ಮೊದಲೆಲ್ಲಾ ಲಾಕ್‌ಡೌನ್ ಕಾರಣದಿಂದ ಮನೆಯ ಒಳಗೇ ಇರುತ್ತಿದ್ದೆವು. ಆದರೆ ಈಗ ಹಾಗಲ್ಲ. ಅನಿವಾರ್ಯ ಕೆಲಸಗಳಿಗೆ ಹೊರಗಡೆ ಹೋಗಲೇಬೇಕು. ಆ ಕಾರಣಕ್ಕೆ ಅನೇಕರು ಸುರಕ್ಷತೆಯ ದೃಷ್ಟಿಯಿಂದ ತಮ್ಮ ಸ್ವಂತ ವಾಹನಗಳನ್ನು ಬಳಸುತ್ತಿದ್ದಾರೆ. ಅದರಲ್ಲೂ ಅನೇಕ ಮಂದಿ ಕಾರಿನಲ್ಲಿ ಪ್ರಯಾಣ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಕಾರಿನಲ್ಲಿ ಪ್ರಯಾಣ ಮಾಡುವುದು ಸುರಕ್ಷತೆಯ ದೃಷ್ಟಿಯಿಂದ ಉತ್ತಮ ನಿಜ. ಆದರೆ ಕಾರಿನಿಂದ ಇಳಿದ ಮೇಲೆ ಎಲ್ಲೆಲ್ಲೋ ತಿರುಗಾಡುತ್ತೇವೆ, ಏನೇನೊ ಮುಟ್ಟಿರುತ್ತೇವೆ. ಮತ್ತೆ ಹಾಗೇ ಕಾರಿನಲ್ಲಿ ಬಂದು ಕುಳಿತಕೊಳ್ಳುತ್ತೇವೆ.

ಹಾಗಾಗಿ ಈ ಸಮಯದಲ್ಲಿ ಸ್ವಂತ ಕಾರಿನಲ್ಲಿ ಪ್ರಯಾಣ ಮಾಡುವುದು ಕೂಡ ಅಪಾಯವೇ ಹಾಗೂ ಸುರಕ್ಷಿತವೂ ಅಲ್ಲ. ಆ ಕಾರಣಕ್ಕೆ ಕಾರಿನ ಒಳಗೆ ಸ್ಯಾನಿಟೈಸ್ ಮಾಡುವುದು ಅತೀ ಅಗತ್ಯ. ಪ್ರತಿನಿತ್ಯ ಕಾರಿನಲ್ಲಿ ಪ್ರಯಾಣ ಮಾಡುವವರಾದರೆ ನೀವು ಬಳಸುವ ವಸ್ತುಗಳನ್ನು ಸ್ಯಾನಿಟೈಸ್ ಮಾಡುವುದನ್ನು ಮರೆಯದಿರಿ. ಹಾಗಾದರೆ ಕೊರೊನಾ ಸೋಂಕು ಬಾರದಂತೆ ಕಾರನ್ನು ರಕ್ಷಿಸುವುದು ಹಾಗೂ ಸ್ಯಾನಿಟೈಸ್ ಮಾಡುವುದು ಹೇಗೆ?

ಕಾರನ್ನು ಸ್ಯಾನಿಟೈಸ್ ಮಾಡುವಾಗ ಸಣ್ಣ ಪುಟ್ಟ ಜಾಗವನ್ನು ಬಿಡದಂತೆ ಸ್ಯಾನಿಟೈಸ್ ಮಾಡಿ. ಕಾರಿನ ಒಳಗಿನ ಭಾಗಗಳ ಮೇಲೆ ಸೋಂಕುನಿವಾರಕವನ್ನು ಸಿಂಪಡಿಸಿ ನಂತರ ಹತ್ತಿ ಬಟ್ಟೆಯಿಂದ ಒರೆಸಿ. ಡಿಸ್‌ಪ್ಲೇ ಸ್ಕ್ರೀನ್, ರೇಡಿಯೊ ಕಂಟ್ರೋಲ್, ಗೇರ್ ಹಾಗೂ ಪೆಡಲ್‌ಗಳನ್ನು ಸ್ವಚ್ಛ ಮಾಡಿ. ಪ್ರತಿಬಾರಿ ಡ್ರೈವಿಂಗ್ ಆರಂಭಿಸುವ ಮೊದಲು ಸ್ಯಾನಿಟೈಸ್ ಮಾಡಿಕೊಳ್ಳಿ. ಸೋಪ್ ವಾಟರ್ ಬಳಸಿ ಕೂಡ ಇವುಗಳನ್ನು ಸ್ವಚ್ಛ ಮಾಡಿಕೊಳ್ಳಬಹುದು.

ಸೀಟುಗಳನ್ನು ಸ್ವಚ್ಛ ಮಾಡುವುದನ್ನು ಮರೆಯಬೇಡಿ: ಕಾರಿನ ಒಳಭಾಗ ಸ್ವಚ್ಛ ಮಾಡುವಾಗ ಸೀಟುಗಳ ಬಗ್ಗೆ ಅಷ್ಟಾಗಿ ಗಮನ ವಹಿಸುವುದಿಲ್ಲ. ಆದರೆ ಸೀಟುಗಳನ್ನು ಸ್ವಚ್ಛ ಮಾಡುವುದು ತುಂಬಾ ಮುಖ್ಯ. ಕಾರಿನ ಸೀಟಿನಲ್ಲಿ ಸೂಕ್ಷ್ಮ ಜೀವಿಗಳು ಬೇಗನೆ ಸೇರಿಕೊಳ್ಳುತ್ತವೆ. ಅಲ್ಲದೇ ಈ ಪ್ರಸ್ತುತ ಕೊರೊನಾ ಸಮಯದಲ್ಲಿ ಅವು ಅಪಾಯಕಾರಿ. ಅದರಲ್ಲೂ ನೀವು ಯಾರನ್ನಾದರೂ ಕಾರಿನಲ್ಲಿ ಕೂರಿಸಿಕೊಂಡ ನಂತರ ಸೀಟುಗಳನ್ನು ಮರೆಯದೇ ಸ್ಯಾನಿಟೈಸ್ ಮಾಡಿ.

ಸ್ಟೀರಿಂಗ್ ಚಕ್ರದ ಮೇಲೆ ಗಮನ ಹರಿಸಿ: ಸ್ಟೀರಿಂಗ್ ಚಕ್ರವನ್ನು ಪದೇ ಪದೇ ಮುಟ್ಟುತ್ತಿರುತ್ತೇವೆ. ಆ ಕಾರಣಕ್ಕೆ ವೈರಾಣುಗಳು ಅದರ ಮೇಲೆ ಹೆಚ್ಚು ಕೂತಿರಬಹುದು. ಸ್ಟೀರಿಂಗ್ ಶೌಚಾಲಯದ ಆಸನಕ್ಕಿಂತ ಶೇ 4 ಪಟ್ಟು ಹೆಚ್ಚು ಕಲುಷಿತವಾಗಿರುತ್ತದೆ ಎನ್ನುತ್ತದೆ ಅಧ್ಯಯನ. ಆ ಕಾರಣಕ್ಕೆ ಸ್ಟೀರಿಂಗ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಹಾಗೂ ಸೋಂಕು ರಹಿತವನ್ನಾಗಿಸುವುದು ಅತೀ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.