿ ಸಂಗ್ರಹಿಸಿ ಇಡಬೇಕಾಗಿರುತ್ತದೆ. ಇದನ್ನು ಆಕಳಿಗೆ ಮೇವಿನ ಅಥವಾ ಹಿಂಡಿಯ ರೂಪದಲ್ಲಿ ನೀಡಿದರೆ ಭರಿಸಲು ಸಾಧ್ಯವಿಲ್ಲ.

ಏಕೆಂದರೆ ಇಷ್ಟೊಂದು ಆಹಾರವನ್ನು ಹೊಟ್ಟೆಯಲ್ಲಿ ತುಂಬಿಸಿಕೊಳ್ಳುವ ಅಥವಾ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಆಕಳಿಗೆ ಇರುವುದಿಲ್ಲ. ಇದನ್ನು ಭರಿಸಲು ಶರೀರದಲ್ಲಿನ ಬೊಜ್ಜು ಅಥವಾ ಜಿಡ್ಡಿನ ಅಂಶವು ಕರಗಲೇಬೇಕಾಗುತ್ತದೆ. ಕರು ಹಾಕುವ ಮೊದಲೇ ಸಾಕಷ್ಟು ಶಕ್ತಿಯ ಅಂಶವು ಅವಶ್ಯಕ ಪ್ರಮಾಣದ ಕೊಬ್ಬು ಅಥವಾ ಬೊಜ್ಜಿನ ರೂಪದಲ್ಲಿ ಸಂಗ್ರಹವಾಗದಿದ್ದಲ್ಲಿ ಹಸುವಿನ ಶರೀರದಲ್ಲಿ ಶಕ್ತಿ ಅಂಶವು ಋಣಾತ್ಮಕವಾಗುತ್ತದೆ.

ಬೊಜ್ಜು ಶಕ್ತಿಯ ರೂಪದಲ್ಲಿ ಬದಲಾವಣೆಯಾಗಬೇಕಾದಾಗ ಅದರ ಜೊತೆಯೇ ಶರೀರಕ್ಕೆ ಅನವಶ್ಯಕವಾದ ಕಿಟೋನ್‌ಗಳೆಂಬ ಕಣಗಳೂ ಉತ್ಪನ್ನವಾಗುತ್ತವೆ. ಕಿಟೋನ್ ಕಣಗಳು ಅಸಿಟೋನ್, ಅಸಿಟೋಅಸಿಟೇಟ್ ಮತ್ತು ಬೀಟಾ ಹೈಡ್ರೋಕ್ಸಿಬ್ಯುಟೈರೇಟ್ ರೂಪದಲ್ಲಿರುತ್ತವೆ.

ಶರೀರದಲ್ಲಿನ ಕೊಬ್ಬಿನಂಶವೂ ಕಡಿಮೆಯಾಗಿ ಆಹಾರದಲ್ಲಿಯೂ ಸೂಕ್ತ ಶಕ್ತಿಯ ಅಂಶವು ಇರದಿದ್ದರೆ ರಕ್ತದಲ್ಲಿ ಕೀಟೋನ್ ಕಣಗಳ ಅಂಶ ಜಾಸ್ತಿಯಾದಾಗ ಕಿಟೋಸಿಸ್ ಕಾಯಿಲೆ ಬರುತ್ತದೆ. ಈ ಕಾಯಿಲೆಯಲ್ಲಿ ಪಿತ್ತಜನಕಾಂಗವು ಸಹ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಅನುವಂಶೀಯತೆ ಸಹ ಈ ಕಾಯಿಲೆಗೆ ಒಂದು ಕಾರಣ.

ಈ ಕಾಯಿಲೆಯಲ್ಲಿ ಮೊದಲು ಜಾನುವಾರು ಮೇವು ತಿನ್ನುವುದನ್ನು, ಅದರಲ್ಲೂ ಹಿಂಡಿಯನ್ನು ತಿನ್ನುವುದನ್ನು ನಿಲ್ಲಿಸುತ್ತದೆ. ಆದರೆ ಹುಲ್ಲನ್ನು ತಿನ್ನುವುದನ್ನು ಮುಂದುವರೆಸುತ್ತವೆ.

ಕೆಲವು ಜಾನುವಾರುಗಳಲ್ಲಿ ನರಮಂಡಲದ ಉದ್ರೇಕವೂ ಸಹ ಕಂಡು ಬರುವುದು. ಇಂತಹ ಸಂದರ್ಭದಲ್ಲಿ ಜಾನುವಾರು ಅದರ ಮೈಯನ್ನು ನೆಕ್ಕುವುದು, ನಡೆದಾಡುವಾಗ ತೊಡರುವುದು, ಕೂಗುವುದು ಮತ್ತು ಸುತ್ತು ಹೊಡೆಯುವುದು ಇತ್ಯಾದಿ ಲಕ್ಷಣಗಳನ್ನು ತೋರಿಸಬಹುದು. ಪ್ರಾರಂಭದಲ್ಲಿ ಹಾಲಿನ ಇಳುವರಿ ಸಾಮಾನ್ಯವಾಗೇ ಇದ್ದರೂ ಕ್ರಮೇಣ ಕಡಿಮೆಯಾಗುತ್ತದೆ. ಶರೀರದಿಂದ ಕೊಬ್ಬಿನಂಶವು ಸೋರಿ ಹೋಗಿ ಆಕಳುಗಳು ಸೊರಗುತ್ತವೆ ಮತ್ತು ದೇಹ ತೂಕದಲ್ಲಿ ಗಣನೀಯ ಇಳಿಮುಖವಾಗುತ್ತದೆ.

ಪತ್ತೆ ಹೇಗೆ?
ಈ ಕಾಯಿಲೆಯನ್ನು ಪತ್ತೆ ಹಚ್ಚುವುದು ಅಂತಹ ಕಷ್ಟಕರ ವಿಷಯವಲ್ಲ. ರೋಗಲಕ್ಷಣಗಳು ಮತ್ತು ಕರುಹಾಕಿರುವ ವೃತ್ತಾಂತವನ್ನು ಗಮನಿಸಿದರೆ ರೋಗವನ್ನು ಪತ್ತೆಹಚ್ಚಬಹುದು. ಆದರೆ ಕೆಲವು ಸಲ ಕರುಹಾಕಿದ 6–8 ವಾರದ ನಂತರವೂ ಈ ಕಾಯಿಲೆ ಬಂದಾಗ ಪತ್ತೆ ಹಚ್ಚುವುದು ಸ್ವಲ್ಪ ಕಷ್ಟವಾದರೂ ಅಸಾಧ್ಯವೇನೂ ಅಲ್ಲ. ಅಲ್ಲದೇ ಆಕಳಿನ ಮೂತ್ರ ಮತ್ತು ಹಾಲಿನಲ್ಲಿ ಕಿಟೋನ್ ಕಣಗಳ ಪತ್ತೆಯನ್ನು ಪ್ರಯೋಗಶಾಲೆಯಲ್ಲಿ ಮಾಡಬಹುದು. ಆಕಳಿನ ಉಸಿರಿನ ವಾಸನೆ ಕಾಕಂಬಿಯ ವಾಸನೆಯನ್ನು ಹೋಲುತ್ತದೆ.

ತಜ್ಞ ಪಶುವೈದ್ಯರು ಈ ಕಾಯಿಲೆಯನ್ನು ಪತ್ತೆ ಹಚ್ಚಿ ಚಿಕಿತ್ಸೆಯನ್ನು ಆಕಳಿಗೆ ಸಾಕಷ್ಟು ಪ್ರಮಾಣದಲ್ಲಿ ರಕ್ತನಾಳದ ಮೂಲಕ ಗ್ಲುಕೋಸ್ ನೀಡುವ ಮೂಲಕ ಮತ್ತು ಸ್ಟಿರಾಯ್ಡ್ ನೀಡುವ ಮೂಲಕ ಗುಣಪಡಿಸಬಲ್ಲರು. ಆದರೆ ಪರಿಣಾಮ ಬರಲು ಐದಾರು ದಿನಗಳ ಕಾಲಾವಕಾಶ ಬೇಕು.

ಸೂಕ್ತ ಪ್ರಮಾಣದಲ್ಲಿ ಶಕ್ತಿಯ ಅಂಶವನ್ನು ನೀಡುವ ಹಿಂಡಿಯನ್ನು ನೀಡದಿದ್ದಲ್ಲಿ ಕಾಯಿಲೆ ಮರುಕಳಿಸುವ ಸಾಧ್ಯತೆ ಬಹಳ ಇದೆ. ಕೆಲವು ಪ್ರಕರಣಗಳಲ್ಲಿ ತೀವ್ರತರವಾದ ರೋಗಲಕ್ಷಣಗಳು ಇದ್ದಲ್ಲಿ ಗ್ಲುಕೋಸ್ ನೀಡಿದ ನಂತರ ಇನ್ಸುಲಿನ್ ಸಹ ಬೇಕಾದೀತು. ಕೆಲವು ಸಲ 400–500 ಮಿಲಿ ಗ್ಲಿಸರಿನ್‌ಅನ್ನು ನಿಧಾನವಾಗಿ ದಿನಕ್ಕೆ ಎರಡು ಸಲ ಮೂರು ದಿನ ಕುಡಿಸಿದಲ್ಲಿ ಪರಿಣಾಮಕಾರಿಯಾಗುತ್ತದೆ. ಎಮ್ಮೆಗಳು ಕರು ಹಾಕುವ ಸಮಯದಲ್ಲಿ ತುಂಬಾ ಕೊಬ್ಬಿದರೆ ಅವುಗಳಲ್ಲಿ ಈ ಕಾಯಿಲೆ ಬರುವುದು ಜಾಸ್ತಿ.

ಎಮ್ಮೆಗಳಲ್ಲಿ ಈ ಕಾಯಿಲೆಯ ಚಿಕಿತ್ಸೆ ಸ್ವಲ್ಪ ಕಷ್ಟವೇ ಸರಿ. ಶರೀರದಲ್ಲಿನ ಕೊಬ್ಬಿನಂಶ ಸಂಪೂರ್ಣವಾಗಿ ಕರಗಿದ ನಂತರ ಅವು ಸಾಮಾನ್ಯ ಪರಿಸ್ಥಿತಿಗೆ ಮರಳುತ್ತವೆ.ಕಾಯಿಲೆಯು ಬರದಂತೆ ಮುಂಜಾಗ್ರತೆ ವಹಿಸುವುದು ಸೂಕ್ತ. ಆಕಳು ಗರ್ಭಧರಿಸಿದ ಏಳು ತಿಂಗಳುಗಳ ನಂತರ ಅದು ಜಾಸ್ತಿ ಕೊಬ್ಬದಂತೆ ನೋಡಿಕೊಳ್ಳಬೇಕು. ಆದರೆ ಅದಕ್ಕೆ ಪೋಷಕಾಂಶಗಳ ಕೊರತೆಯೂ ಆಗಬಾರದು.

ಅದರಲ್ಲೂ ಕರು ಹಾಕುವ ಮೂರು ವಾರದ ಮೊದಲು ಜಾನುವಾರುಗಳು ಹಿಂಡಿ ತಿನ್ನುವುದನ್ನು ಕ್ರಮೇಣ ಕಡಿಮೆ ಮಾಡಿದಲ್ಲಿ, ಅವು ಕಿಟೋಸಿಸ್ ಕಾಯಿಲೆಗೆ ತುತ್ತಾಗುತ್ತವೆ ಎಂದು ತಿಳಿಯಬಹುದು.

ಗರ್ಭಧರಿಸಿದ ಜಾನುವಾರುಗಳಿಗೆ ಏಳು ತಿಂಗಳ ನಂತರ ಹಾಲು ಬತ್ತಿಸಿ ಶರೀರದ ನಿರ್ವಹಣೆಗೆ 2 ಕಿಲೋ ಮತ್ತು ಕರುವಿನ ಬೆಳವಣಿಗೆಗೆ 1 ಕಿಲೋ ಸೂಕ್ತ ಗುಣ ಮಟ್ಟದ ಪಶು ಆಹಾರವನ್ನು ಉತ್ತಮ ನಾರಿನಂಶ ಹೊಂದಿದ ರಾಗಿ ಹುಲ್ಲು ಅಥವಾ ಜೋಳದ ದಂಟಿನ ಜೊತೆ ನೀಡಬೇಕು.

ಕರು ಹಾಕಿದ ಕೂಡಲೇ ಸುಲಭವಾಗಿ ಜೀರ್ಣವಾಗುವಂತಹ ಹೆಚ್ಚಿನ ಶಕ್ತಿ ಅಂಶ ಹೊಂದಿದ ಪಶು ಆಹಾರವನ್ನು ನೀಡಬೇಕು ಅಥವಾ ದಿನಕ್ಕೆ ಎರಡು ಕಿಲೋ ಗೋವಿನ ಜೋಳದ ಹುಡಿಯನ್ನು ಪಶು ಆಹಾರದ ಜೊತೆ ಬೆರೆಸಿ ಕೊಡಬೇಕು. ಅದರಲ್ಲೂ ಆಕಳುಗಳು ಕರು ಹಾಕಿದ ನಂತರ 3–7 ವಾರಗಳವರೆಗೆ ಅವುಗಳ ಪೋಷಣೆ ಬಗ್ಗೆ ಸೂಕ್ತ ಗಮನ ನೀಡಿದಲ್ಲಿ ದೀರ್ಘಾವಧಿಯಲ್ಲಿ ಆಗುವ ನಷ್ಟವನ್ನು ತಪ್ಪಿಸಬಹುದು.
ಲೇಖಕರ ಸಂಪರ್ಕ ಸಂಖ್ಯೆ (08182) 651001

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.