ಬ್ಯೂಟಿಪಾರ್ಲರ್ಗಳಲ್ಲಿ ತಲೆ ತೊಳೆಯುವಾಗ, ಮಸಾಜ್ ಮಾಡಿಸಿಕೊಳ್ಳುವಾಗ ಕುತ್ತಿಗೆಯನ್ನು ತುಂಬಾ ಅವಧಿಯವರೆಗೆ ಹಿಂದಕ್ಕೆ ಬಾಗಿಸುವುದರಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ

ಬ್ಯೂ ಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್ ಈ ಪ್ರಕರಣವನ್ನು ಮೊದಲ ಬಾರಿಗೆ ಡಾ. ಮೈಕೇಲ್ ವಿಯ್ನೆಟ್ರಾಬ್ (Michel weintraub) 1992-93ರಲ್ಲಿ ನ್ಯೂಯಾರ್ಕ್ನ ವೈದ್ಯಕೀಯ ಕಾಲೇಜೊಂದರಲ್ಲಿ ಪ್ರಸ್ತಾಪಿಸಿದರು.

ಬ್ಯೂಟಿಪಾರ್ಲರಿಗೂ ಪಾರ್ಶ್ವವಾಯುವಿಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಈಚಿನ ದಿನಗಳಲ್ಲಿ ಬ್ಯೂಟಪಾರ್ಲರ್ಗಳಿಗೆ ಹೋಗದ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಆದರೆ, ನಿಮ್ಮ ಕುತ್ತಿಗೆಯನ್ನು ಬ್ಯೂಟಿಷಿಯನ್ಗಳಿಗೆ ಕೊಡುವ ಮುನ್ನ ಯೋಚಿಸಿ.

ಏನಾಗುತ್ತದೆ?

ಬ್ಯೂಟಿಪಾರ್ಲರ್ಗಳ ವಾಷ್ ಬೆಸಿನ್ನಲ್ಲಿ ತಲೆ ತೊಳೆಯುವಾಗ ಅಥವಾ ಹುಬ್ಬುಗಳನ್ನು ತೀಡುವಾಗ, ಮುಖದ ಮಸಾಜ್ ಮಾಡಿಸುವಾಗ ಬಹಳ ಕಾಲ ಕುತ್ತಿಗೆಯನ್ನು ಹಿಂದಕ್ಕೆ ಬಾಗಿಸಲಾಗುತ್ತದೆ. ಇದರಿಂದ ಕೆಲವು ಮಹಿಳೆಯರಲ್ಲಿ ಸ್ವಲ್ಪ ಸಮಯದ ನಂತರ ಏಕಾಏಕಿ ತಲೆಸುತ್ತು, ವಾಂತಿ, ಬಾಯಿ ತೊದಲುವಿಕೆ ಅಥವಾ ಕಣ್ಣಿನ ದೋಷ ಕಾಣಿಸಿಕೊಳ್ಳಬಹುದು. ದೇಹದ ಸಮತೋಲನ ತಪ್ಪಿ, ಮುಖ ಹಾಗೂ ದೇಹದ ಅರ್ಧ ಭಾಗದಲ್ಲಿ ಮರಗಟ್ಟುವಿಕೆಯ ಸಮಸ್ಯೆಗಳು ಕಾಣಿಸಿಕೊಳ್ಳಹುದು.

ಯಾಕೆ ಹೀಗಾಗುತ್ತದೆ?

ಮನುಷ್ಯರ ಕತ್ತಿನ ಭಾಗದಲ್ಲಿ ಮಿದುಳಿನ ರಕ್ತಸಂಚಾರಕ್ಕೆ ಅಗತ್ಯವಿರುವ ರಕ್ತನಾಳಗಳಿರುತ್ತವೆ. ಮುಂಭಾಗದಲ್ಲಿ ಕ್ಯಾರೋಟಿಡ್ ಆರ್ಟೀಸ್ ( carotid arteies)ಮತ್ತು ಹಿಂಭಾಗದಲ್ಲಿ ವರ್ಟಿಬ್ರೆಲ್ ಆರ್ಟೀಸ್ ( vertebral arteries)ಇರುತ್ತವೆ. ಕತ್ತನ್ನು ಬಹಳ ಹೊತ್ತು ಬಗ್ಗಿಸಿದಾಗ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ. ವಯಸ್ಸಾದವರಲ್ಲಿ ರಕ್ತನಾಳಗಳಲ್ಲಿ ಹೆಚ್ಚಿನ ಕೊಬ್ಬಿನಂಶ ಸೇರಿಕೊಂಡಿರುತ್ತದೆ. ಇದರ ಮೇಲೆ ಒತ್ತಡ ಬಿದ್ದಷ್ಟು ಮಿದುಳಿನ ರಕ್ತ ಸಂಚಾರದಲ್ಲಿ ವ್ಯತ್ಯಯ ಉಂಟಾಗುತ್ತದೆ.

ಇದಲ್ಲದೇ ಕತ್ತಿನ ಮೂಳೆಗಳಲ್ಲಿ ಚಿಕ್ಕ ಚಿಕ್ಕದಾಗಿ ಚೂಪಾದ ಮೂಳೆಗಳು ಬೆಳೆಯುವಿಕೆಯಿಂದಲೂ ಕುತ್ತಿಗೆಯ ಹಿಂಭಾಗದಲ್ಲಿರುವ ರಕ್ತನಾಳಗಳ ಮೇಲೆ ಒತ್ತಡ ಉಂಟಾಗುತ್ತದೆ. ಇಂಥ ಸಮಯದಲ್ಲಿ ಕುತ್ತಿಗೆ ಬಗ್ಗಿಸಿದಾಗ ರಕ್ತಸಂಚಲನಕ್ಕೆ ತೊಂದರೆಯಾಗಬಹುದು. ಇದರಿಂದ ಪಾರ್ಶ್ವವಾಯು ಸಂಭವಿಸಬಹುದು. ಕೆಲವೊಮ್ಮೆ ಹಿಂಬದಿಯ ರಕ್ತನಾಳ ಒಡೆದು ಹೋಗಿಯೂ ಹೀಗಾಗುತ್ತದೆ. ಸಣ್ಣ ಪ್ರಮಾಣದಲ್ಲಿ ಕಂಡರೆ ವರ್ಟಿಬ್ರೇಲ್ ಅರ್ಟ್ರಿಯಲ್ ಇನ್ಸಫಿಷಿಯೆನ್ಸಿ (vertebral arterial insufficiency )ಹಾಗೂ ತೀವ್ರ ಪ್ರಮಾಣದಲ್ಲಿ ಕಂಡರೆ ಪೋಸ್ಟಿರಿಯರ್ ಸರ್ಕ್ಯುಲೇಷನ್ ಸ್ಟ್ರೋಕ್ (posterior circulation stroke )ಎಂದು ಪರಿಗಣಿಸಲಾಗುತ್ತದೆ.

ಜಾಗ್ರತೆ ವಹಿಸುವುದು ಹೇಗೆ?

ಅಧಿಕ ರಕ್ತದ ಒತ್ತಡ, ಮಧುಮೇಹ, ರಕ್ತದಲ್ಲಿ ಕೊಬ್ಬಿನಂಶ, ಸ್ಥೂಲಕಾಯ ಸಮಸ್ಯೆ ಇರುವವರು ಹೆಚ್ಚು ಜಾಗ್ರತೆ ವಹಿಸಬೇಕು.

ಏಕಾಏಕಿ ಕತ್ತನ್ನು ತಿರುಗಿಸುವ ತಪ್ಪನ್ನು ಸೌಂದರ್ಯತಜ್ಞರು ಮಾಡಬಾರದು. ಸರಿಯಾದ ತರಬೇತಿ ಪಡೆದ, ವೃತ್ತಿಪರತೆ ಇರುವ ಸೌಂದರ್ಯತಜ್ಞರಲ್ಲಿ ಮಸಾಜ್ಗಳನ್ನು ಮಾಡಿಸಿಕೊಳ್ಳಿ. ಯಾವುದೇ ಚಿಕಿತ್ಸೆಯಿದ್ದರೂ ದೀರ್ಘಕಾಲದವರೆಗೆ ಕತ್ತನ್ನು ಹಿಂದಕ್ಕೆ ಬಾಗಿಸದಂತೆ ನೋಡಿಕೊಳ್ಳಿ.

-ಲೇಖಕಿ, ನರರೋಗತಜ್ಞರು, ಶಿವಮೊಗ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.