ಬೆಂಗಳೂರು: ನವರಾತ್ರಿಯಿಂದ ಧನ್ತೇರಸ್ವರೆಗಿನ 42 ದಿನಗಳ ಹಬ್ಬದ ಋತುವಿನಲ್ಲಿ 37.93 ಲಕ್ಷ ವಾಹನಗಳು ಮಾರಾಟ ಆಗಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (31.95 ಲಕ್ಷ) ಮಾರಾಟದಲ್ಲಿ ಶೇ 18.73ರಷ್ಟು ಏರಿಕೆ ಕಂಡುಬಂದಿದೆ.

ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್ಎಡಿಎ) ಮಂಗಳವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಇದೆ. ಈ ಬಾರಿಯ ಹಬ್ಬದ ಋತುವಿನಲ್ಲಿ ವಾಹನ ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಮನಿಷ್ ರಾಜ್ ಸಿಂಘಾನಿಯಾ ತಿಳಿಸಿದ್ದಾರೆ. ಪ್ರಯಾಣಿಕ, ದ್ವಿಚಕ್ರ, ತ್ರಿಚಕ್ರ ಮತ್ತು ವಾಣಿಜ್ಯ ವಾಹನ ವಿಭಾಗದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ. ಆದರೆ, ಟ್ರ್ಯಾಕ್ಟರ್ ಮಾರಾಟವು ಶೇ 0.5ರಷ್ಟು ಇಳಿಕೆ ಕಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನವರಾತ್ರಿ ಆರಂಭದ ವೇಳೆ ಪ್ರಯಾಣಿಕ ವಾಹನ ಮಾರಾಟವು ನಿರೀಕ್ಷೆಗಿಂತಲೂ ಕಡಿಮೆ ಇತ್ತಾದರೂ ದೀಪಾವಳಿಯಲ್ಲಿ ಚೇತರಿಕೆ ಕಂಡು ಶೇ 10ರಷ್ಟು ಬೆಳವಣಿಗೆ ಸಾಧಿಸಿದೆ. ಎಸ್ಯುವಿಗೆ ಹೆಚ್ಚಿನ ಬೇಡಿಕೆ ಬಂದಿತ್ತು ಎಂದು ಒಕ್ಕೂಟವು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.