ಆಧುನಿಕ ನಗರದ ಪಾರಂಪರಿಕ ಚಿತ್ರಣ
ಸುಕನ್ಯಾ ಅವರ ಅನುವಾದಿತ ಕಥೆಗಳನ್ನು ಓದುವಾಗ ಬೇಡ ಬೇಡವೆಂದರೂ ಕರ್ನಾಟಕದ ವರ್ತಮಾನ ಕಣ್ಣೆದುರು ಸುಳಿಯುತ್ತದೆ. ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಕಾಲೇಜಿನವರೇ ಆದ ಐವರು ವಿದ್ಯಾರ್ಥಿಗಳು ಅತ್ಯಾಚಾರ ಮಾಡಿರುವ ಘಟನೆ ಒಂದೆಡೆಯಾದರೆ, ಅಧಿಕಾರ–ಹಣದ ಲಾಲಸೆಯಲ್ಲಿ ಕರ್ನಾಟಕದ ರಾಜಕಾರಣ ಸಂಪೂರ್ಣ ಬೆತ್ತಲಾಗಿ ನಿರ್ಲಜ್ಜೆಯಿಂದ ನಿಂತಿರುವ ಸನ್ನಿವೇಶ ಮತ್ತೊಂದೆಡೆ. ನಾವು ಬದುಕುತ್ತಿರುವ ಸಾಮಾಜಿಕ ಸಂದರ್ಭ ಎಂತಹದ್ದು ಎನ್ನುವುದನ್ನು ಸೂಚಿಸುವಂತಿರುವ ಈ ಎರಡು ಸನ್ನಿವೇಶಗಳ ಚಿತ್ರಣದ ರೂಪದಲ್ಲಿ ‘ಬರ್ತೀಯಾ?...’ ಕೃತಿಯನ್ನು ಓದಿಕೊಳ್ಳಲಿಕ್ಕೆ ಸಾಧ್ಯವಿದೆ.Last Updated 13 ಜುಲೈ 2019, 19:45 IST