ಚಳಿಯ ತೀವ್ರತೆಗೆ ತೇವಾಂಶ ಕಡಿಮೆಯಾಗಿ ತುಟಿಗಳಲ್ಲಿ ಬಿರುಕು ಮೂಡುವುದು ಸಹಜ.ಅಂದದ ಮುಖಕ್ಕೆ ಅಧರದ ಆರೈಕೆಯು ಮುಖ್ಯ. ಚಳಿಗಾಲದಲ್ಲಿ ತುಟಿಗಳು ಒಡೆಯದಂತೆ ತಡೆಯಲು ಕೆಲವು ಮನೆಮದ್ದುಗಳನ್ನು ಅನುಸರಿಸಬಹುದು.

ಜೇನುತುಪ್ಪ: ತುಟಿಗಳ ಕೋಮಲತೆಯನ್ನು ಕಾಯ್ದುಕೊಳ್ಳಲು ಜೇನುತುಪ್ಪವನ್ನು ತುಟಿಗಳಿಗೆ ಹಚ್ಚಿ. ನಂತರ ಬೆರಳಿನಿಂದ ವೃತ್ತಾಕಾರವಾಗಿ ಮಸಾಜ್ ಮಾಡಿ. ತಣ್ಣೀರಿನಿಂದ ತುಟಿಗಳನ್ನು ತೊಳೆಯಿರಿ. ಇದು ತುಟಿಗಳನ್ನು ಮೃದುವಾಗಿ ಇಡಲು ಸಹಕರಿಸುತ್ತದೆ. ವಾರದಲ್ಲಿ ಕನಿಷ್ಠ ಎರಡು ಬಾರಿಯಾದರೂ ಜೇನುತುಪ್ಪದಿಂದ ಮಸಾಜ್ ಮಾಡಿ.

ಜೇನುಮೇಣದ ಮುಲಾಮು: ನೂರು ಗ್ರಾಂ ಜೇನುಮೇಣ ಕರಗಿಸಿ, ಅದಕ್ಕೆ 10 ಎಂ.ಎಲ್ ಕೊಬ್ಬರಿ ಎಣ್ಣೆ, 10 ಎಂ.ಎಲ್ ಬಾದಾಮಿ ತೈಲ ಬೆರೆಸಿ, ಮುಲಾಮು ರೀತಿ ತಯಾರಿಸಿಕೊಳ್ಳಿ. ಅದನ್ನು ನಿತ್ಯ ತುಟಿಗೆ ಮಸಾಜ್ ಮಾಡಿಕೊಳ್ಳಬಹುದು. ಅಂಗೈ ಮತ್ತು ಅಂಗಾಲಿಗೂ ಹಚ್ಚಿಕೊಳ್ಳಬಹುದು. ದೀರ್ಘಕಾಲ ಇಟ್ಟು ಬಳಸಬಹುದು. ಈ ಮುಲಾಮಿನ ಪ್ರಮಾಣ ಹೆಚ್ಚಿಗೆ ಬೇಕೆಂದರೆ, ಜೇನು ಮೇಣವನ್ನು ಹೆಚ್ಚಿಸಿ, ಅಷ್ಟೇ ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ, ಬಾದಾಮಿ ಎಣ್ಣೆಯನ್ನು ಹೆಚ್ಚು ಮಾಡಿ, ಮಿಶ್ರಮಾಡಿಕೊಂಡರೆ ಸಾಕು.

ಹಣ್ಣಿನ ತಿರುಳು:ಬಾಳೆ ಹಣ್ಣು, ಪಪ್ಪಾಯ ಹಣ್ಣಿನ ತುಂಡುಗಳನ್ನು ಚೆನ್ನಾಗಿ ತೆಳು ಮಾಡಿ, ಅದನ್ನು ನಿತ್ಯ ತುಟಿಗೆ ಲೇಪಿಸಿಕೊಂಡರೆ, ಮೃದುವಾಗುತ್ತದೆ. ತುಟಿ ಒಡೆಯುವುದು ತಪ್ಪುತ್ತದೆ.

ಬೆಂಡೆಕಾಯಿ ಮಿಶ್ರಣ:ಬೆಂಡೆಕಾಯಿ ರುಬ್ಬಿ, ಕೊಬ್ಬರಿ ಎಣ್ಣೆ ಅಥವಾ ಬಾದಾಮಿ ಎಣ್ಣೆ ಬೆರೆಸಿ ತುಟಿಗೆ ಲೇಪಿಸಿಕೊಳ್ಳಬಹುದು. ಇದನ್ನು ತಾಜಾವಾಗಿ ತಯಾರಿಸಿಕೊಂಡೇ ಲೇಪಿಸಿಕೊಳ್ಳಬೇಕು.

ಕೊಬ್ಬರಿ ಎಣ್ಣೆ: ಬಿರುಕು ಬಿಟ್ಟ ಹಿಮ್ಮಡಿಗಳಿಗೆ ಕೊಬ್ಬರಿ ಎಣ್ಣೆ ಬಳಸುತ್ತೇವೆ. ಹಾಗೆಯೇ ತುಟಿಗಳಿಗೂ ಇದನ್ನು ಹಚ್ಚಬಹುದು. ಇದರಿಂದ ತುಟಿಗಳ ತೇವಾಂಶ ಉಳಿಯುತ್ತದೆ. ಆಗಾಗ್ಗೆ ಕೊಬ್ಬರಿ ಎಣ್ಣೆಯನ್ನು ತುಟಿಗಳಿಗೆ ಹಚ್ಚಿಕೊಳ್ಳುವ ರೂಢಿ ಮಾಡಿಕೊಳ್ಳಿ.

(ಪೂರಕ ಮಾಹಿತಿ: ಡಾ. ವಸುಂಧರಾ ಭೂಪತಿ, ಆಯುರ್ವೇದ ವೈದ್ಯೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.