ವಿಶ್ವದ ಅತ್ಯಂತ ದೊಡ್ಡ ಹಡುಗಾಗಿದ್ದ ಟೈಟಾನಿಕ್ ಈಗ ಇತಿಹಾಸ ಪುಟ ಸೇರಿದೆ. ಆದರೂ ಅದರ ಬಗ್ಗೆ ಆಗೊಂದು ಈಗೊಂದು ಕುತೂಹಲಕಾರಿ ವಿಚಾರಗಳು ಮುನ್ನಲೆಗೆ ಬರುತ್ತಲೇ ಇವೆ. ಟೈಟಾನಿಕ್ನಲ್ಲಿ ಬಳಕೆಯಾದ ಕನ್ನಡಿಯೊಂದು ಈಚೆಗೆ ₹ 7.13 ಲಕ್ಷಕ್ಕೆ ಹರಾಜಾಗಿಟ್ಟಿರುವ ಸುದ್ದಿ ಸದ್ದು ಮಾಡುತ್ತಿದೆ.

ಟೈಟಾನಿಕ್ ಹಡುಗಿನ ದುರಂತವನ್ನು ‘ಟೈಟಾನಿಕ್’ ಹೆಸರಿನಲ್ಲಿಯೇ ಸಿನಿಮಾ ರೂಪಕ್ಕಿಳಿಸಿ ತೆರೆಗೆ ತರಲಾಗಿತ್ತು. ಟೈಟಾನಿಕ್ ಎಂದರೆ, ಆ ಸಿನಿಮಾದ ನಾಯಕ, ನಾಯಕಿ ಥಟ್ಟನೆ ನೆನಪಿಗೆ ಬರುತ್ತಾರೆ. ಆದರೆ, ಆ ಹಡುಗಿನ ಕ್ಯಾಪ್ಟನ್ ಬಗ್ಗೆ ಬಹುತೇಕರಿಗೆ ಗೊತ್ತೇ ಇಲ್ಲ.

ಎಡ್ವರ್ಡ್ ಜಾನ್ ಸ್ಮಿತ್ ಆ ಹಡುಗಿನ ಕ್ಯಾಪ್ಟನ್. ದುರಂತ ಸಂಭವಿಸಿದ ವೇಳೆ ಹಡುಗಿನಲ್ಲಿ ಸಿಲ್ವರ್ ಕೋಟೆಡ್ ಕನ್ನಡಿಯೊಂದಿತ್ತು. ಜಾನ್ ಸ್ಮಿತ್ಗೆ ಆ ಕನ್ನಡಿಯೆಂದರೆ ಬಲುಪ್ರೀತಿ. ದುರಂತದಲ್ಲಿ ಕ್ಯಾಪ್ಟನ್ ಮಡಿದ ಬಳಿಕ ಅವರ ಆತ್ಮ ಆ ಕನ್ನಡಿಯೊಳಗೆ ಸೇರಿಕೊಂಡಿದೆಯಂತೆ.

ವಿಶೇಷ ಎಂದರೆ, ಪ್ರತಿ ವರ್ಷ ಏಪ್ರಿಲ್ 14 ರಂದು (ಟೈಟಾನಿಕ್ ದುರಂತ ಸಂಭವಿಸಿದ ದಿನ) ಕ್ಯಾಪ್ಟನ್ ಆತ್ಮ ಆ ಕನ್ನಡಿಯೊಳಗೆ ಸೇರಿ, ಇತರರಿಗೆ ಅವರ ಮುಖ ಕಾಣುತ್ತದೆಯಂತೆ.

ಈ ಅಂತೆ ಕಂತೆ ಹುಟ್ಟಿಕೊಂಡ ಬಳಿಕ ಆ ಕನ್ನಡಿ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಿದೆ. ಹೀಗಾಗಿ, ಆ ಕನ್ನಡಿಯನ್ನು ಈಚೆಗೆ ಹರಾಜಿಗೆ ಇಡಲಾಗಿದೆ. ಭಾರಿ ಮೊತ್ತವನ್ನೂ ಅದಕ್ಕೆ ನಿಗದಿ ಮಾಡಲಾಗಿದೆ. ಸಾಧ್ಯವಾದರೆ, ಎಡ್ವರ್ಡ್ ಜಾನ್ ಸ್ಮಿತ್ ಅವರ ಮುಖವನ್ನು ಆ ಕನ್ನಡಿಯಲ್ಲಿ ನೋಡಬಯಸುವವರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅದನ್ನು ಖರೀದಿಸಿ, ಅವರ ಆತ್ಮವನ್ನು ಮುಂದಿನ ವರ್ಷ ಏಪ್ರಿಲ್ 14ರಂದು ನೋಡಬಹುದಂತೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.