ಸುಭಿಕ್ಷ ಮತ್ತು ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಜೆಟ್ ಭಾಷಣ ಆರಂಭಿಸಿದ್ದರು. 2020-21ನೇ ಸಾಲಿನ ಬಜೆಟ್ನಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ಕೈಗೊಂಡ ಯೋಜನೆಗಳು, ಮೀಸಲಿರಿಸಿದ ಅನುದಾನಗಳ ಮಾಹಿತಿ ಇಲ್ಲಿದೆ.

* ಬಾಲಮಂದಿರದಿಂದ 21 ವರ್ಷ ತುಂಬಿದ ನಂತರ ಬಿಡುಗಡೆ ಹೊಂದುವವರಿಗೆ ಉದ್ಯೋಗ ಪ್ರಾರಂಭಿಸಲು ಹಾಗೂ ಅವರ ಮುಂದಿನ ಜೀವನೋಪಾಯವನ್ನು ರೂಪಿಸಿಕೊಳ್ಳಲು ತಿಂಗಳಿಗೆ ₹5000 ಗಳಂತೆ ಗರಿಷ್ಟ ಮೂರುವರ್ಷದ ವರೆಗೆ ಆರ್ಥಿಕ ನೆರವು ನೀಡುವ 'ಉಪಕಾರ ಯೋಜನೆ'.

* ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ ಹೊಸದಾಗಿ ಏಳು ಬಾಲ ಮಂದಿರಗಳನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ₹5.67 ಕೋಟಿ ಒದಗಿಸಲಾಗುವುದು.

* ಯುವಕ /ಯುವತಿಯರಿಗೆ ಕೌಶಲಾಭಿವೃದ್ಧಿ ಇಲಾಖೆಯ ವತಿಯಿಂದ ಕೌಶಲ್ಯ ತರಬೇತಿ ಉದ್ಯೋಗವಕಾಶ ಕಲ್ಪಿಸಲಾಗುವುದು. ಇದಕ್ಕಾಗಿ ₹1 ಕೋಟಿಮೀಸಲು .

* ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲು ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರಗಳನ್ನು ರಚಿಸಿ ಅವರಿಗೆ ಬೇಕಾದ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ. ಸದರಿ ಕೇಂದ್ರಗಳನ್ನು ಆಧುನೀಕರಣಗೊಳಿಸಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು 15 ಲಕ್ಷ ರೂಗಳಿಂದ 20 ಲಕ್ಷಗಳವರೆಗೆ ಬಡ್ಡಿರಹಿತ ಸಾಲವನ್ನು ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದ ಕಿರುಸಾಲ ಯೋಜನೆಯಡಿ ನೀಡಿಲು ಪ್ರಸ್ತಾಪ. ಇದಕ್ಕಾಗಿ ₹20 ಕೋಟಿ ಅನುದಾನ.

ಇದನ್ನೂ ಓದಿ:ರಾಜ್ಯ ಬಜೆಟ್ ಪ್ರತಿಕ್ರಿಯೆ Live | ಕಲ್ಯಾಣ ಕರ್ನಾಟಕ ಕಡೆಗಣನೆ: ಪ್ರಿಯಾಂಕ್ ಖರ್ಗೆ

* ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯಲ್ಲಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಸುಧಾರಣಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಸಮಾಜದ ಶೋಷಿತ ವರ್ಗದವರಿಗೆ ಆಶ್ರಮ ನೀಡುವ ಈ ಸಂಸ್ಥೆಗಳನ್ನುಒಂದು ಮಾಸ್ಟರ್ ಪ್ಲಾನ್ ತಯಾಗಿರಿಸಿ ಅಭಿವೃದ್ದಿ ಪಡಿಸಲು ಯೋಜನೆ. ಇದಕ್ಕಾಗಿ ₹5 ಕೋಟಿ ಅನುದಾನ ಮೀಸಲು.

* ರಾಜ್ಯದಲ್ಲಿ 2019ರಲ್ಲಿ ಸಂಭವಿಸಿದ ನೆರೆಹಾವಳಿಯಿಂದ ಹಾನಿ ಗೊಂಡಿರುವ 842 ಅಂಗನವಾಡಿ ಕೇಂದ್ರಗಳ ಪುನರ್ ನಿರ್ಮಾಣವನ್ನು ₹138 ಕೋಟಿವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

* ಮಹಿಳಾ ಮತ್ತು ಮಕ್ಕಳ ಇಲಾಖೆಯ ವತಿಯಿಂದ ನಡೆಸಲಾಗುತ್ತಿರುವ ಸಮಾಲೋಚನಾ ಕೇಂದ್ರಗಳು, ವಿಶೇಷ ಚಿಕಿತ್ಸಾ ಘಟಕಗಳು, ಆಶ್ರಯಗೃಹಗಳು, ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯಗಳು ಹಾಗೂ ಕಾನೂನಿನ ನೆರವು ಮತ್ತು ಇತರೆ ಸೌಲಭ್ಯಗಳನ್ನು ಒಳಗೊಂಡಿರುವ ಇಲಾಖೆಯ ಎಲ್ಲ ಕಾರ್ಯಕ್ರಮಗನ್ನು ಪಾರದರ್ಶಕವಾಗಿ ತಲುಪಿಸಲು ಸಹಾಯಕವಾಗುವಂತೆ 'ಮಹಿಳಾ ಸುರಕ್ಷತಾ ಪೋರ್ಟಲ್' ಪ್ರಾರಂಭಿಸಲಾಗುವುದು.

* ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳನ್ನುಸರ್ಕಾರದ ಇಲಾಖೆಗಳಲ್ಲಿ ಅವಶ್ಯಕತೆಗನುಸಾರ ಖರೀದಿ ಮಾಡಲಾಗುವುದು.

* ಕರ್ನಾಟಕ ರಾಜ್ಯ ಟ್ರಾನ್ಸ್ಜೆಂಡರ್ನೀತಿಯನ್ನು 2017ನೇ ಸಾಲಿನಲ್ಲಿ ಜಾರಿಗೊಳಿಸಲಾಗಿದೆ. ಇದಕ್ಕೆ ಪೂರಕವಾಗಿ ರಾಜ್ಯಾದಾದ್ಯಂತ ಟ್ರಾನ್ಸ್ಜೆಂಡರ್ಗಳ ಬೇಸ್ ಲೇನ್ ಸಮೀಕ್ಷೆಯನ್ನು 2020- 21ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ₹70 ಲಕ್ಷವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಿದೆ.

* ಬೆಂಗಳೂರು ನಗರದ 2 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸುರಕ್ಷಾ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಈ ಸೇವೆಯನ್ನು ರಾಜ್ಯವ್ಯಾಪಿ ವಿಸ್ತರಿಸುತ್ತೇವೆ. ಮಹಿಳೆಯರಿಗೆ ತುರ್ತ ಸ್ಪಂದನಾ ವಾಹನಗಳ ಮೂಲಕ ರಕ್ಷಣೆ ನೀಡಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ.

* ನವಜಾತ ಶಿಶುಗಳ ಪೋಷಣೆ ಸುಧಾರಿಸಲು ವೈದ್ಯಕೀಯ ಕಾಲೇಜುಗಳಲ್ಲಿ ಅಗತ್ಯ ಘಟಕಗಳ ಸ್ಥಾಪನೆ. ಎಲ್ಲ ನವಜಾತ ಶಿಶುಗಳಿಗೆ ಶ್ರವಣ ದೋಷ ಪರಿಶೀಲನೆಗೆ ಕ್ರಮ. ಶ್ರವಣ ದೋಷ ಮುಕ್ತ ರಾಜ್ಯವಾಗಿಸಲು ನಿರ್ಧಾರ.

*ಮೀನುಗಾರ ಮಹಿಳೆಯರು ಮೀನು ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಮೀನುಗಾರ ಮಹಿಳೆಯರು ಮೀನು ಇಳಿದಾಣದಿಂದ ಮಾರುಕಟ್ಟೆಗೆ ತ್ವರಿತವಾಗಿ ಮೀನು ಸಾಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ 1000 ಮೀನುಗಾರ ಮಹಿಳೆಯರಿಗೆ ಮಹಿಳಾ ಮೀನುಗಾರ ಸಬಲೀಕರಣ ಯೋಜನೆಯ ಮೂಲಕ ದ್ವಿಚತ್ರ ವಾಹನಗಳನ್ನು ನೀಡಲು ಉದ್ದೇಶಿಸಲಾಗಿದೆ.ಈ ಯೋಜನೆಯನ್ನು 5 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.

ಇದನ್ನೂ ಓದಿ:ಕರ್ನಾಟಕ ಬಜೆಟ್ 2020: ಮುಖ್ಯಾಂಶಗಳು

*ಅಂಧ ತಾಯಂದಿರಿಗೆ ಮಾಸಿಕ ₹2000 ರೂಗಳಂತೆ ಶಿಶುಪಾಲನಾ ಭತ್ಯೆಯನ್ನು ರಾಜ್ಯ ಸರ್ಕಾರವು ಮಗುವಿನ ಮೊದಲು ಎರಡು ವರ್ಷದವರೆಗೆ ನೀಡುತ್ತಿದೆ. ಈ ಭತ್ಯೆಯನ್ನು ಮಕ್ಕಳ ಮೊದಲ 5 ವರ್ಷದವರೆಗೆ ನೀಡಲಾಗುವುದು.

*ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಲಕ್ಷ ಮಹಿಳಾ ಕಾರ್ಮಿಕರಿಗೆ ವನಿತಾ ಸಂಗಾತಿ ಯೋಜನೆಯಡಿ ಮಾಸಿಕ ಬಸ್ ಪಾಸ್ಗಳನ್ನು ಕಾರ್ಖಾನೆಯ ಮಾಲೀಕರು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದೊಂದಿಗೆ ಒದಗಿಸಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ₹25 ಕೋಟಿ ಮೊತ್ತದ ಅನುದಾನ ಮೀಸಲಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.