ಜಗನ್ನಾಥ ಪ್ರಕಾಶ

ಮೊನ್ನೆ ಮೊನ್ನೆ ಬಿಳಿ ಬಣ್ಣದ ಕುದುರೆಯೊಂದು ರಾಜಗಾಂಭೀರ್ಯದಿAದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಡೆದಾಡುತ್ತಿತ್ತು. ಈಚೆಗೆ ರಾಜಕೀಯ ಪಕ್ಷಗಳ ನಾಯಕರುಗಳು ‘ಅಶ್ವಮೇಧಯಾಗ’ದ ಕುದುರೆ ಬಿಟ್ಟಿರುವ ಮಾತುಗಳನ್ನಾಡಿದ್ದರು. ಆ ಕುದುರೆಯೇನಾದರೂ ಈ ಕಡೆಗೆ ಬಂದಿರಬಹುದೇ ಎಂದು ಊಹಿಸಿದೆ..

ಆದರೆ ನನ್ನ ಊಹೆ ತಪ್ಪಾಗಿತ್ತು. ಅದು ಚಿತ್ರಕಲಾ ವಿದ್ಯಾರ್ಥಿಗಳಿಗೆ ಸ್ಕೆಚ್ ಮಾಡಿಸಲು ಕರೆಸಲಾದ್ದ ನೈಜ ಕುದುರೆ ಇದಾಗಿತ್ತು.

ಪರಿಷತ್ತಿನ ಆವರಣದ ಪುಟ್ಟ ಮೈದಾನದಲ್ಲಿ ನಾಲ್ಕೈದು ಗಂಟೆ ರೂಪದರ್ಶಿಯಾಗಿ ನಿಂತಿದ್ದ ಈ ಹಯವದನ ವಿದ್ಯಾರ್ಥಿಗಳ ಕ್ಯಾನ್ವಾಸ್ಗಳಲ್ಲಿ ಅರಳಿನಿಂತ. ಸುತ್ತಲೂ ಹತ್ತಾರು ಕಿರಿಯ ಹಿರಿಯ ಕಲಾ ವಿದ್ಯಾರ್ಥಿಗಳು ಸಮೀಪದಲ್ಲೇ ನಿಂತು ತದೇಕ ಚಿತ್ತದಿಂದ ನೋಡಿದಾಗಲೂ ಕುದುರೆ ಹೆದರಲಿಲ್ಲ, ಬೆದರಲಿಲ್ಲ.

ಚಿತ್ರಕಲಾಕೃತಿಗಳು ನೈಜವಾಗಿ, ಸೃಜನಾತ್ಮಕವಾಗಿ ಮೂಡಿ ಬರಲು ರೂಪದರ್ಶಿಗಳನ್ನು ಕಲಾವಿದರು ಉಪಯೋಗಿಸುವುದು ಸಾಮಾನ್ಯ. ಆದರೂ ಪ್ರಾಣಿ ಪಕ್ಷಿಗಳನ್ನು ನೈಜವಾಗಿ ನಿಲ್ಲಿಸಿಕೊಳ್ಳುವುದು ಅಪರೂಪ.

ಚಿತ್ರಕಲಾ ಪರಿಷತ್ತಿನಲ್ಲಿ ರೂಪದರ್ಶಿ ಕುದುರೆ ಆಗೀಗ ಬರುವುದಾದರೂ ಚುನಾವಣೆಗಳ ಸಮಯದದಲ್ಲಿ ‘ಅಶ್ವಮೇಧಯಾಗ’ ಮಾತುಗಳ ಕಾರಣಕ್ಕಾಗಿ ಕೊಂಚ ಗೊಂದಲ ಉಂಟಾಗಿತ್ತು.

ನಗರದಲ್ಲಿ ಜಟಕಾ ಗಾಡಿಗಳು ಕಣ್ಮರೆಯಾಗಿದ್ದು, ಆ ಗಾಡಿಗಳಿಗೆ ಹೂಡುವ ಕುದುರೆಗಳೂ ಈಗ ಕಾಣುವುದು ಬಹಳ ವಿರಳ. ಜೂಜಿಗೆ ಉಪಯೋಗಿಸುವ ದುಬಾರಿ ಕುದುರೆಗಳು ರೂಪದರ್ಶಿಗಳಾಗಿ ಬಂದು ನಿಲ್ಲಲು ಆಗದು.

ಪ್ರಾಣಿ ಪಕ್ಷಿಗಳನ್ನು ರಚಿಸುವಾಗ ಅವುಗಳ ಅಂಗಾಂಗ, ಎತ್ತರ ಬಿತ್ತರಗಳು ಸಮಪ್ರಮಾಣದಲ್ಲಿದ್ದರೆ ಮಾತ್ರ ನೋಡಲು ಚಂದ. ಆದ್ದರಿಂದಲೇ ಚಿತ್ರಕಲೆಗೆ ಬುನಾದಿ ಒದಗಿಸುವ ನೈಜ ಪ್ರಾಣಿಗಳ ಮಾಡಲಿಂಗ್ ಈಗಲೂ ಇದೆ. ಚಿತ್ರಕಲಾ ಪರಿಷತ್ತಿನಲ್ಲಿ ಆಗಾಗ ನಡೆಯುವ ಕುದುರೆ ಮಾಡಲಿಂಗ್ಗಾಗಿ ಜಟಕಾದ ಮಾಲೀಕ ಬಾಷಾ ಈ ಕುದುರೆಯನ್ನು ಬಾಡಿಗೆ ಮೇಲೆ ಕೊಡುತ್ತಾರೆ. ಜೀವನೋಪಾಯವೂ ಆಯಿತು. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ವ್ಯಾಸಂಗವೂ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.