ಭಾರತೀಯ ಸಂಸತ್ತನ್ನು ಕುರಿತು, ಅದರ ವಿವಿಧ ಆಯಾಮಗಳನ್ನು ಹಿಡಿದಿಡುವ ವಿಶ್ಲೇಷಣಾತ್ಮಕ ಕೃತಿಗಳ ಕೊರತೆ ಕನ್ನಡದಲ್ಲಿದೆ. ಹಿರಿಯ ರಾಜಕಾರಣಿ ಬಿ.ಎಲ್.ಶಂಕರ್ ಮತ್ತು ರಾಜ್ಯಶಾಸ್ತ್ರಜ್ಞ ಪ್ರೊ.ವೆಲೇರಿಯನ್ ರೊಡ್ರಿಗಸ್ ಅವರು ಬರೆದಿರುವ ‘ದಿ ಇಂಡಿಯನ್ ಪಾರ್ಲಿಮೆಂಟ್– ಎ ಡೆಮಾಕ್ರಸಿ ಅಟ್ ವರ್ಕ್’ ಇಂಗ್ಲಿಷ್ ಮೂಲ ಕೃತಿಯ ಕನ್ನಡ ಅನುವಾದ ‘ಭಾರತದ ಸಂಸತ್ತು – ಒಂದು ಕಾರ್ಯನಿರತ ಪ್ರಜಾಪ್ರಭುತ್ವ’ ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಗಮನಾರ್ಹ ಪ್ರಯತ್ನವಾಗಿದೆ.

ಅನುವಾದ ಮಾಡಿರುವ ಪ್ರೊ.ಜೆ.ಎಸ್. ಸದಾನಂದ ಅವರು ಈ ಕೃತಿಯ ಆರಂಭದಲ್ಲೇ ಬರೆದಿರುವಂತೆ, ಇದು ಮೂರು ಹಂತಗಳಲ್ಲಿ 1950, 1970 ಮತ್ತು 1990ರ ದಶಕಗಳ ಹಂತದಲ್ಲಿ ಭಾರತೀಯ ಸಂಸತ್ತಿನ ಅನುಭವಗಳನ್ನು ಶೋಧಿಸುತ್ತದೆ. ಪಾಶ್ಚಾತ್ಯ ದೇಶಗಳ ಪ್ರಜಾಪ್ರಭುತ್ವದಿಂದ ಸಂಸತ್ತು ಪ್ರಭಾವಿತಗೊಂಡಿದ್ದರೂ, ಸ್ಥಳೀಯ ಸಂಸ್ಕೃತಿ, ಪರಿಸರವು ಅದರ ಕಾರ್ಯವೈಖರಿಯನ್ನು ಹೇಗೆ ವಿಶಿಷ್ಟಗೊಳಿಸಿದೆ ಎನ್ನುವುದು ಕೃತಿಯಿಂದ ತಿಳಿದುಬರುತ್ತದೆ.

ಇಂಥ ಬೃಹತ್ ಕೃತಿಯ ಅನುವಾದವೂ ಸುಲಭವಲ್ಲ. ರಾಜ್ಯಶಾಸ್ತ್ರ ವಿಷಯದಲ್ಲಿ ಪ್ರಾಧ್ಯಾಪಕರಾಗಿರುವ ಲೇಖಕರು ಮೂಲ ಇಂಗ್ಲಿಷ್ ಕೃತಿಯ ಆಶಯಕ್ಕೆ ಧಕ್ಕೆ ಬಾರದಂತೆ ಅನುವಾದಕ್ಕೆ ಶ್ರಮ ಪಟ್ಟಿರುವುದು ಕಂಡುಬರುತ್ತಿದೆ. ಸಾಕಷ್ಟು ಕೋಷ್ಠಕಗಳೂ ಇವೆ. ಆದರೆ ಕೃತಿಯ ಕೆಲವು ಕಡೆ ಭಾಷೆಯನ್ನು ಇನ್ನೂ ಸರಳವಾಗಿ ಬಳಸಬಹುದಿತ್ತು ಎನಿಸುತ್ತದೆ. ಸಂಕೀರ್ಣ ಪದಗಳ ಅನುವಾದ ಸಂದರ್ಭದಲ್ಲಿ ಇಂಗ್ಲಿಷ್ ಮೂಲ ಪದಗಳನ್ನು ಆವರಣದಲ್ಲಿ ಬಳಸಬಹುದಿತ್ತೇನೊ? ಇದರಿಂದ ಓದಿಗೆ ತೊಂದರೆಯಾಗುತ್ತಿರಲಿಲ್ಲ.

ಸಂಸತ್ತಿನ ಬಗ್ಗೆ ತಿಳಿದುಕೊಳ್ಳಬಯಸುವ ಆಸಕ್ತರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಈ ಕೃತಿ ಉಪಯುಕ್ತ. ಅಧ್ಯಾಯಗಳು ಮಾಹಿತಿಪೂರ್ಣವಾಗಿವೆ. ಸಂಸತ್ತಿನ ರಚನೆ, ಲೋಕಸಭೆಯಲ್ಲಿ ಬದಲಾಗುತ್ತಿರುವ ಸಾಮಾಜಿಕ ರಚನೆ, ಪ್ರತಿನಿಧಿತ್ವದ ಬದಲಾಗುತ್ತಿರುವ ಪರಿಕಲ್ಪನೆ, ಚರ್ಚೆಗಳು, ಕಾಳಜಿಗಳು, ಸಂಸತ್ತು– ನ್ಯಾಯಾಂಗದ ಸಂಬಂಧ ಜೊತೆಗೆ ಆಂಗ್ಲ ಭಾಷೆಯಿಂದ ಪ್ರಾದೇಶಿಕ ಭಾಷೆಗಳ ಮೇಲಾಗುತ್ತಿರುವ ಸ್ಥಿತ್ಯಂತರ, ರಾಷ್ಟ್ರೀಯ ಅಸ್ಮಿತೆಯಿಂದ ಬಹುತ್ವದ ಅಸ್ಮಿತೆಯೆಡೆಗೆ ಮೊದಲಾದ ವಿಷಯಗಳನ್ನು ವಿವಿಧ ಅಧ್ಯಾಯಗಳಲ್ಲಿ ಪ್ರಸ್ತುತಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.