ಬೆಳವಾಡಿಯ ಹಳ್ಳಿಯ ಮುಗ್ಧನೊಬ್ಬ ಖ್ಯಾತ ವೈದ್ಯನಾಗಿ ಬೆಳೆದ ಸಾಧನೆಯನ್ನು ಕಥನ ರೂಪದಲ್ಲಿ ಕಟ್ಟಿಕೊಟ್ಟಿದೆ ಈ ಕೃತಿ. ಡಾ.ಬಿ.ಟಿ. ರುದ್ರೇಶ್ ಅವರ ಬದುಕನ್ನು ಹಂತ ಹಂತವಾಗಿ ನಿರೂಪಿಸಿದ್ದಾರೆ ಲೇಖಕರು.

ಲೇಖಕರೇ ಆರಂಭದಲ್ಲಿ, ‘ಇದು ರುದ್ರೇಶ್ ವ್ಯಕ್ತಿಚಿತ್ರಣವೂ ಅಲ್ಲ, ಯೋಗ್ಯತಾ ನಿರ್ಣಯ ಅಥವಾ ಜೀವನ ಚರಿತ್ರೆಯೂ ಅಲ್ಲ. ಅವೆಲ್ಲವನ್ನೂ ಒಳಗೊಂಡ ಸಮಕಾಲೀನ ವೈದ್ಯಕೀಯ ವ್ಯವಸ್ಥೆಯ ಒಂದು ದಾಖಲೆ’ ಎಂದಿದ್ದಾರೆ.

ರುದ್ರೇಶ್ ಅವರ ಬಗೆಗೆ ಕುತೂಹಲ ಇರುವವರಿಗೆ ಇದೊಂದು ಪುಟ್ಟ ಬೆಳಕಿನ ಕಿಂಡಿ ಅಷ್ಟೆ. ಕೃತಿಯಲ್ಲಿ ವಿವಿಧ ಕಾಲಘಟ್ಟಗಳನ್ನು ಅಧ್ಯಾಯದ ರೂಪದಲ್ಲಿ ಹೇಳಿದ್ದಾರೆ. ರುದ್ರೇಶ್ ಒಡನಾಡಿಗಳಿಂದ ಮಾಹಿತಿ ಸಂಗ್ರಹ, ಪೂರಕ ಸಾಹಿತ್ಯಗಳ ಅಧ್ಯಯನ ಇಲ್ಲಿದೆ. ಹಾಗಾಗಿ ಯಾವುದೇ ಅಧ್ಯಾಯದಿಂದಲೂ ಕೃತಿಯ ಓದು ಆರಂಭಿಸಬಹುದು.

ಉದಾಹರಣೆಗಳು, ಘಟನಾವಳಿಗಳು, ಚಿತ್ರಗಳಿಂದಾಗಿ ರುದ್ರೇಶ್ ಬದುಕಿನ ಕಥನ ಹೇಳಲು ಇಲ್ಲಿ ಗರಿಷ್ಠ ಪ್ರಯತ್ನ ನಡೆದಿದೆ. ವೈದ್ಯಕೀಯ ಕ್ಷೇತ್ರಕ್ಕೆ ಈ ಸಾಧಕ ನೀಡಿರುವ ಕೊಡುಗೆಗಳು ಪುಟ ಪುಟದಲ್ಲೂ ಇಣುಕುಹಾಕಿವೆ.

ಕೃತಿ: ಸಾಧನೆಯೇ ಬದುಕು

ಲೇ: ಡಾ.ಬೆಳವಾಡಿ ಮಂಜುನಾಥ

ಪ್ರ: ಮಡಿಲು ಪ್ರಕಾಶನ, ಬೆಂಗಳೂರು

ಸಂ: 080 26797575

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.