ಆಟೊಮೊಬೈಲ್ ಕ್ಷೇತ್ರ ತೀವ್ರ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ಬೆನ್ನಲ್ಲೇ ಪ್ರಮುಖ ಕಾರು ತಯಾರಿಕಾ ಕಂಪನಿಗಳು ಭಾರೀ ರಿಯಾಯಿತಿ ನೀಡುವ ಮೂಲಕ ಗ್ರಾಹಕರನ್ನು ಶೋರೂಂಗಳತ್ತ ಸೆಳೆಯುವ ಪ್ರಯತ್ನ ನಡೆಸಿವೆ. ಟಾಟಾ ಮೋಟಾರ್ಸ್, ಮಾರುತಿ, ಮಹೀಂದ್ರಾ ಕಂಪನಿಗಳು ತಮ್ಮ ಕೆಲ ಕಾರುಳ ಮೇಲೆ ಭಾರೀ ರಿಯಾಯಿತಿ ಘೋಷಿಸಿವೆ.

ಟಾಟಾ ಮೋಟಾರ್ಸ್ ತನ್ನ ಟಾಟಾ ಹೆಕ್ಸಾ, ಟಾಟಾ ಬೋಲ್ಟ್, ಟೈಗೊರ್, ನೆಕ್ಸಾನ್, ಸಫಾರಿ ಇತ್ಯಾದಿ ಕಾರುಗಳ ಮೇಲೆ ರಿಯಾಯಿತಿ ಘೋಷಿಸಿವೆ.

ಟಾಟಾ ಹೆಕ್ಸಾ ಕಾರು 2.2ಲೀ ಸಾಮರ್ಥ್ಯದ ಡೀಸೆಲ್ ಎಂಜಿನ್ ಹೊಂದಿದ್ದು, ಟೊಯೊಟಾ ಇನ್ನೋವಾ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ಆರು ಹಾಗೂ ಏಳು ಆಸನಗಳ ಈ ಕಾರು ನಾಲ್ಕು ಚಕ್ರಗಳ ಚಾಲನೆಯ ಸಾಮರ್ಥ್ಯದ್ದು. ಈ ಕಾರಿನ ಮೇಲೆ ₹90ಸಾವಿರಗಳ ರಿಯಾಯಿತಿ ಘೋಷಿಸಲಾಗಿದೆ.

ಇದನ್ನೂ ಓದಿ:ಆರ್ಥಿಕ ಹಿಂಜರಿತ: ವಾಣಿಜ್ಯ ವಾಹನ ಮಾರಾಟ ಭಾರಿ ಕುಸಿತ

ಟಾಟಾ ಬೋಲ್ಟ್ ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ಎಂಜಿನ್ ಹೊಂದಿದೆ. 90 ಅಶ್ವಶಕ್ತಿಯ ಪೆಟ್ರೋಲ್ ಹಾಗೂ 75 ಅಶ್ವಶಕ್ತಿಯ ಡೀಸೆಲ್ ಎಂಜಿನ್ ಕಾರುಗಳು ಲಭ್ಯ. ಈ ಕಾರಿನ ಮೇಲೆ ₹75ಸಾವಿರ ರಿಯಾಯಿತಿ ಇದೆ.

ಟಾಟಾ ಝೆಸ್ಟ್ 90 ಅಶ್ವಶಕ್ತಿಯ ಪೆಟ್ರೋಲ್ ಹಾಗೂ 75ರಿಂದ 90ಅಶ್ವಶಕ್ತಿಯ ಶಕ್ತಿಶಾಲಿ ಡೀಸೆಲ್ ಎಂಜಿನ್ ಹೊಂದಿರುವ ಪುಟ್ಟ ಸೆಡಾನ್ ಕಾರು ಇದೆ. ಇದರಲ್ಲಿ ಆಟೊ ಗೇರ್ ಆಯ್ಕೆಯೂ ಇದೆ. ಈ ಕಾರಿನ ಮೇಲೆ ₹75ಸಾವಿರ ರಿಯಾಯಿತಿ ಇದೆ.

ಟಾಟಾ ಸಫಾರಿ ಸ್ಟಾರ್ಮ್ ಅತಿ ದೊಡ್ಡ ಎಸ್ಯುವಿಯಾಗಿದೆ. ಇದೂ 2.2ಲೀ ಸಾಮರ್ಥ್ಯದ ಡೀಸೆಲ್ ಎಂಜಿನ್ ಹೊಂದಿದೆ. ಇದರಲ್ಲೂ ನಾಲ್ಕು ಚಕ್ರಗಳ ಚಾಲನೆಯ ಸೌಕರ್ಯವಿದೆ. ಈ ಕಾರಿನ ಮೇಲೆ ₹70ಸಾವಿರ ರಿಯಾಯಿತಿ ಘೋಷಿಸಲಾಗಿದೆ.

ಇದನ್ನೂ ಓದಿ:ದ್ವಿಚಕ್ರ ವಾಹನ ಮಾರಾಟ ಕುಸಿತ: ಸದ್ಯಕ್ಕೆ ಹೂಡಿಕೆ ಇಲ್ಲ ಎಂದ ಸುಜುಕಿ

ಟಾಟಾ ಟೈಗೊರ್ 1.2 ಲೀ ಸಾಮರ್ಥ್ಯದ ಪೆಟ್ರೋಲ್ ಹಾಗೂ 1.05ಲೀ ಸಾಮರ್ಥ್ಯದ ಡೀಸೆಲ್ ಎಂಜಿನ್ ಮಾದರಿಯಲ್ಲಿ ಇದು ಲಭ್ಯ. ಮಾರುತಿ ಸುಜುಕಿ ಡಿಸೈರ್, ಹೊಂಡಾ ಅಮೇಜ್ ಹಾಗೂ ಫೋರ್ಡ್ ಆಸ್ಪೈರ್ ಕಾರುಗಳಿಗೆ ಪ್ರತಿಸ್ಪರ್ಧಿ ಕಾರು. ಕಿರುಗಾತ್ರದ ಸೆಡಾನ್ ಕಾರು ಇದಾಗಿದ್ದು, 2018ರಲ್ಲಿ ಇದು ತನ್ನ ಸ್ವರೂಪ ಬದಲಿಸಿಕೊಂಡಿತ್ತು. ಈ ಕಾರಿನ ಮೇಲೆ ₹60ಸಾವಿರವರೆಗೂ ರಿಯಾಯಿತಿ ಸಿಗಲಿದೆ.

ಟಾಟಾ ನಿಕ್ಸಾನ್ ಪುಟ್ಟ ಎಸ್ಯುವಿ ಕಾರು ಕಡಿಮೆ ಸಮಯದಲ್ಲಿ ಭಾರೀ ಜನಪ್ರಿಯತೆ ಪಡೆಯಿತು. ಹ್ಯುಂಡೈ ಅವೆನ್ಯು, ಮಹೀಂದ್ರಾ ಎಕ್ಸ್ಯುವಿ 300ಗೆ ಸ್ಪರ್ಧೆಯೊಡ್ಡುತ್ತಿರುವ ನೆಕ್ಸಾನ್, 1.2ಲೀ ಟರ್ಬೊ ಪೆಟ್ರೋಲ್ ಹಾಗೂ 1.5ಲೀ. ಡೀಸೆಲ್ ಎಂಜಿನ್ನಲ್ಲಿ ಲಭ್ಯ. ಹಳೇ ಕಾರುಗಳೊಂದಿಗೆ ವಿನಿಮಯ ಸೇರಿದಂತೆ ₹45ರಿಂದ 55ಸಾವಿರ ರಿಯಾಯಿತಿವರೆಗೂ ಲಭ್ಯ.

ಇದನ್ನೂ ಓದಿ:ಆರ್ಥಿಕ ಕುಸಿತ: ಅರ್ಧಕ್ಕಿಳಿದ ವಾಹನ ಮಾರಾಟ

ಟಾಟಾ ಟಿಯಾಗೊ ಕಾರು ಪುಟ್ಟ ಕಾರುಗಳ ಸಾಲಿಗೆ ಸೇರಲಿದೆ. ಮಾರುತಿ ಸುಜುಕಿ ವ್ಯಾಗನ್ ಆರ್, ಹ್ಯುಂಡೈ ಸ್ಯಾಂಟ್ರೊ ಸಾಲಿಗೆ ಸೇರುವ ಟಿಯಾಗೊ 1.2ಲೀ ಪೆಟ್ರೋಲ್ ಹಾಗೂ 1.05ಲೀ ಡೀಸೆಲ್ ಎಂಜಿನ್ ಹೊಂದಿರುವ ಮಾದರಿಯಲ್ಲಿ ಲಭ್ಯ. ಈ ಕಾರುಗಳ ಮೇಲೂ ₹45ಸಾವಿರವರೆಗೆ ಹಾಗೂ ಆಟೊ ಎಕ್ಸ್ ಝಡ್ಎಪ್ಲಸ್ ಮಾದರಿ ಮೇಲೆ ₹30ಸಾವಿರವರೆಗೆ ರಿಯಾಯಿತಿ ಲಭ್ಯ.

ಟಾಟಾ ಹ್ಯಾರಿಯರ್ ಕಾರು ಭಾರೀ ಜನಪ್ರಿಯತೆ ಪಡೆದಿದೆ. ಮಧ್ಯಮ ಗಾತ್ರದ ಎಸ್ಯುವಿ ಆಗಿರುವ ಈ ಕಾರಿಗೆ ಕಿಯಾ ಸೆಲ್ಟೊಸ್ ಹಾಗೂ ಎಂಜಿ ಹೆಕ್ಟರ್ಗೆ ಸ್ಪರ್ಧೆಯೊಡ್ಡುತ್ತಿದೆ. 140 ಅಶ್ವಶಕ್ತಿಯ ಈ ಕಾರಿನೊಳಗೆ 2.0ಲೀ ಡೀಸೆಲ್ ಎಂಜಿನ್ ಇದೆ. ಏಳು ಆಸನಗಳ ಈ ಕಾರು ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಮಾದರಿಯಲ್ಲೂ ಲಭ್ಯ. ಈ ಕಾರಿಗೂ ₹40ಸಾವಿರವರೆಗೆ ರಿಯಾಯಿತಿ ಲಭ್ಯ.

ಮಹೀಂದ್ರಾ ಕೂಡಾ ರಿಯಾಯಿತಿ ನೀಡಿ ಗ್ರಾಹಕರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ. ರಿಯಾಯಿತಿ ಮಾರಾಟದ ಮೂಲಕ ಮಾರುಕಟ್ಟೆಯಲ್ಲಿ ಆರ್ಥಿಕ ಹಿಂಜರಿಕೆ ಪರಿಣಾಮವನ್ನು ಎದುರಿಸಲು ಈ ಕಂಪನಿಯೂ ಮುಂದಾಗಿದೆ.

ಇದನ್ನೂ ಓದಿ:ಮಾರುತಿ ಸುಜುಕಿ ಇಂಡಿಯಾದಿಂದ 3 ಸಾವಿರ ಉದ್ಯೋಗ ಕಡಿತ

‘ಮಹೀಂದ್ರಾ ಟಿಯುವಿ300‘ ನಾಲ್ಕು ಮೀಟರ್ ಒಳಗಿನ ಕಾರು ಇದಾಗಿದ್ದು, ಎಸ್ಯುವಿ ಮಾದರಿಯಲ್ಲಿ ಸಾಕಷ್ಟು ಜನಮನ್ನಣೆ ಗಳಿಸಿದೆ. 100 ಅಶ್ವಶಕ್ತಿ ಹೊಂದಿರುವ ಈ ಕಾರು 1.5ಲೀ. ಸಾಮರ್ಥ್ಯದ ಎಂಜಿನ್ ಹೊಂದಿದೆ. ಇದರಲ್ಲಿ ಟಿ4+ ಮತ್ತು ಟಿ6+ ಮಾದರಿಗೆ ₹59ಸಾವಿರ, ಟಿ8 ಹಾಗೂ ಟಿ10 ಮಾದರಿ ಮೇಲೆ ₹49ಸಾವಿರ ಹಾಗೂ ಟಿ10 ಮಾದರಿ ಮೇಲೆ ₹40ಸಾವಿರ ರಿಯಾಯಿತಿ ಸಿಗಲಿದೆ. ವಿನ್ಯಾಸ ಬದಲಿಸುವ ಮೊದಲಿನ ಮಾದರಿ ಮೇಲೆ ಇನ್ನೂ ಹೆಚ್ಚಿನ ರಿಯಾಯಿತಿಯನ್ನು ಕೆಲ ಮಳಿಗೆಗಳು ನೀಡುತ್ತಿವೆ.

ಮಹೀಂದ್ರಾ ಸ್ಕಾರ್ಪಿಯೊ ಜನಪ್ರಿಯ ಕಾರುಗಳಲ್ಲಿ ಇದೂ ಒಂದು. 2.5ಲೀ/ 2.0 ಲೀ. ಡೀಸೆಲ್ ಎಂಜಿನ್ ಇದು ಹೊಂದಿದೆ. ಗಟ್ಟಿಮುಟ್ಟಾದ ದೇಹ ಹಾಗೂ ನಾಲ್ಕು ಚಕ್ರಗಳ ಚಾಲನೆಯ ಈ ಕಾರು ಆನ್ರೋಡ್ ಮತ್ತು ಆಫ್ರೋಡ್ಗೆ ಹೇಳಿಮಾಡಿಸಿದ್ದು. ಈ ಕಾರುಗಳ ಎಸ್5 ವೇರಿಯಂಟ್ ಮೇಲೆ ₹50ಸಾವಿದರ, ಎಸ್7, ಎಸ್9 ಹಾಗೂ ಎಸ್11 ಮಾದರಿ ಮೇಲೆ ₹30ಸಾವಿರವರೆಗೂ ರಿಯಾಯಿತಿ ಘೋಷಿಸಲಾಗಿದೆ.

ಮಹೀಂದ್ರಾ ಥಾರ್ ಸಂಪೂರ್ಣವಾಗಿ ಆಫ್ರೋಡ್ಗಾಗಿ ನಿರ್ಮಾಣಗೊಂಡ ಕಾರು. ಸಿಆರ್ಡಿಇ ಎಂಜಿನ್ ಹೊಂದಿರುವ ಈ ಕಾರು 107ಅಶ್ವಶಕ್ತಿ ಉತ್ಪಾದಿಸಬಲ್ಲ 2.5ಲೀ ಸಾಮರ್ಥ್ಯದ ಡೀಸೆಲ್ ಎಂಜಿನ್ ಹೊಂದಿದೆ. ಈ ಕಾರುಗಳ ಮೇಲೆ ₹46ಸಾವಿರವರೆಗೆ ರಿಯಾಯಿತಿ, ಎಬಿಎಸ್ ಇರುವ ಮಾದರಿ ಮೇಲೆ ₹29ಸಾವಿರ ರಿಯಾಯಿತಿ ಲಭ್ಯ. ಆದರೆ ಸಿಆರ್ಡಿಇ 700 ಸ್ಪೆಷಲ್ ಎಡಿಷನ್ ಮಾದರಿ ಮೇಲೆ ರಿಯಾಯಿತಿ ಘೋಷಿಸಿಲ್ಲ.

ಮಹೀಂದ್ರಾ ಮೊರಾಜೊ 8 ಆಸನಗಳ ಎಂಪಿವಿ. 1.5ಲೀ ಸಾಮರ್ಥ್ಯದ 123ಅಶ್ವಶಕ್ತಿಯ ಉತ್ಪಾದಿಸಬಲ್ಲ ಎಂಜಿನ್ ಇದರದ್ದಾಗಿದ್ದು, ಈ ಕಾರುಗಳ ಎಂ6 ಹಾಗೂ ಎಂ8 ಮಾದರಿ ಮೇಲೆ ₹45ಸಾವಿರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಎಂ2 ಮತ್ತು ಎಂ4 ಮಾದರಿ ಕಾರುಗಳ ಮೇಲೆ ₹20ಸಾವಿರವರೆಗೂ ರಿಯಾಯಿತಿಯನ್ನು ಡೀಲರ್ಗಳು ನೀಡುತ್ತಿದ್ದಾರೆ.

ಮಹೀಂದ್ರಾ ಎಕ್ಸ್ಯುವಿ500 ಬಹು ಜನಪ್ರಿಯ ಎಸ್ಯುವಿ. 2.2ಲೀ ಡೀಸೆಲ್ ಹಾಗೂ 2.2ಲೀ ಪೆಟ್ರೋಲ್ ಮಾದರಿಯಲ್ಲಿ ಈ ಕಾರು ಲಭ್ಯ. ಬೇಸ್ ಮಾದರಿಯಾದ ಡಬ್ಲೂ3 ಹೊರತುಪಡಿಸಿ ಉಳಿದೆಲ್ಲಾ ಮಾದರಿ ಮೇಲೆ ₹40ಸಾವಿರವರೆಗೆ ರಿಯಾಯಿತಿಯನ್ನು ಡೀಲರ್ಗಳು ನೀಡುತ್ತಿದ್ದಾರೆ. ಹಳೇ ಕಾರುಗಳೊಂದಿಗೆ ವಿನಿಮಯ ಮತ್ತು ಆ್ಯಕ್ಸಸರಿಸ್ ಮೇಲೆ ರಿಯಾಯಿತಿ ಲಭ್ಯ.

ಮಾರುತಿ ಸುಜುಕಿ ಕೂಡಾ ರಿಯಾಯಿತಿ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. ವಿಟೆರಾ ಬ್ರೀಝಾ ಕಾರಿನ ಮೇಲೆ ₹1.01ಲಕ್ಷವರೆಗೆ ರಿಯಾಯಿತಿ ನೀಡುವ ಮೂಲಕ ಸಂಕಷ್ಟದ ಕಾಲದಲ್ಲೂ ಇತರ ಕಂಪನಿಗಳಿಗೆ ತೀವ್ರ ಪೈಪೋಟಿ ಒಡ್ಡಿದೆ. ₹50ಸಾವಿರ ನಗದು ರಿಯಾಯಿತಿ ಮತ್ತು 5 ವರ್ಷ ವಾರಂಟಿ ಘೋಷಿಸಿದೆ. ಇದರೊಂದಿಗೆ ₹20ಸಾವಿರವರೆಗೆ ಹಳೇ ಕಾರುಗಳ ವಿನಿಯಮಯಕ್ಕೆ ಬೋನಸ್ ಜತೆಗೆ ಕಾರ್ಪೊರೇಟ್ ರಿಯಾಯಿತಿ ₹10ಸಾವಿರ ಸೇರಿದೆ.

ಮಾರುತಿ ಡಿಝೈರ್ ಡೀಸೆಲ್ ಕಾರಿನ ಮೇಲೂ ₹84ಸಾವಿರೆವರೆಗೆ ರಿಯಾಯಿತಿ ನೀಡಲಾಗಿದೆ. ₹35ಸಾವಿರ ಮತ್ತು 2 ವರ್ಷ ಹೆಚ್ಚುವರಿ ವ್ಯಾರಂಟಿ ಘೋಷಿಸಲಾಗಿದೆ. ಹಳೆಯ ಕಾರು ನೀಡುವುದು ಮತ್ತು ಕಾರ್ಪೊರೇಟ್ ರಿಯಾಯಿತಿಯೂ ಘೋಷಿಸಿದೆ. ಇದೇ ರೀತಿ ಪೆಟ್ರೋಲ್ ಮಾದರಿ ಮೇಲೆ ₹30ಸಾವಿರ ನೇರ ರಿಯಾಯಿತಿ ಸೇರಿ ಒಟ್ಟು ₹55ಸಾವಿರ ರಿಯಾಯಿತಿಯನ್ನು ಕಂಪನಿ ಘೋಷಿಸಿದೆ.

ಸ್ವಿಫ್ಟ್ ಡೀಸೆಲ್ ಮಾದರಿಯ ಕಾರುಗಳ ಮೇಲೆ ₹30ಸಾವಿರ ನಗರದು ಹಾಗೂ 5 ವರ್ಷ ವಾರಂಟಿ ಘೋಷಿಸಲಾಗಿದೆ. ಉಳಿದ ರಿಯಾಯಿತಿ ಸೇರಿ ₹77ಸಾವಿರವರೆಗೂ ರಿಯಾಯಿತಿ ಲಭ್ಯ.

ಆಲ್ಟೊ, ಆಲ್ಟೊ ಕೆ–10 ಹಾಗೂ ಸೆಲೆರಿಯೊ ಕಾರುಗಳ ಮೇಲೆ ₹65ಸಾವಿರ ರಿಯಾಯಿತಿಯನ್ನು ಕಂಪನಿ ಘೋಷಿಸಿದೆ. ಸ್ವಿಫ್ಟ್ ಪೆಟ್ರೋಲ್ ಮಾದರಿ ಮತ್ತು ಇಕೊ 7 ಆಸನಗಳ ಕಾರುಗಳ ಮೇಲೆ ₹50ಸಾವಿರ ರಿಯಾಯಿತಿ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.