ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿ ವಸ್ತ್ರ ವಿನ್ಯಾಸಕ ಸಬ್ಯಸಾಚಿ ಮುಖರ್ಜಿ ಅವರ ‘ಮಂಗಳ ಸೂತ್ರ’ ಆಭರಣದ ಜಾಹೀರಾತು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಕಪ್ಪು ಕುಪ್ಪಸ ಧರಿಸಿದ ಮಹಿಳೆಯೊಬ್ಬರು ಕತ್ತಿಗೆ ಆಭರಣ ಧರಿಸಿದ ಚಿತ್ರವನ್ನು ಜಾಹೀರಾತಿನ ರೂಪದಲ್ಲಿ ಸಬ್ಯಸಾಚಿ ಅವರು ತಮ್ಮ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆಭರಣದ ಜಾಹೀರಾತಿಗಾಗಿ ಮಹಿಳೆಯನ್ನು ಅರೆನಗ್ನವಾಗಿ ಬಿಂಬಿಸಿದ್ದಕ್ಕಾಗಿ ಜನರಿಂದ ಆಕ್ಷೇಪ ವ್ಯಕ್ತವಾಗಿದೆ.

‘ಇದು ಯಾವುದೇ ಒಳ ಉಡುಪು ಅಥವಾ ಕಾಂಡೋಮ್‌ನ ಜಾಹೀರಾತು ಅಲ್ಲ. ಇದು ಸೃಜನಾತ್ಮಕ ದಿವಾಳಿತನ. ಮಂಗಳಸೂತ್ರದ ಜಾಹೀರಾತಿಗಾಗಿ ಅರೆ-ಬೆತ್ತಲೆ ಮಾಡೆಲ್‌ಗಳನ್ನು ಬಳಸಬೇಕೆ? ಎಂದು ಸಾಮಾಜಿಕ ತಾಣದಲ್ಲಿ ಪ್ರಶ್ನೆ ಮಾಡಲಾಗಿದೆ.

ಆಭರಣಗಳನ್ನು ಪ್ರದರ್ಶಿಸಲು ಬೇರೆ ಮಾರ್ಗವಿರಲಿಲ್ಲವೇ? ಎಂದು ಮತ್ತೊಬ್ಬರು ಪ್ರಶ್ನೆ ಕೇಳಿದ್ದಾರೆ. ಹಲವರು ಇದು ‘ಅಸಹ್ಯಕರ’ ಎಂದು ಕರೆದಿದ್ದಾರೆ.

ವಸ್ತ್ರ ವಿನ್ಯಾಸದಲ್ಲಿ ಅಂತರರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿರುವ ಸಬ್ಯಸಾಚಿ ಮುಖರ್ಜಿ ಅವರಿಗೆ ಬಾಲಿವುಡ್‌ನ ಹಲವು ಸ್ಟಾರ್‌ಗಳು ಗ್ರಾಹಕರಾಗಿದ್ದಾರೆ.

ದೀಪಿಕಾ ಪಡುಕೋಣೆ ಅವರೂ ತಮ್ಮ ವಿವಾಹಕ್ಕೆ ಸಬ್ಯಸಾಚಿ ಮುಖರ್ಜಿ ಅವರಿಂದಲೇ ಸೀರೆಗೆ ವಿನ್ಯಾಸ ಮಾಡಿಸಿದ್ದರು.

ಇವುಗಳನ್ನೂ ಓದಿ

ದಪ್ಪಗಿದ್ದರೆ, ಕಪ್ಪಗಿದ್ದರೆ ಮಾಡೆಲ್ ಆಗಲ್ವಾ?

ಮದುವೆ ಸೀರೆಯಲ್ಲಿ ದೀಪಿಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.