ಒಲವೇ ನಮ್ಮ ಬದುಕು | ಮೀನಾ ಮೈಸೂರು ಬರಹ; ಹರಿಯುತ್ತಿದೆ ಅನುರಾಗದ ನದಿ
ಪ್ರೀತಿ, ಪ್ರೇಮ, ಪ್ರಣಯ, ಎಂಬ ಪದಗಳು ಎಂದಿಗೂ ಅಪ್ಯಾಯಮಾನವೇ. ಕೆಲವೊಮ್ಮೆ ಅರ್ಥಹೀನವೆನಿಸಿದರೂ ಪ್ರೀತಿ, ವಿಶ್ವಾಸ, ನಂಬಿಕೆಗಳಿಲ್ಲದೆ ಬದುಕು ಅರ್ಥಹೀನ. ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ’ ಎಂಬ ಕವಿವಾಣಿ ಅಕ್ಷರಶಃ ಸತ್ಯ. ಕೆಲವರ ಪ್ರೀತಿ ಬದುಕನ್ನು ಅರಳಿಸುತ್ತದೆ. ಕೆಲವರನ್ನು ಮುರುಟಿಸುತ್ತದೆ. ಮತ್ತೆ ಕೆಲವರನ್ನು ಪ್ರೀತಿಯ ಹೆಸರಲ್ಲಿ ಬಂಧಿಸಿ, ಸೆರೆಯಲ್ಲಿರಿಸುತ್ತದೆ.Last Updated 11 ಫೆಬ್ರುವರಿ 2023, 19:30 IST