ನವದೆಹಲಿ: ವಿದ್ಯುತ್ ಚಾಲಿತ ವಾಹನಗಳಿಗೆ (ಇ.ವಿ.) ಚಾರ್ಜಿಂಗ್ ಮೂಲಸೌಕರ್ಯ ಕಲ್ಪಿಸಲು ಎಂಜಿ ಮೋಟರ್ ಇಂಡಿಯಾ ಕಂಪನಿಯು ‘ಎಂಜಿ ಚಾರ್ಜ್’ ಎನ್ನುವ ಹೊಸ ಕಂಪನಿಯ ಆರಂಭವನ್ನು ಘೋಷಿಸಿದೆ.

ದೇಶದಾದ್ಯಂತ ವಸತಿ ಪ್ರದೇಶಗಳಲ್ಲಿ ಒಂದು ಸಾವಿರ ದಿನಗಳಲ್ಲಿ ಒಂದು ಸಾವಿರ ಚಾರ್ಜರ್‌ಗಳನ್ನು ಅಳವಡಿಸುವ ಗುರಿಯನ್ನು ಕಂಪನಿ ಇಟ್ಟುಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಇರುವ ಮತ್ತು ಭವಿಷ್ಯದಲ್ಲಿ ಬರಲಿರುವ ವಾಹನಗಳನ್ನು ಚಾರ್ಜ್ ಮಾಡುವ ಸಾಮರ್ಥ್ಯವನ್ನು ಈ ಜಾರ್ಜರ್‌ಗಳು ಹೊಂದಿರಲಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಇ.ವಿ. ವ್ಯವಸ್ಥೆಯ ವಿಸ್ತರಣೆಯ ನಿಟ್ಟಿನಲ್ಲಿ ಕಂಪನಿಯು ನಿರಂತರವಾಗಿ ಕೆಲಸ ಮಾಡುತ್ತಿದೆ. ‘ಎಂಜಿ ಚಾರ್ಜ್’ನಿಂದ ಗ್ರಾಹಕರಿಗೆ ಸುಲಭವಾಗಿ ಚಾರ್ಜಿಂಗ್ ಸೌಲಭ್ಯ ಸಿಗುವಂತೆ ಮಾಡಲಿದ್ದು, ಆ ಮೂಲಕ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸುವಂತೆ ಉತ್ತೇಜಿಸಲಾಗುವುದು’ ಎಂದು ಕಂಪನಿಯ ಭಾರತದ ಅಧ್ಯಕ್ಷ ರಾಜೀವ್ ಛಾಬಾ ಹೇಳಿದ್ದಾರೆ.

ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ (ಆರ್‌ಡಬ್ಲ್ಯುಎ) ಒಪ್ಪಂದ ಮಾಡಿಕೊಳ್ಳಲಿದ್ದು, ಚಾರ್ಜರ್‌ಗಳ ಅಳವಡಿಕೆಗೆ ಅಗತ್ಯವಾದ ಎಲ್ಲಾ ಬೆಂಬಲಗಳನ್ನೂ ನೀಡಲಾಗುವುದು ಎಂದು ಕಂಪನಿಯು ತಿಳಿಸಿದೆ.

ಸಾಗರದಲ್ಲಿ ಮುಳುಗಿತು 4,000 ಐಷಾರಾಮಿ ಕಾರುಗಳನ್ನು ಸಾಗಿಸುತ್ತಿದ್ದ ಹಡಗು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.