ನವದೆಹಲಿ: ದೇಶದಲ್ಲಿ ಫಾಸ್ಟ್ಯಾಗ್ ಬಳಸುವ ಶೇ 75ರಷ್ಟು ಬಳಕೆದಾರರು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಲೋಕಲ್‌ಸರ್ಕಲ್ಸ್ ಸಂಸ್ಥೆಯ ಸಮೀಕ್ಷೆ ತಿಳಿಸಿದೆ.

ಹಲವು ವೇಳೆ ಫಾಸ್ಟ್ಯಾಗ್‌ಗಳು ಸರಿಯಾಗಿ ಸ್ಕ್ಯಾನ್ ಆಗುವುದಿಲ್ಲ ಹಾಗೂ ಬಳಕೆ ಮಾಡದಿದ್ದರೂ ಏಕಾಏಕಿ ಹಣ ಕಡಿತವಾಗುತ್ತದೆ ಎಂದು ಆನ್‌ಲೈನ್‌ನಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

ಟೋಲ್‌ಗಳ ಬಳಿ ತಾಂತ್ರಿಕ ಸಮಸ್ಯೆಯಿಂದ ಹಲವು ವೇಳೆ ಎರಡೆರಡು ಬಾರಿ ಹಣ ಕಡಿತವಾಗಿರುವ ನಿದರ್ಶನಗಳಿವೆ ಎಂದು ಬಳಕೆದಾರರು ತಿಳಿಸಿದ್ದಾರೆ.

ಒಟ್ಟು 12,638 ಬಳಕೆದಾರರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಪೈಕಿ ಶೇ 20ರಷ್ಟು ಬಳಕೆದಾರರು ಎರಡು ಬಾರಿ ಹಣ ಪಾವತಿ, ಕಾರ್ಡ್ ರೀಡರ್ ಸಮಸ್ಯೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

2023–24ನೇ ಹಣಕಾಸು ವರ್ಷದ ಮೊದಲ ಹತ್ತು ತಿಂಗಳ ಅವಧಿಯಲ್ಲಿ ₹53,289 ಕೋಟಿ ಟೋಲ್ ಸಂಗ್ರಹವಾಗಿದೆ. ಈ ಆರ್ಥಿಕ ವರ್ಷದಲ್ಲಿ ₹62 ಸಾವಿರ ಕೋಟಿ ಸಂಗ್ರಹವಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸಾರಿಗೆ ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.