ಭಾರತದಲ್ಲಿ ಪ್ರಮುಖವಾಗಿ ಎರಡು ಷೇರುಪೇಟೆ ಸೂಚ್ಯಂಕಗಳಿವೆ (ಇಂಡೆಕ್ಸ್) – ಮುಂಬೈ ಷೇರುಪೇಟೆಯನ್ನು ಪ್ರತಿನಿಧಿಸುವ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆಯನ್ನು ಪ್ರತಿನಿಧಿಸುವ ನಿಫ್ಟಿ. ಈ ಸೂಚ್ಯಂಕಗಳನ್ನು ಯಥಾವತ್ತಾಗಿ ಅನುಕರಿಸಿ ಕೆಲ ಮ್ಯೂಚುವಲ್ ಫಂಡ್‌ಗಳು ರೂಪುಗೊಂಡಿವೆ. ಷೇರು ಮಾರುಕಟ್ಟೆಯ ಭಾಷೆಯಲ್ಲಿ ಈ ರೀತಿಯ ಫಂಡ್‌ಗಳನ್ನು ಇಂಡೆಕ್ಸ್ ಮ್ಯೂಚುವಲ್ ಫಂಡ್ ಎಂದು ಕರೆಯುತ್ತಾರೆ. ಇಂಡೆಕ್ಸ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಯಾರಿಗೆ ಅನುಕೂಲ? ಇದು ಹೇಗೆ ರೂಪುಗೊಂಡಿದೆ? ವೆಚ್ಚ ಅನುಪಾತ (ಎಕ್ಸ್‌ಪೆನ್ಸ್ ರೇಷಿಯೋ) ಇಲ್ಲಿ ಎಷ್ಟು?

ಇಂಡೆಕ್ಸ್ (ಸೂಚ್ಯಂಕ) ಏಕೆ ಬೇಕು?: ಬೆಂಗಳೂರಿನಲ್ಲಿ ಸದ್ಯದ ಸಂಚಾರ ದಟ್ಟಣೆ ಹೇಗಿದೆ ಎಂದು ನಾನು ನಿಮ್ಮನ್ನು ಕೇಳಿದರೆ ಅದಕ್ಕೆ ನೀವು ಹೇಗೆ ಉತ್ತರಿಸುವಿರಿ? ನಗರದಲ್ಲಿ ಸಾವಿರಾರು ರಸ್ತೆಗಳಿವೆ. ಎಲ್ಲಾ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೇಗಿದೆ ಎನ್ನುವುದನ್ನು ಪರಿಶೀಲಿಸಿ ಉತ್ತರ ಕಂಡುಕೊಳ್ಳುವುದು ಕಷ್ಟ. ಹೀಗಿರುವಾಗ ನಗರದ ಪ್ರಮುಖ ದಿಕ್ಕುಗಳ ಮುಖ್ಯ ರಸ್ತೆಗಳನ್ನು ಗಮನಿಸಿ ಸಂಚಾರ ದಟ್ಟಣೆ ಹೆಚ್ಚಿದೆಯೋ, ಕಡಿಮೆ ಇದೆಯೋ ಎನ್ನುವ ನಿರ್ಣಯಕ್ಕೆ ಬರುತ್ತೀರಿ.

ಇದನ್ನೇ ಆಧಾರವಾಗಿಟ್ಟುಕೊಂಡು, ಷೇರು ಮಾರುಕಟ್ಟೆ ಇಂದು ಹೇಗೆ ವರ್ತಿಸುತ್ತಿದೆ ಎಂದು ನಾನು ನಿಮ್ಮನ್ನು ಪ್ರಶ್ನಿಸಿದರೆ ನೀವು ಹೇಗೆ ಉತ್ತರಿಸಬಹುದು? ಮುಂಬೈ ಷೇರುಪೇಟೆಯಲ್ಲಿ (ಬಿಎಸ್‌ಇ) ಸುಮಾರು ಐದು ಸಾವಿರ ಕಂಪನಿಗಳ ಷೇರುಗಳ ಖರೀದಿ–ಮಾರಾಟ ನಡೆಯುತ್ತದೆ, ರಾಷ್ಟ್ರೀಯ ಷೇರುಪೇಟೆಯಲ್ಲಿ (ಎನ್‌ಎಸ್‌ಸಿ) ಸುಮಾರು ಎರಡು ಸಾವಿರ ಕಂಪನಿಗಳ ಷೇರು ವಹಿವಾಟು ನಡೆಯುತ್ತದೆ. ಪ್ರತಿ ಕಂಪನಿಯ ಏರಿಳಿತ ಪರಿಶೀಲಿಸಿ ಉತ್ತರ ದಾಖಲಿಸುವುದು ಸವಾಲಿನ ಕೆಲಸ. ಹಾಗಾಗಿ ಪ್ರಮುಖ ವಲಯಗಳ ಆಯ್ದ ಕಂಪನಿಗಳ ಸ್ಥಿತಿಗತಿ ತಿಳಿದು ನೀವು ಮಾರುಕಟ್ಟೆಯ ಏರಿಳಿತವನ್ನು ಕಂಡುಕೊಳ್ಳುತ್ತೀರಿ.

ಹೀಗೆ ಪ್ರಮುಖ ಕಂಪನಿಗಳ ಸ್ಥಿತಿಗತಿ ಆಧರಿಸಿ ಮಾರುಕಟ್ಟೆಯ ಏರಿಳಿತ ತಿಳಿಸುವುದನ್ನು ಷೇರುಪೇಟೆ ಸೂಚ್ಯಂಕ (ಇಂಡೆಕ್ಸ್) ಎಂದು ಕರೆಯುತ್ತಾರೆ. ಭಾರತದಲ್ಲಿ ಪ್ರಮುಖವಾಗಿ ಎರಡು ಸೂಚ್ಯಂಕಗಳಿವೆ. ಸೆನ್ಸೆಕ್ಸ್ ಸೂಚ್ಯಂಕ ಆಯ್ದ ಪ್ರಮುಖ 30 ಕಂಪನಿಗಳ ಏರಿಳಿತ ಗಮನಿಸಿ ಷೇರುಪೇಟೆಯ ಏರಿಳಿತವನ್ನು ತಿಳಿಸುತ್ತದೆ. ಹಾಗೆಯೇ ನಿಫ್ಪಿ ಪ್ರಮುಖ 50 ಕಂಪನಿಗಳ ಏರಿಳಿತವನ್ನು ಗಣನೆಗೆ ತೆಗೆದುಕೊಂಡು ಮಾರುಕಟ್ಟೆ ಸಕಾರಾತ್ಮಕವಾಗಿದೆಯೋ ನಕಾರಾತ್ಮಕವಾಗಿದೆಯೋ ತಿಳಿಸುತ್ತೆ.

ಇಂಡೆಕ್ಸ್ ಫಂಡ್ ಅಂದರೇನು?: ನಿಫ್ಟಿ ಸೂಚ್ಯಂಕದಲ್ಲಿ ರಿಲಯನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೊಸಿಸ್, ಹಿಂದೂಸ್ಥಾನ್ ಯುನಿಲಿವರ್, ಐಸಿಐಸಿಐ ಬ್ಯಾಂಕ್ ಸೇರಿ ಪ್ರಮುಖ 50 ಪ್ರಾತಿನಿಧಿಕ ಕಂಪನಿಗಳಿವೆ. ಈ ಸೂಚ್ಯಂಕದಲ್ಲಿರುವ ಎಲ್ಲಾ 50 ಕಂಪನಿಗಳನ್ನು ಯಥಾವತ್ತಾಗಿ ಒಳಗೊಂಡ ಒಂದು ಮ್ಯೂಚುವಲ್ ಫಂಡ್ ರೂಪಿಸಿ ಹೂಡಿಕೆ ಮಾಡುವ ವ್ಯವಸ್ಥೆಯೇ ಇಂಡೆಕ್ಸ್ ಮ್ಯೂಚುವಲ್ ಫಂಡ್. ಇಂಡೆಕ್ಸ್ ಫಂಡ್‌ನಲ್ಲಿ ಫಂಡ್ ಮ್ಯಾನೇಜರ್ ಇಲ್ಲದ ಕಾರಣ ವೆಚ್ಚ ಅನುಪಾತ ಅಂದರೆ, ನಿರ್ವಹಣಾ ಶುಲ್ಕ ಕಡಿಮೆ. ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳ ವೆಚ್ಚ ಅನುಪಾತ ಶೇಕಡ 1.5ರಷ್ಟಿದ್ದರೆ ಇಂಡೆಕ್ಸ್ ಫಂಡ್‌ಗಳ ವೆಚ್ಚ ಅನುಪಾತ ಶೇ 0.2ರಷ್ಟು.

ವೆಚ್ಚ ಅನುಪಾತ ಶುಲ್ಕ ಕಡಿಮೆ ಇರುವುದರಿಂದ ಇಲ್ಲಿ ಹೂಡಿಕೆದಾರನಿಗೆ ಹೆಚ್ಚು ಉಳಿತಾಯ ಸಾಧ್ಯವಾಗುತ್ತದೆ. ಷೇರು ಮಾರುಕಟ್ಟೆ ಎಷ್ಟು ಪ್ರಮಾಣದಲ್ಲಿ ಏರಿಕೆ ಕಾಣುವುದೋ ಅಷ್ಟು ಲಾಭ ಸಿಕ್ಕರೆ ಸಾಕು, ಹೆಚ್ಚು ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎನ್ನುವವರಿಗೆ ಇಂಡೆಕ್ಸ್ ಫಂಡ್ ಒಳ್ಳೆಯ ಆಯ್ಕೆ. ಇಂಡೆಕ್ಸ್ ಫಂಡ್ ಮೂಲಕ ಹತ್ತಾರು ವಲಯಗಳ ಕಂಪನಿಗಳಲ್ಲಿ ನಿಮ್ಮ ಹಣ ತೊಡಗಿಸುವುದರಿಂದ ಹೂಡಿಕೆ ವೈವಿಧ್ಯತೆಯೂ ಸುಲಭ.

ಇಂಡೆಕ್ಸ್ ಫಂಡ್, ಪ್ಯಾಸಿವ್ ಫಂಡ್: ಪ್ಯಾಸಿವ್ ಫಂಡ್‌ಗಳಲ್ಲಿ ಯಾವ ಷೇರಿನಲ್ಲಿ ಹೂಡಿಕೆ ಮಾಡಬೇಕು, ಯಾವುದರಲ್ಲಿ ಹೂಡಿಕೆ ಮಾಡಬಾರದು ಎನ್ನುವ ನಿರ್ಧಾರವನ್ನು ಫಂಡ್ ಮ್ಯಾನೇಜರ್ ತೆಗೆದುಕೊಳ್ಳುವುದಿಲ್ಲ. ಸೂಚ್ಯಂಕದ ಭಾಗವಾಗಿರುವ ಕಂಪನಿಗಳ ಷೇರುಗಳಲ್ಲಿಯೇ ಇಂಡೆಕ್ಸ್ ಫಂಡ್‌ಗಳು ಹಣ ತೊಡಗಿಸುತ್ತವೆ. ಈ ಕಾರಣದಿಂದ ಇಂಡೆಕ್ಸ್ ಫಂಡ್ ಪ್ಯಾಸಿವ್ ಫಂಡ್ ಎಂದು ಕರೆಸಿಕೊಳ್ಳುತ್ತದೆ.

ಆ್ಯಕ್ಟಿವ್ ಫಂಡ್‌ಗಳಲ್ಲಿ ಯಾವ ಷೇರಿನಲ್ಲಿ ಹೂಡಿಕೆ ಮಾಡಬೇಕು, ಯಾವುದರಲ್ಲಿ ಹೂಡಿಕೆ ಮಾಡಬಾರದು ಎನ್ನುವ ನಿರ್ಧಾರವನ್ನು ಫಂಡ್ ಮ್ಯಾನೇಜರ್ ತೆಗೆದುಕೊಳ್ಳುತ್ತಾರೆ. ಈಕ್ವಿಟಿ, ಡೆಟ್ ಮತ್ತು ಹೈಬ್ರಿಡ್ ಮ್ಯೂಚುವಲ್ ಫಂಡ್‌ಗಳು ಆ್ಯಕ್ಟಿವ್ ಫಂಡ್‌ಗೆ ಉತ್ತಮ ಉದಾಹರಣೆ.

ಯಾವ ಫಂಡ್ ಆಯ್ಕೆ ಮಾಡಬೇಕು: ಖಂಡಿತವಾಗಿಯೂ ಆ್ಯಕ್ಟಿವ್ ಫಂಡ್‌ಗಳು ಇಂಡೆಕ್ಸ್ ಫಂಡ್‌ಗಳಿಗಿಂತ ಹೆಚ್ಚು ಲಾಭ ನೀಡುವ ಸಾಮರ್ಥ್ಯ ಹೊಂದಿವೆ. ಆದರೆ, ಆ್ಯಕ್ಟಿವ್ ಫಂಡ್‌ಗಳ ಪೈಕಿ ಯಾವ ಫಂಡ್ ಉತ್ತಮವಾಗಿ ಲಾಭ ನೀಡುತ್ತಿದೆ ಎನ್ನುವುದನ್ನು ನೀವು ನಿರಂತರವಾಗಿ ಗಮನಿಸುತ್ತಿರಬೇಕು. ಹೆಚ್ಚು ತಲೆನೋವು ಬೇಡ, ಹೂಡಿಕೆ ರಿಸ್ಕ್ ಕಡಿಮೆಯಿದ್ದರೆ ಒಳ್ಳೆಯದು ಎನ್ನುವವರು ಇಂಡೆಕ್ಸ್ ಫಂಡ್ ಪರಿಗಣಿಸಬಹುದು. ಹೂಡಿಕೆ ವೈವಿಧ್ಯತೆ ಕಾಯ್ದುಕೊಳ್ಳುವುದಕ್ಕೂ ಇಂಡೆಕ್ಸ್ ಫಂಡ್ ಒಳ್ಳೆಯ ಆಯ್ಕೆ.

ಅನಿಶ್ಚಿತತೆಯ ನಡುವೆ ಜಿಗಿದ ಷೇರುಪೇಟೆ
ಅನಿಶ್ಚಿತತೆಯ ನಡುವೆಯೂ ಆಗಸ್ಟ್ 27ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡಿವೆ. 56,124 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 1.43ರಷ್ಟು ಜಿಗಿದಿದೆ. 16,705 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.54ರಷ್ಟು ಹೆಚ್ಚಳವಾಗಿದೆ. ಬಿಎಸ್‌ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಶೇ 2ರಿಂದ ಶೇ 2.5ರಷ್ಟು ಏರಿಕೆ ದಾಖಲಿಸಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ತೈಲ ಮತ್ತು ಅನಿಲ ಸೂಚ್ಯಂಕ ಶೇ 4.4ರಷ್ಟು ಹೆಚ್ಚಳ ಕಂಡಿದೆ. ನಿಫ್ಟಿ ಎನರ್ಜಿ, ಲೋಹ ಮತ್ತು ಮಾಹಿತಿ ತಂತ್ರಜ್ಞಾನ ಸೂಚ್ಯಂಕಗಳು ಶೇ 2ರಿಂದ ಶೇ 3ರಷ್ಟು ಜಿಗಿದಿವೆ. ವಾಹನ ಸೂಚ್ಯಂಕ ಶೇ 1ರಷ್ಟು ಕುಸಿದಿದೆ.

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಹಿಂಡಾಲ್ಕೋ ಶೇ 8.49ರಷ್ಟು, ಬಜಾಜ್ ಫಿನ್‌ಸರ್ವ್ ಶೇ 8.06ರಷ್ಟು, ಒಎನ್‌ಜಿಸಿ ಶೇ 5.85ರಷ್ಟು, ಅದಾನಿ ಪೋರ್ಟ್ಸ್ ಶೇ 5.65ರಷ್ಟು ಮತ್ತು ಟಿಸಿಎಸ್ ಶೇ 4.51ರಷ್ಟು ಜಿಗಿತ ಕಂಡಿವೆ. ಮಾರುತಿ ಸುಜುಕಿ, ಏರ್‌ಟೆಲ್, ಟೈಟಾನ್ ಮತ್ತು ಪಿರಾಮಲ್ ಎಂಟರ್‌ಪ್ರೈಸಸ್ ಕುಸಿತ ಕಂಡಿವೆ.

ಮುನ್ನೋಟ: ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕಳೆದ ವಾರ ಉತ್ತಮ ಏರಿಕೆ ಕಂಡಿವೆ. ಅದು ಈ ವಾರವೂ ಮುಂದುವರಿಯಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಏರ್‌ಟೆಲ್ ಬಂಡವಾಳ ಸಂಗ್ರಹಣೆ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆಗಸ್ಟ್ ವಾಹನ ಮಾರಾಟ ದತ್ತಾಂಶ ಹೊರಬೀಳಲಿದೆ. ಕಂಪನಿಗಳು ಮುಂದಿನ ತ್ರೈಮಾಸಿಕ ಫಲಿತಾಂಶಗಳ ಬಗ್ಗೆ ಯಾವ ಮುನ್ನೋಟ ಹೊಂದಿರಲಿವೆ ಎನ್ನುವುದು ಕೂಡ ಮುಖ್ಯವಾಗಲಿದೆ.

ವಾರಾಂತ್ಯದಲ್ಲಿ ಅಮೆರಿಕದ ಉದ್ಯೋಗ ಅಂಕಿ–ಅಂಶ ಹೊರಬೀಳಲಿದ್ದು, ಈ ಎಲ್ಲಾ ಅಂಶಗಳು ಮಾರುಕಟ್ಟೆಯ
ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.