2009ರಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ, ನಾಟಕಗಳು, ಹಾಡು ಕುಣಿತದ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿಕೊಂಡ ತಂಡವೇ ರಂಗಪಯಣ.

ಕಲೆ, ಸಂಸ್ಕೃತಿಯ ಮೇಲಿನ ಪ್ರೀತಿಯಿಂದ ದಶಕಕ್ಕೂ ಮೀರಿ ರಂಗಭೂಮಿಯಲ್ಲಿ ಹೆಜ್ಜೆ ಹಾಕಿದ ರಂಗಪಯಣ ಗ್ರಾಮಾಂತರ ಪ್ರದೇಶದ ಮಕ್ಕಳನ್ನು ಅದರಲ್ಲಿಯೂ ಪ್ರಮುಖವಾಗಿ ಸರ್ಕಾರಿ ಶಾಲೆಯ ಮಕ್ಕಳನ್ನ ಒಂದೆಡೆ ಸೇರಿ ತಿಂಗಳುಗಳ ಕಾಲ ಅವರಿಗೆ ಅಭಿನಯ, ರಂಗಗೀತೆ, ನೃತ್ಯದಪಟ್ಟುಗಳನ್ನು ಕಲಿಸಲು ಮುಂದಾಯಿತು.ರಂಗದೊಂದಿಗೆ ಶಿಕ್ಷಣ ಎಂಬ ಅಡಿ ಬರಹದೊಂದಿಗೆ ಸಾಕಷ್ಟು ಇಂಥ ಕೆಲಸಗಳನ್ನು ಸಾರ್ಥಕಗೊಳಿಸಿದ ಹೆಗ್ಗಳಿಕೆ ತಂಡಕ್ಕಿದೆ. ಕಲಿಯುವ, ಕಲಿಸುವ ಪ್ರಯತ್ನ ನಿರಂತರವಾಗಿ ಮಾಡಿಕೊಂಡು ಬಂದಿದೆ.

ಪ್ರತಿ ವರ್ಷವೂ ವಿಶೇಷ, ವಿಶಿಷ್ಟ ಹೊಸ ನಾಟಕದೊಂದಿಗೆ ರಂಗ ಮನಸ್ಸುಗಳನ್ನು ಅರಳಿಸುವ ಕೆಲಸ ಮಾಡುತ್ತಿದೆ.

ಶ್ರೀನಿವಾಸ್ ವೈದ್ಯರ ಮನಸುಖರಾಯನ ಮನಸು ಕಥೆಗಳ ಆಧಾರಿತ ‘ಶ್ರದ್ಧಾ ನಾಟಕದ ಮೂಲಕ ಹೆಜ್ಜೆಯನಿಟ್ಟ ರಂಗಪಯಣ ತಂಡ ಡಾ.ಎಚ್ .ಎಸ್. ವೆಂಕಟೇಶ ಮೂರ್ತಿ ಅವರ ಮಾದಾರಿ ಮಾದಾಯ್ಯ, ಒಂದಾನೊಂದು ಕಾಲದಲ್ಲಿ, ಪ್ರವೀಣ್ ಸೂಡರ ಗುಲಾಬಿ ಗ್ಯಾಂಗ್ ಮತ್ತು ಗುಲಾಬಿ ಗ್ಯಾಂಗ್ ಭಾಗ 2 , ಸಾರಾ ಅಬೂಬಕ್ಕರ್ ಅವರ ‘ಚಂದ್ರಗಿರಿ ತೀರದಲ್ಲಿ’ ಡಾ.ಬೇಲೂರು ರಘುನಂದನ್ ಅವರ ‘ ಗಾರ್ಗಿ’ ರಾಜಗುರು ಹೊಸಕೋಟೆ ಅವರ ಭೂಮಿ, ಸೋಮಾಲಿಯ ಕಡಲ್ಗಳ್ಳರು, ಫೂಲನ್ ದೇವಿ, ಬದುಕು ಜಟಕಾ ಬಂಡಿ, ನವರಾತ್ರಿಯ ಕೊನೆಯದಿನ ಹೀಗೆ ಹಲವಾರು ರಂಗಪ್ರಯೋಗಗಳನ್ನು ಸಾದರಪಡಿಸಿದೆ.
ರಂಗಪಯಣ 15 ವರ್ಷದ ಸಾರ್ಥಕ ಸಾಧನೆಯ ಸಂಭ್ರಮದಲ್ಲಿದೆ. ಇದರ ಭಾಗವಾಗಿ ಜುಲೈ 31 ರಿಂದ ಆಗಸ್ಟ್ 27ರವರೆಗೆ ನಿರಂತರವಾಗಿ 15ರಂಗ ಪ್ರಯೋಗಗಳನ್ನು ವಿವಿಧೆಡೆ ಪ್ರದರ್ಶಿಸುವ ಮೂಲಕ ತನ್ನ ಸಂಭ್ರಮವನ್ನು ವಿಶೇಷವಾಗಿ ಆಚರಿಸಲು ಚಿಂತಿಸಿದೆ.

ಜುಲೈ 31 ರಂದು ‘ಒಂದಾನೊಂದು ಕಾಲದಲ್ಲಿ; ರಚನೆ: ಗಿರೀಶ್ ಕಾನಾರ್ಡ್. ವಿನ್ಯಾಸ, ನಿರ್ದೇಶನ: ರಾಜಗುರು ಹೊಸಕೋಟೆ.

ನಿರ್ವಹಣೆ: ನಯನ ಜೆ. ಸೂಡ.

ಸ್ಥಳ: ರವೀಂದ್ರ ಕಲಾಕ್ಷೇತ್ರ ಜೆ.ಸಿ.ರಸ್ತೆ.ಬೆಂಗಳೂರು.
ಸಂಜೆ 7ಕ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.