ಕಾರುಗಳಿಗೆ ಸುದೀರ್ಘ ಇತಿಹಾಸವಿದೆ. ಬೃಹತ್ ಗಾತ್ರದ, ಆಕರ್ಷಕವಾಗಿಲ್ಲದ, ಸುರಕ್ಷತೆಯೇ ಇಲ್ಲದಿದ್ದ ಕಾರಿನ ಪರಿಕಲ್ಪನೆಗಳಿಂದ ಹಿಡಿದು ಇಂದಿನ ಆಧುನಿಕ ವಿನ್ಯಾಸದ, ಅತ್ಯಾಧುನಿಕ ತಂತ್ರಜ್ಞಾನದ ಎಂಜಿನ್ಗಳವರೆಗೆ ಕಾರುಗಳು ಬೆಳೆದು ಬಂದಿವೆ.ಆರಂಭದ ಕಾರುಗಳಲ್ಲಿ ಎದುರಿನ ಗಾಜು (ವಿಂಡ್ ಶೀಲ್ಡ್ ) ಇರಲಿಲ್ಲ. ಅಷ್ಟೇ ಏಕೆ? ಬಾಗಿಲುಗಳೂ ಇರಲಿಲ್ಲ. ವೃತ್ತಾಕಾರದ ಸ್ಟೀರಿಂಗ್ನ ಬದಲಿಗೆ ದೋಣಿಗಳಲ್ಲಿ ಬಳಸುತ್ತಿದ್ದ ರೀತಿಯ ಚಾಲನಾ ದಂಡ ಇತ್ತು.

ವರ್ಷಗಳು ಉರುಳಿದಂತೆ ಹಂತ ಹಂತವಾಗಿಕಾರುಗಳಲ್ಲಿ ಸುರಕ್ಷತೆ, ಆರಾಮದಾಯಕ, ಹೊಸ ವಿನ್ಯಾಸ ಸೇರಿದಂತೆ ಹಲವು ತಂತ್ರಜ್ಞಾನಗಳನ್ನು ಅಳವಡಿಸುತ್ತಾ ಬರಲಾಯಿತು. ಬಳಕೆಗೆ ಅನುಕೂಲವಾಗುವ ರೀತಿಯಲ್ಲಿಕಾರುಗಳು ರೂಪುಗೊಳ್ಳಲು ಆರಂಭಿಸಿದ ನಂತರ ಅವು ಜನರ ಜೀವನದ ಭಾಗವೇ ಆಗಿವೆ.

300 ವರ್ಷಗಳ ಅವಧಿಯಲ್ಲಿ ಕಾರುಗಳ ತಯಾರಿಕೆಯಲ್ಲಿ ಎಲ್ಲವೂ ಬದಲಾಗಿದೆ. ಇಂಧನವೊಂದನ್ನು ಬಿಟ್ಟು! ಆರಂಭದಲ್ಲಿ ಕಾರು ಹಾಗೂ ಇನ್ನಿತರ ವಾಹನಗಳನ್ನು ಚಲಾಯಿಸಲು ಯಾವ ಇಂಧನ ಬಳಸಲಾಗುತ್ತಿತ್ತೋ, ಈಗಲೂ ಬಹುಪಾಲು ನಾವು ಅದನ್ನೇ ಬಳಸುತ್ತಿದ್ದೇವೆ. ಆದರೆ, ಇತ್ತೀಚೆಗೆ ಕೆಲವು ವರ್ಷಗಳಿಂದೀಚೆಗೆ ವಿದ್ಯುತ್ ಚಾಲಿತ ವಾಹನಗಳ (ಇವಿ) ಪರಿಕಲ್ಪನೆ ಹೆಚ್ಚು ಜನಪ್ರಿಯವಾಗುತ್ತಿವೆ.

ವಿದ್ಯುತ್ ಚಾಲಿತ ವಾಹನಗಳ ಉಗಮ
ವಾಹನಗಳ ಇತಿಹಾಸವನ್ನು ನಾವು ಬರೆಯಲು ಮುಂದಾಗುತ್ತೇವೆ ಎಂದರೆ, ‘ವಿದ್ಯುತ್ ಚಾಲಿತ ವಾಹನಗಳಿಂದ ಮೊದಲು’ ಮತ್ತು ‘ವಿದ್ಯುತ್ ಚಾಲಿತ ವಾಹನಗಳ ನಂತರ’ ಎಂಬ ಎರಡು ಹಂತಗಳಲ್ಲಿ ಬರೆಯಬೇಕು. ಬರೀ ಕಲ್ಪನೆ (ಕಾನ್ಸೆಪ್ಟ್) ಹಂತದಲ್ಲಿದ್ದ ‘ಇವಿ’ಗಳು ಜನರು ಸಂಚಾರ ಮಾಡಲು ಇಷ್ಟಪಡುವ ಆಯ್ಕೆಯಾಗಿ ಬದಲಾಗಿರುವುದನ್ನು ನಮ್ಮ ಪೀಳಿಗೆ ಜನ ಕಂಡಿದ್ದಾರೆ. ಆದರೆ, 1947ರಲ್ಲೇ ಮೊದಲ ವಿದ್ಯುತ್ ಚಾಲಿತ ವಾಹನ ಚಾಲ್ತಿಯಲ್ಲಿತ್ತು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ‘ಟಮ' (TAMA) (ನಿಸಾನ್ ತಯಾರಿಸಿದ್ದು) ಎಂಬ ವಿದ್ಯುತ್ ಚಾಲಿತ ವಾಹನವು ಎರಡನೇ ವಿಶ್ವಯುದ್ಧದ ನಂತರ ಜಪಾನ್ನಲ್ಲಿ ಕಂಡು ಬಂದ ತೈಲದ ಕೊರತೆಯನ್ನು ನೀಗಿಸಲು ತನ್ನದೇ ಕೊಡುಗೆ ನೀಡಿತ್ತು. ಒಮ್ಮೆ ಚಾರ್ಜ್ ಮಾಡಿದರೆ 96 ಕಿ.ಮೀ ದೂರಕ್ಕೆ ಸಾಗುವ ಸಾಮರ್ಥ್ಯವನ್ನು ‘ಟಮ’ ಹೊಂದಿತ್ತು.

ಎರಡು ಕಾರುಗಳು
ಏರುತ್ತಿರುವ ಜಾಗತಿಕ ತಾಪಮಾನ ನಿಯಂತ್ರಿಸಲು ಚಿಕ್ಕ ಕೊಡುಗೆ ನೀಡಬೇಕು ಎಂಬ ಮನೋಭಾವದವರು ಈಗ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸುತ್ತಿದ್ದಾರೆ. ಜಾಗತಿಕವಾಗಿ ವಿದ್ಯುತ್ ಚಾಲಿತ ವಾಹನಗಳ ಮಾರಾಟ ಹೆಚ್ಚುತ್ತಿದೆ. ನಿಸಾನ್ ಸಂಸ್ಥೆಯ ‘ಲೀಫ್’ ಕಾರು, ಜಗತ್ತಿನಲ್ಲೇ ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಸಂಪೂರ್ಣ ವಿದ್ಯುತ್ಚಾಲಿತ ಕಾರು ಎಂಬ ಹೆಗ್ಗಳಿಕೆ ಪಡೆದಿದೆ.

ಸಾಂಪ್ರದಾಯಿಕ ಇಂಧನ ಬಳಸುವ ಕಾರಿನ ಬದಲಾಗಿ ವಿದ್ಯುತ್ ಚಾಲಿತ ಕಾರು ಖರೀದಿಸಬೇಕು ಎಂದುಕೊಳ್ಳುವ ಗ್ರಾಹಕರಿಗೆ‘ನಿಸಾನ್ ನೋಟ್ ಇ–ಪವರ್’ ಕಾರು ಉತ್ತಮ ಆಯ್ಕೆಯಾಗಬಹುದು. ಕಾರಿನಲ್ಲಿ ಅಳವಡಿಸಿರುವ ಬ್ಯಾಟರಿಗಳನ್ನು ಅಗತ್ಯಬಿದ್ದಾಗ ಚಾರ್ಚ್ ಮಾಡುವುದಕ್ಕಾಗಿಯೇ ಇಂಧನ ಬಳಸುವ ಎಂಜಿನ್ ಅಳವಡಿಸಲಾಗಿದೆ. ಅತ್ಯುತ್ತಮ ಇಂಧನ ಕ್ಷಮತೆ, ಆರಾಮದಾಯಕ ಚಾಲನಾ ಮೋಡ್, ಜಾಗತಿಕ ಗುಣಮಟ್ಟದ ತಂತ್ರಜ್ಞಾನಗಳನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ.

ಜಾಗತಿಕವಾಗಿ ‘ಇವಿ’ಗಳು ಹಾಗೂ ಅವುಗಳ ಮಾರುಕಟ್ಟೆಗಳು ಈಗ ಪಕ್ವವಾಗಿವೆ. ಮುಂದಿನ ದಿನಗಳಲ್ಲಿ ಕಾರುಗಳ ಮಾರುಕಟ್ಟೆಯಲ್ಲಿ ವಿದ್ಯುತ್ ಚಾಲಿತ ಕಾರುಗಳು ಕೆಲಮಟ್ಟಿಗೆ ಅಸ್ಥಿರತೆಗೆ ಎಡೆಮಾಡಿಕೊಡುವುದಂತೂ ಸ್ಪಷ್ಟ. ಬ್ಯಾಟರಿ ಚಾಲಿತ ಈ ಕಾರುಗಳು, ಇಂಧನವನ್ನು ಚಲನೆಯಾಗಿ ಪರಿವರ್ತಿಸುವ ಅಂತರ್ದಹನ ಎಂಜಿನ್ ವಾಹನಗಳ (ಐಸಿವಿ) ಬಳಕೆಗೆ ಕೊನೆ ಹಾಡಲಿವೆ. ಐಸಿಇಗಳಿಗೆ ಹೋಲಿಸಿದರೆ ವಿದ್ಯುತ್ ಚಾಲಿತ ಮೋಟಾರ್ನಲ್ಲಿ ಚಲಿಸುವ ಬಿಡಿಭಾಗಗಳು (ಮೂವಿಂಗ್ ಪಾರ್ಟ್ಸ್ ) ಕಡಿಮೆ (20ಕ್ಕೂ ಕಡಿಮೆ). ಇದರಿಂದಾಗಿ ನಿರಂತರ ಬಳಕೆಯಿಂದ ವಾಹನಕ್ಕೆ ಆಗುವ ಸಹಜ ಹಾನಿಯ ಪ್ರಮಾಣ ಕುಂಠಿತಗೊಳ್ಳುತ್ತದೆ. ವಿದ್ಯುತ್ ಚಾಲಿತ ವಾಹನದ ನಿರ್ವಹಣಾ ವೆಚ್ಚ ಮೂರನೇ ಒಂದರಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ.

ಭವಿಷ್ಯದ ವಾಹನ
ಸದ್ಯ, ವಿದ್ಯುತ್ ಚಾಲಿತ ವಾಹನಗಳು ಕೊಂಚ ದುಬಾರಿ. ಇದು ಅವುಗಳ ಖರೀದಿ ವಿಚಾರದಲ್ಲಿ ಜನರು ಆಲೋಚಿಸುವಂತೆ ಮಾಡುತ್ತಾದರೂ, ಪರಿಸರದ ಬಗ್ಗೆ ಕಾಳಜಿ ಉಳ್ಳ ಗ್ರಾಹಕರು, ಈ ವಾಹನಗಳಿಂದ ಪರಿಸರಕ್ಕೆ ಆಗುವ ಲಾಭದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಸಾಂಪ್ರದಾಯಿಕ ಇಂಧನ ಬಳಸುವ ಕಾರು/ವಾಹನಗಳಿಗಿಂತ ‘ಇವಿ’ ಮಾದರಿಗಳು ಅಗ್ಗವಾಗುವ ಸನ್ನಿವೇಶಕ್ಕೆ ವಾಹನೋದ್ಯಮ ಸಾಕ್ಷಿಯಾಗಬಹುದು. ಬ್ಯಾಟರಿಗಳ ಸಾಮರ್ಥ್ಯವೂ ವೇಗವಾಗಿ ಹೆಚ್ಚಾಗುತ್ತಿದೆ.

ಮುಂದಿದೆ ದೊಡ್ಡ ಸವಾಲು
ಹೊಸದಾಗಿ ಅಭಿವೃದ್ಧಿಯಾಗುತ್ತಿರುವ ಬ್ಯಾಟರಿ ತಂತ್ರಜ್ಞಾನಗಳು ವಿದ್ಯುತ್ ಚಾಲಿತ ವಾಹನಗಳ ಸಂಚಾರ ಸಾಮರ್ಥ್ಯ ಮತ್ತು ಬೆಲೆಗೆ ಸಂಬಂಧಿಸಿದಂತೆ ಇರುವ ಆತಂಕವನ್ನು ಕಡಿಮೆ ಮಾಡಬಹುದಾದರೂ, ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳು ಪೂರ್ಣ ಪ್ರಮಾಣದಲ್ಲಿ ರಸ್ತೆಗಳಿಯಲೂ ಸಾಕಷ್ಟು ಅಡೆತಡೆಗಳಿವೆ. ಬ್ಯಾಟರಿ ಚಾರ್ಜಿಂಗ್ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು ಪ್ರಮುಖ ಅಡ್ಡಿಯಾಗಿದೆ.

ಪ್ರಸ್ತುತ ದೇಶದಲ್ಲಿ 56 ಸಾವಿರದಷ್ಟು ಸಾಂಪ್ರದಾಯಿಕ ಇಂಧನ ಬಂಕ್ಗಳಿವೆ. ಆದರೆ, ವಿದ್ಯುತ್ ಚಾಲಿತ ವಾಹನಗಳನ್ನು ಚಾರ್ಜ್ ಮಾಡುವಂತಹ ಸಮುದಾಯ ಚಾರ್ಜಿಂಗ್ ಕೇಂದ್ರಗಳು ಇರುವುದು 222 ಮಾತ್ರ. ಮನೆಗಳಲ್ಲಿ ವಾಹನಗಳನ್ನು ಚಾರ್ಜ್ ಮಾಡುವುದರಿಂದ ವಿದ್ಯುತ್ ಬಳಕೆ ವೆಚ್ಚ ಗಣನೀಯವಾಗಿ ಹೆಚ್ಚಬಹುದು.ವಿದ್ಯುತ್ ಚಾಲಿತ ವಾಹನಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ಉತ್ಸಾಹವು ವಾಹನ ಉದ್ಯಮ, ನೀತಿ ನಿರೂಪಕರು, ಇಂಧನ ವಲಯ ಹಾಗೂ ಇತರ ಪಾಲುದಾರರ ಗಮನವನ್ನು ಸೆಳೆದಿದೆ.

ಕಚ್ಚಾ ತೈಲಕ್ಕಾಗಿ ವಾರ್ಷಿಕವಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಭಾರತಕ್ಕೆ ಸೌರಶಕ್ತಿ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಸಾಕಷ್ಟು ವಿದ್ಯುತ್ ತಯಾರಿಸುವುದಕ್ಕೆ ಅವಕಾಶ ಇದೆ. ಹೆಚ್ಚು ಸುಸ್ಥಿರ ಇಂಧನ ತಯಾರಿಸಿ, ಪರಿಸರ ಮಾಲಿನ್ಯ ಮಾಡುವ ಸಾಂಪ್ರದಾಯಿಕ ಇಂಧನಕ್ಕಿಂತ ಹೊಗೆ ಉಗುಳದ ವಿದ್ಯುತ್ ಇಂಧನ ಆಯ್ಕೆ ಮಾಡುವುದರಲ್ಲಿ ಹೆಚ್ಚು ಅರ್ಥ ಇದೆ.

ಪ್ರೋತ್ಸಾಹ ನೀಡಲಿ:ಎದುರಿಗಿರುವ ಸವಾಲುಗಳನ್ನು ಪರಿಹರಿಸಲು ಅಭೂತಪೂರ್ವವಾದ ಪಾಲುದಾರಿಕೆ ಬೇಕು ಮತ್ತು ಬೇರೆ ದೇಶಗಳು ಈ ಕ್ಷೇತ್ರದಲ್ಲಿ ಸಾಧಿಸಿರುವ ಯಶಸ್ಸನ್ನು ಅಧ್ಯಯನ ಮಾಡಬೇಕು. ಪರಿವರ್ತನೆಗೆ ಅಡಿಪಾಯ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಗೆ, ದೇಶದಾದ್ಯಂತ ‘ಇವಿ’ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಬೇಕು. ಸಾಮೂಹಿಕ ಹಾಗೂ ಖಾಸಗಿ ಸಾರಿಗೆ ವ್ಯವಸ್ಥೆಗಳಲ್ಲಿ ‘ಇವಿ’ಗಳನ್ನು ಬಳಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರೋತ್ಸಾಹಕ ಕೊಡುಗೆಗಳನ್ನು ನೀಡುವುದು ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಬೇಕು.

ಸರ್ಕಾರಗಳು ಈ ಕ್ರಮಗಳನ್ನು ಕೈಗೊಂಡಿದ್ದೇ ಆದರೆ ದೇಶದ ಶೇ 90ರಷ್ಟು ಕಾರು ಮಾಲೀಕರು ವಿದ್ಯುತ್ ಚಾಲಿತ ವಾಹನಗಳತ್ತ ಮುಖಮಾಡಲಿದ್ದಾರೆ ಎಂದು 2018ರ ವೆಲಾಸಿಟಿ ಎಂಆರ್ ಸಮೀಕ್ಷೆ ಹೇಳಿದೆ.

ರಾತ್ರಿ ಬೆಳಗಾವುದರ ಒಳಗೆ ಭಾರತದಲ್ಲಿ ಈ ಪರಿವರ್ತನೆ (ಸಾಂಪ್ರದಾಯಿಕ ಇಂಧನ ವಾಹನಗಳಿಂದ ‘ಇವಿ’ಗಳಿಗೆ ಬದಲಾವಣೆ) ಸಾಧ್ಯವಿಲ್ಲ. ಆದರೆ, ಇವಿಗಳಿಂದ ಗ್ರಾಹಕರಿಗೆ ಆಗುವ ಲಾಭಗಳು, ಇವುಗಳ ವಿಚಾರದಲ್ಲಿ ಸರ್ಕಾರ ಪ್ರದರ್ಶಿಸಿರುವ ಉತ್ಸಾಹವನ್ನು ಪರಿಗಣಿಸಿ ಹೇಳುವುದಾದರೆ, ಮುಂದಿನ ವರ್ಷಗಳು ಕಾರಿನ ಇತಿಹಾಸದಲ್ಲೇ ಅತ್ಯಂತ ರೋಚಕ ಕಾಲಘಟ್ಟವಾಗಿರಲಿರುವುದು ನಿಶ್ಚಿತ.
(ಲೇಖಕ: ನಿಸಾನ್ ಇಂಡಿಯಾದ ಉಪಾಧ್ಯಕ್ಷ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.