ನವದೆಹಲಿ: ಎಂಜಿ ಮೋಟರ್ ಇಂಡಿಯಾ ಕಂಪನಿಯು ಮಾರುಕಟ್ಟೆಗೆ ಬಿಡುಗಡೆ ಮಾಡಲಿರುವ ಮಧ್ಯಮ ಗಾತ್ರದ ಎಸ್ಯುವಿ ‘ಆಸ್ಟರ್’ ಅನ್ನು ಬುಧವಾರ ಅನಾವರಣ ಮಾಡಿದೆ.

ದೀಪಾವಳಿಯ ಹೊತ್ತಿಗೆ ಈ ಎಸ್ಯುವಿ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ತಿಳಿಸಿದೆ. ವೈಯಕ್ತಿಕ ಎ.ಐ. (ಕೃತಕ ಬುದ್ದಿಮತ್ತೆ) ಸಹಾಯಕ ಮತ್ತು ಸ್ವಯಂಚಾಲಿತ ತಂತ್ರಜ್ಞಾನದ ಎರಡನೇ ಹಂತವನ್ನು ಇದು ಒಳಗೊಂಡಿರಲಿದೆ ಎಂದು ಹೇಳಿದೆ.

‘ನಾವು ಗ್ರಾಹಕರ ಮನಸ್ಸಿನಲ್ಲಿ ಉಳಿಯಬೇಕಾದರೆ ವಿಭಿನ್ನವಾಗಿ ಏನನ್ನಾದರೂ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಚಿಂತನಾ ಪ್ರಕ್ರಿಯೆ ನಡೆದಿತ್ತು’ ಎಂದು ಎಂಜಿ ಮೋಟರ್ ಇಂಡಿಯಾದ ಅಧ್ಯಕ್ಷ ರಾಜೀವ್ ಛಾಬಾ ತಿಳಿಸಿದ್ದಾರೆ. ‘ತಂತ್ರಜ್ಞಾನ ಮತ್ತು ಆವಿಷ್ಕಾರವು ನಮ್ಮ ಪ್ರಮುಖ ಆಧಾರಸ್ತಂಭಗಳು’ ಎಂದು ಅವರು ಹೇಳಿದ್ದಾರೆ.

ಆಸ್ಟರ್ ಎಸ್ಯುವಿಯ ಡ್ಯಾಷ್ಬೋರ್ಡ್ನಲ್ಲಿ ವೈಯಕ್ತಿಕ ಎಐ ಅಸಿಸ್ಟಂಟ್ ರೊಬೊ ಇರಲಿದೆ. ಭಾವನೆಗಳನ್ನು ಇದು ವ್ಯಕ್ತಪಡಿಸಬಲ್ಲದು ಮತ್ತು ಧ್ವನಿಗಳನ್ನು ಹೊರಡಿಸಬಲ್ಲದು. ವಿಕಿಪೀಡಿಯಾ ಮೂಲಕ ಪ್ರತಿ ವಿಷಯದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತದೆ. ಅಮೆರಿಕದ ಸ್ಟಾರ್ ಡಿಸೈನ್ ಎನ್ನುವ ಕಂಪನಿಯು ಇದನ್ನು ವಿನ್ಯಾಸಗೊಳಿಸಿದೆ ಎಂದು ಎಂಜಿ ಮೋಟರ್ ಕಂಪನಿ ತಿಳಿಸಿದೆ.

ಚಾಲನಾ ಸುರಕ್ಷತೆ ಮತ್ತು ಆರಾಮದಾಯಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಅದರಲ್ಲಿಯೂ ಮುಖ್ಯವಾಗಿ ಭಾರತದ ಸಂಚಾರ ಪರಿಸ್ಥಿತಿಗಳಿಗೆ ಹೊಂದುವಂತೆ ಸಿದ್ಧಪಡಿಸಲಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.