ನವದೆಹಲಿ: ‘ಎಂಜಿ ಮೋಟಾರ್ಸ್ ಇಂಡಿಯಾ’ ಕಂಪನಿ ಬುಧವಾರ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಎಂಜಿ ಕಾಮೆಟ್ (MG Comet) ಎಂಬುದು ಹೊಸ ಇವಿ ಕಾರ್ ಆಗಿದ್ದು, ಇದರ ಆರಂಭಿಕ ಬೆಲೆ ಎಕ್ಸ್ ಶೋ ರೂಂ ₹ 7.98 ಲಕ್ಷ ಎಂದು ಕಂಪನಿ ತಿಳಿಸಿದೆ.

ಎಂಜಿ ಕಾಮೆಟ್ ಎಂಜಿ ಮೋಟರ್ಸ್‌ನ ಎರಡನೇ ಇವಿ ಕಾರ್ ಆಗಿದ್ದು ಇದಕ್ಕೂ ಮುನ್ನ ₹24 ಲಕ್ಷ ಬೆಲೆಯ ZS ಇವಿ ಈಗಾಗಲೇ ಮಾರುಕಟ್ಟೆಯಲ್ಲಿದೆ. ಈ ಕಾಮೆಟ್ ಇವಿ ಕಾರು, ಟಾಟಾ ಮೋಟರ್ಸ್‌ನ ಟಿಯಾಗೊ ಇವಿ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ ಎನ್ನಲಾಗಿದೆ. ಕಾಮೆಟ್ ಕೇವಲ ಒಂದು ಕಾರಲ್ಲ, ಅದು ಹೊಸ ಅನುಭೂತಿ ನೀಡಲಿದೆ ಎಂದು ಎಂಜಿ ಮೋಟಾರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಚಬ್ಬಾ ಹೇಳಿದ್ದಾರೆ.

ಕಾಮೆಟ್ ಒಂದು ಪರಿಪೂರ್ಣ ಜಿಎಸ್ಇವಿ ಆಗಿದ್ದು, ಜಾಗತಿಕವಾಗಿ 10 ಲಕ್ಷ ಗ್ರಾಹರಕನ್ನು ತ್ವರಿತವಾಗಿ ಕಂಡಿದೆ ಎಂದು ಚಬ್ಬಾ ಹೇಳಿದ್ದಾರೆ.

ಕಾಮೆಟ್ 17.3 KWH lithium-ion ಬ್ಯಾಟರಿ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 230 ಕಿಮೀ ಪ್ರಯಾಣಿಸಬಹುದು. ಹ್ಯಾಚ್‌ಬ್ಯಾಕ್ ಮಾದರಿಯ ಈ ಕಾರಿನಲ್ಲಿ ಮುಂದುಗಡೆ 2 ಏರ್‌ಬ್ಯಾಗ್ ಇರಲಿವೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.