ಬೆಂಗಳೂರು: ಕಳೆದ ಶುಕ್ರವಾರದಿಂದ ‘ಕ್ಯಾಶ್ ಆನ್ ಡೆಲಿವರಿ’ ವೇಳೆ ಶೇಕಡಾ 72%ರಷ್ಟು ಗ್ರಾಹಕರು ₹2,000 ಮುಖಬೆಲೆಯ ನೋಟುಗಳನ್ನೇ ನೀಡುತ್ತಿರುವುದಾಗಿ ಆ್ಯಪ್ ಆಧಾರಿತ ಆಹಾರ ಪೂರೈಕೆ ಕಂಪನಿ ಜೊಮ್ಯಾಟೊ ಟ್ವೀಟ್ ಮಾಡಿ ತಿಳಿಸಿದೆ.

₹ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಘೋಷಿಸಿತು. ಸಾರ್ವಜನಿಕರು ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಡಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ತಿಳಿಸಿತ್ತು.

ಆರ್‌ಬಿಐನ ನಿರ್ಧಾರದಿಂದಾಗಿ ಗ್ರಾಹಕರು ಹೆಚ್ಚಾಗಿ ‘ಕ್ಯಾಶ್ ಆನ್ ಡೆಲಿವರಿ’ಗೆ ಮೊರೆ ಹೋಗಿದ್ದು, ಹಣ ನೀಡುವ ವೇಳೆ ಹೆಚ್ಚಾಗಿ ₹2 ಸಾವಿರದ ನೋಟುಗಳನ್ನೇ ನೀಡುತ್ತಿದ್ದಾರೆ ಎನ್ನಲಾಗಿದೆ.

ಜೊಮ್ಯಾಟೊ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು, ನನ್ನ ಮುಂದಿನ ಆಯ್ಕೆ ಕ್ಯಾಶ್ ಆನ್ ಡೆಲಿವರಿ ಆಗಿರುತ್ತದೆ ಎಂದು ಬರೆದಿದ್ದಾರೆ. ಮತ್ತೊಬ್ಬರು ‘ಆಧುನಿಕ ಸಮಸ್ಯೆಗಳಿಗೆ ಆಧುನಿಕ ಪರಿಹಾರಗಳೇ ಬೇಕಾಗುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.