ಮಹಾತ್ಮ ಗಾಂಧಿ ಅವರು ಬದುಕಿದ್ದಾಗ ಅವರದೊಂದು ಅಂಚೆ ಚೀಟಿ ಹೊರತರುವ ಪ್ರಯತ್ನಗಳು ಸಫಲವಾಗಲಿಲ್ಲ. ಆದರೆ ಗಾಂಧಿ ಕಣ್ಮರೆಯಾಗಿ ದಶಕಗಳೇ ಉರುಳಿದರೂ ಪ್ರಪಂಚದಲ್ಲಿ ಅವರ ನಗೆಮೊಗದ ಚಿತ್ರಗಳನ್ನು ಹೊತ್ತ ಅಂಚೆಚೀಟಿಗಳು ಹೊರಬರುವುದು ನಿಂತೇ ಇಲ್ಲ!

ಬಾಪೂಗೆ ಜನ್ಮಕೊಟ್ಟ ಭಾರತದಲ್ಲಿ ಐವತ್ತಕ್ಕೂ ಹೆಚ್ಚು ಗಾಂಧೀ ನೆನಪಿನ ಅಂಚೆ ಚೀಟಿಗಳು ಪ್ರಕಟವಾಗಿದ್ದರೆ, ಅಹಿಂಸೆ–ಸತ್ಯಾಗ್ರಹ ಮೊದಲಾದ ವಿನೂತನ ಪರಿಕಲ್ಪನೆಗಳನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದ ಮಹಾತ್ಮರ ಗೌರವಾರ್ಥ ಬೇರೆ ಬೇರೆ ದೇಶಗಳು ಹೊರತಂದಿರುವ ಅಂಚೆ ಚೀಟಿಗಳ ಸಂಖ್ಯೆ 300ಕ್ಕೂ ಹೆಚ್ಚು.

ಆಂಗ್ಲರ ಅಟ್ಟಹಾಸದ ವಿರುದ್ಧ ಭಾರತೀಯರನ್ನು ನೈತಿಕ ಹೋರಾಟಕ್ಕೆ ಸಜ್ಜುಗೊಳಿಸಿದ ‘ಶಾಂತಿ ಸಂತ ಬಾಪು’ ಅವರಿಗೆ ಗೌರವ ಸೂಚಿಸಲು ಅಂಚೆಚೀಟಿ ಪ್ರಕಟಿಸಿದ ಮೊದಲ ಭಾರತೇತರ ದೇಶ ಅಮೆರಿಕಾ ಸಂಯುಕ್ತ ಸಂಸ್ಥಾನ. 1961ರ ಜನವರಿ 26ರಂದು ಭಾರತ ಗಣರಾಜ್ಯೋತ್ಸವ ಸಂದರ್ಭದಲ್ಲಿ ಗಾಂಧೀಜಿ ಅವರ ಅಂಚೆಚೀಟಿಯನ್ನು ಬಿಡುಗಡೆಗೊಳಿಸಿತು.

ಮಹಾತ್ಮಗಾಂಧಿ ಅವರ ಜನ್ಮ ಶತಮಾನೋತ್ಸವ ವರ್ಷವಾದ 1969ರಲ್ಲಿ, ಅಕ್ಟೋಬರ್ 2ರಂದು ಬಾಪು ಅಂಚೆ ಚೀಟಿಗಳನ್ನು ಹೊರತರುವ ಮೂಲಕ ಗೌರವ ಸೂಚಿಸಿದ ದೇಶಗಳು 40. ಮಾನವ ಹಕ್ಕು ಹೋರಾಟದಲ್ಲಿ ಇಡೀ ಜಗತ್ತಿಗೆ ಹೊಸ ಮಾರ್ಗವನ್ನು ಹಾಕಿಕೊಟ್ಟವರು ಗಾಂಧಿ. ಅಂಚೆಚೀಟಿಗಳ ಮಟ್ಟಿಗೂ ಬಾಪು ದೇಶ, ಭಾಷೆ ಮೊದಲಾದ ಎಲ್ಲೆಗಳನ್ನು ಮೀರಿ ನಿಂತಿದ್ದಾರೆ.

ಎಲ್ಲೆಲ್ಲು ಗಾಂಧಿ...

ಗಾಂಧಿ ಅವರಿಗೆ ಪೋಸ್ಟ್ ಕಾರ್ಡ್ ಬಹುಪ್ರಿಯ. ಜನಸಂಪರ್ಕಕ್ಕಾಗಿ ಅವರು ಹೆಚ್ಚು ಬಳಸುತ್ತಿದ್ದ ಕಾರ್ಡುಗಳಲ್ಲಿ ಅವರದೇ ಚಿತ್ರ ಮೂಡಿಬಂದಿದ್ದು ಮೊಟ್ಟ ಮೊದಲಿಗೆ ಪೊಲೆಂಡ್ ದೇಶದಲ್ಲಿ. ಮಹಾತ್ಮನ ನೆನಪಿನಲ್ಲಿ ಪ್ರಥಮ ಅಂಚೆ ಲಕೋಟೆ ಪ್ರಕಟಿಸಿದ ಮೊದಲ ಪರದೇಶ ರೋಮಾನಿಯಾ.

ಅಕ್ಟೋಬರ್ 2ರ ಗಾಂಧಿ ಜನ್ಮದಿನವನ್ನು ‘ಅಹಿಂಸಾ’ ದಿನವನ್ನಾಗಿ ವಿಶ್ವಸಂಸ್ಥೆ ಘೋಷಿಸಿದೆ. 2009ರ ಬಾಪು ಹುಟ್ಟಿದ ದಿನದಂದು ಗಾಂಧಿ ಗೌರವಾರ್ಥ ವಿಶ್ವಸಂಸ್ಥೆ ಅಂಚೆಚೀಟಿಯನ್ನು ಹೊರತಂದಿದ್ದೊಂದು ವಿಶೇಷ.

ಗಾಂಧಿ ಕೇವಲ ಸ್ವಾತಂತ್ರ್ಯ ಹೋರಾಟಗಾರರಾಗಿರಲಿಲ್ಲ. ಅವರೊಬ್ಬ ಬಹುಮುಖಿ ಸಾಮಾಜಿಕ ಚಿಂತಕರು. ಬಹುಶಃ ಇದೇ ಕಾರಣಕ್ಕಾಗಿ ಅವರ ನೆನಪಿನಲ್ಲಿ ತರುತ್ತಿರುವ ಅಂಚೆಚೀಟಿಗಳು ವೈವಿಧ್ಯಮಯ. ಮಂದಹಾಸದ ಬಾಪು ಚಿತ್ರ ಹಲವಾರು ಅಂಚೆಚೀಟಿಗಳಲ್ಲಿ ಸಾಮಾನ್ಯವಾದ ಬಿಂಬವಾಗಿದ್ದರೂ– ಚರಕ, ಮಕ್ಕಳು, ಗ್ರಾಮೀಣ ಪರಿಸರ, ಮೊದಲಾದವು ಸಾಂಕೇತಿಕವಾಗಿ ಆ ಅಂಚೆಚೀಟಿಗಳಲ್ಲಿ ಸ್ಥಾನ ಪಡೆದುಕೊಂಡಿವೆ.

ಮಹಾತ್ಮರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಭೂತಾನ್ ಎರಡು ಅಂಚೆ ಚೀಟಿಗಳನ್ನು, ಸೋಮಾಲಿಯಾ ಮೂರು ಅಂಚೆಚೀಟಿಗಳನ್ನು ಪ್ರಕಟಿಸಿದವು. ಈ ಐದೂ ಅಂಚೆಚೀಟಿಗಳು ಮುದ್ರಣಗೊಂಡಿದ್ದು ಭಾರತದ ನಾಸಿಕ್ ಸೆಕ್ಯೂರಿಟಿ ಮುದ್ರಣಾಲಯದಲ್ಲಿ.
ಭಾರತದ ಮೊಹರು!

ಸ್ವದೇಶಿ ಆಂದೋಲನದ ಹರಿಕಾರ ಗಾಂಧೀಜಿ ಅವರ ನೆನಪಿನಲ್ಲಿ ಭಾರತ ಪ್ರಕಟಿಸಿದ ಮೊದಲ ಅಂಚೆಚೀಟಿ (1948) ಮುದ್ರಣಗೊಂಡಿದ್ದು ಸ್ವಿಜರ್ಲೆಂಡ್ನಲ್ಲಿ. ಆ ಸಂದರ್ಭದಲ್ಲಿ ಭಾರತದಲ್ಲಿ ಮುದ್ರಣದ ಅತ್ಯಾಧುನಿಕ ಸಲಕರಣೆಗಳ ಅಲಭ್ಯತೆಯೇ ಇದಕ್ಕೆ ಕಾರಣ. ಹೊರದೇಶದಲ್ಲಿ ಮುದ್ರಣವಾದ ಭಾರತದ ಏಕೈಕ ಅಂಚೆಚೀಟಿ ಗಾಂಧಿ ಅವರದು ಮಾತ್ರ.

ಬೇರೆ ಬೇರೆ ದೇಶಗಳು ತಾವು ಹೊರತರುವ ವಿಶೇಷ ಅಂಚೆಚೀಟಿ ಸರಣಿಗಳಲ್ಲಿ ಬಾಪು ಅವರಿಗೆ ಗೌರವ ನೀಡಿವೆ. ‘ಜಾಗತಿಕ ಶಾಂತಿದೂತರು’, ‘ಅಹಿಂಸೆಯ ಮುಂದಾಳುಗಳು’, ‘ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರು’ ಮೊದಲಾದ ಶೀರ್ಷಿಕೆಗಳಲ್ಲಿ ಹೊರಬಂದಿರುವ ಅಂಚೆಚೀಟಿಗಳಲ್ಲಿ ಗಾಂಧೀಜಿ ಪ್ರಮುಖವಾಗಿ ಕಂಡುಬಂದಿದ್ದಾರೆ.

ಬೇರೆ ಬೇರೆ ಸಂದರ್ಭಗಳಲ್ಲೂ ವಿದೇಶಗಳಲ್ಲಿ ಗಾಂಧಿ ಅಂಚೆಚೀಟಿಗಳು ಪ್ರಕಟಗೊಳ್ಳುವ ಪರಿಪಾಠ ನಿರಂತರವಾಗಿ ನಡೆಯುತ್ತಲೇ ಇದೆ. ಬ್ರಿಟನ್ನಲ್ಲಿ ‘ಡಿಸೈರ್ಮೆಂಟ್’ ವಾರಾಚರಣೆ ಜರುಗಿದಾಗ ಬಾಪು ಅಂಚೆಚೀಟಿಗಳು ಬಿಡುಗಡೆಯಾದವು. ಭಾರತದ ಪ್ರಧಾನ ಮಂತ್ರಿಗಳು ಉಗಾಂಡ ಪ್ರವಾಸ ಕೈಗೊಂಡ ಸಮಯದಲ್ಲಿ ಉಗಾಂಡ ಸರ್ಕಾರ ಗಾಂಧಿ ಚಿತ್ರವುಳ್ಳ ಅಂಚೆಚೀಟಿಗಳನ್ನು ಪ್ರಕಟಗೊಳಿಸಿತು. ಅಮೆರಿಕಾದ ಚಿಕಾಗೋದಲ್ಲಿ ರಸ್ತೆಯೊಂದಕ್ಕೆ ಮಹಾತ್ಮಗಾಂಧಿ ಮಾರ್ಗವೆಂದು ಹೆಸರಿಟ್ಟಾಗ ಅಮೆರಿಕಾ ಸರ್ಕಾರ ಬಾಪು ಸ್ಮಾರಕ ಅಂಚೆ ಚೀಟಿಗಳನ್ನು ಹೊರತಂದಿತು.

ಪ್ರಚಲಿತವಿರುವ ಎಲ್ಲಾ ಬಗೆಯ ಅಂಚೆ ದಸ್ತಾವೇಜುಗಳಲ್ಲಿ ಬಾಪೂಜಿ ಗೌರವ ಗಳಿಸಿಕೊಂಡಿದ್ದಾರೆ. ಅದು ಭಾರತಕ್ಕೆ ಸೀಮಿತವಾಗಿಲ್ಲ. ಅಂಚೆಚೀಟಿ, ಪೋಸ್ಟ್ ಕಾರ್ಡ್, ಲಕೋಟೆ, ಪೋಸ್ಟ್ ಮಾರ್ಕ್ಗಳಲ್ಲಿ ಗಾಂಧಿ ಮುಗುಳ್ನಗೆಯನ್ನು ಕಾಣಬಹುದು. ಹಿಂದಿನ ಬರ್ಮಾ (ಮಯನ್ಮಾರ್) ಬಾಪು ಕುರಿತ ಪೋಸ್ಟ್ ಮಾರ್ಕ್ ಹೊರತಂದ ಪ್ರಥಮ ವಿದೇಶ. ಆ ಬಳಿಕ ಚೆಕೋಸ್ಲಾವಾಕಿಯಾ, ಲಕ್ಷಂಬರ್ಗ್ ಮೊದಲಾದ ದೇಶಗಳು ಬಾಪೂಜಿ ಪೋಸ್ಟ್ ಮಾರ್ಕ್ ಬಿಡುಗಡೆ ಮಾಡಿದವು.

ಭಾರತ ಹಾಗೂ ಭಾರತೀಯರನ್ನು ಕುರಿತಂತೆ ಬೇರೆ ಬೇರೆ ದೇಶಗಳು ಈವರೆಗೆ 500ಕ್ಕೂ ಹೆಚ್ಚು ಅಂಚೆಚೀಟಿಗಳನ್ನು ಪ್ರಕಟಿಸಿವೆ. ಅವುಗಳಲ್ಲಿ 300 ಅಂಚೆಚೀಟಿಗಳು ಮಹಾತ್ಮರನ್ನು ಕುರಿತದ್ದು. ಇಂಗ್ಲಿಷ್ ಅಕ್ಷರ ಮಾಲೆಯ ಅಕ್ಷರಗಳಿಂದ ಆರಂಭವಾಗುವ ಎಲ್ಲಾ ದೇಶಗಳಲ್ಲೂ ಮಹಾತ್ಮಗಾಂಧಿ ಅಂಚೆಚೀಟಿಗಳು ಹೊರಬಂದಿವೆ. (‘ಎ’ಯಿಂದ ‘ಜಡ್’ವರೆಗೆ) ಅದು ಆಂಟಿಕ್ಯೂನಿಂದ ಶುರುವಾಗಿ ಜಾಂಬಿಯಾವರೆಗೆ ಸಾಗುತ್ತದೆ. ಜಗತ್ತಿನ ನೂರಕ್ಕೂ ಹೆಚ್ಚು ದೇಶಗಳಲ್ಲಿ ಅಂಚೆಚೀಟಿ ಗೌರವ ಪಡೆದುಕೊಂಡ ಏಕಮಾತ್ರ ವ್ಯಕ್ತಿ ನಮ್ಮ ಗಾಂಧೀಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.