ನಮ್ಮ ಕೋಟೆ ನಮ್ಮ ಹೆಮ್ಮೆ
ರಾಯಚೂರು ಜಿಲ್ಲೆಯ ಕೋಟೆ-ಕೊತ್ತಲೆಗಳನ್ನು, ಶಾಸನ-ಸ್ಮಾರಕಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಜನಸಾಮಾನ್ಯರು, ಶಾಲಾ–ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು, ಇತಿಹಾಸ ಪ್ರಜ್ಞೆಯನ್ನು ಬೆಳೆಸಲು, ಕೋಟೆ -ಸ್ಮಾರಕಗಳನ್ನು ರಕ್ಷಿಸುವಲ್ಲಿ ಅವರ ಜವಾಬ್ದಾರಿ ಏನು ಎಂಬುದನ್ನು ತಿಳಿಸಲು ‘ನಮ್ಮ ಕೋಟೆ- ನಮ್ಮ ಹೆಮ್ಮೆ’ ಘೋಷಣೆಯೊಂದಿಗೆ ‘ರಾಯಚೂರು ಕೋಟೆಗಳ ಅಧ್ಯಯನ ಸಮಿತಿ’ ರಚನೆಯಾಗಿದೆ. ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕವಾಗಿ 500 ವರ್ಷವಾದ ಹಿನ್ನೆಲೆಯಲ್ಲಿ ಇದೇ ನವರಂಗ ದರವಾಜದ ಆವರಣದಲ್ಲಿ ಅದ್ದೂರಿ, ಅರ್ಥಪೂರ್ಣವಾದ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡದ್ದು ಸ್ಮರಣೀಯ.