ಬಸವಣ್ಣ, ಬುದ್ಧ, ಗಾಂಧೀಜಿ, ಮದರ್ ತೆರೇಸಾ, ಅಂಬೇಡ್ಕರ್, ಕೆಂಪೇಗೌಡ, ಎ.ಪಿ.ಜೆ.ಅಬ್ದುಲ್ ಕಲಾಂ, ರಾಜ್‌ಕುಮಾರ್... ಹೀಗೆ ಸಮಾಜದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದವರು ಈ ನಗರದಲ್ಲಿದ್ದಾರೆ. ಅವರ ಪ್ರತಿಮೆಗಳಿಗೆ ಕಲಾವಿದರು ಜೀವ ತುಂಬುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಒಂದು ‘ಪ್ರತಿಮಾ ರಾಜಕಾರಣ’ವು ಸಾಂಸ್ಕೃತಿಕ ವಲಯದಲ್ಲಿ ವ್ಯಾಪಕವಾಗಿರುವುದು ಸ್ಪಷ್ಟ. ‘ಇಂಡಿಯನ್ ಫೌಂಡೇಷನ್ ಫಾರ್ ದಿ ಆರ್ಟ್ಸ್’ ಆಸಕ್ತಿಕರವಾದ ಸಂಶೋಧನೆಯೊಂದನ್ನು ಈ ನಿಟ್ಟಿನಲ್ಲಿ ನಡೆಸಿದೆ.