ಹೊಸದಾಗಿ ರಚನೆಯಾಗಿರುವ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ ಮತ್ತು ಲಡಾಖ್ಗೆ 2020–21ನೇ ಸಾಲಿನ ಬಜೆಟ್ನಲ್ಲಿ ₹30,757 ಕೋಟಿ ಅನುದಾನ ನೀಡಲಾಗಿದೆ.

ಇದರಲ್ಲಿ ₹279 ಕೋಟಿಯನ್ನು ವಿಪತ್ತು ನಿರ್ವಹಣಾ ನಿಧಿಗೆ ದೇಣಿಗೆಯ ರೂಪದಲ್ಲಿ ಹಾಗೂ ₹30,478 ಕೋಟಿಯನ್ನು ರಾಜ್ಯಗಳ ಸಂಪನ್ಮೂಲ ಕೊರತೆಯನ್ನು ಸರಿದೂಗಿಸುವ ಉದ್ದೇಶದಿಂದ ನೀಡಲಾಗಿದೆ.

ಲಡಾಖ್ಗೆ ₹5958 ಕೋಟಿ ನೀಡಲಾಗಿದೆ. ಅದರಲ್ಲಿ ₹83.38 ಕೋಟಿ ಗ್ರಾಮೀಣಾಭಿವೃದ್ಧಿಗೆ, ₹80.69 ಕೋಟಿ ಲೋಕೋಪಯೋಗಿ ಕೆಲಸಗಳಿಗೆ, ₹54.07 ಕೋಟಿ ವಿದ್ಯುತ್ ಕ್ಷೇತ್ರಕ್ಕೆ, ₹52 ಕೋಟಿ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಹಾಗೂ ₹47.50 ಕೋಟಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ನೀಡಲಾಗಿದೆ. ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.