ನವದೆಹಲಿ: ನೇಪಾಳದಿಂದ 5 ಟನ್ ಟೊಮೆಟೊ ಆಮದು ಮಾಡಿಕೊಳ್ಳಲಾಗುತ್ತಿದ್ದು, ಅದನ್ನು ಉತ್ತರ ಪ್ರದೇಶದಲ್ಲಿ ಕೆ.ಜಿ.ಗೆ ₹50ರಂತೆ ಗುರುವಾರದಿಂದ ಮಾರಾಟ ಮಾಡಲಾಗುವುದು ಎಂದು ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್ಸಿಸಿಎಫ್) ಬುಧವಾರ ತಿಳಿಸಿದೆ.

ನೇಪಾಳದಿಂದ ಒಟ್ಟು 10 ಟನ್ ಟೊಮೆಟೊ ತರಿಸಿಕೊಳ್ಳಲು ನಿರ್ಧರಿಸಲಾಗಿದೆ. ಅದರಲ್ಲಿ 3–4 ಟನ್ನಷ್ಟು ಟೊಮೆಟೊವನ್ನು ಮಂಗಳವಾರ ಉತ್ತರ ಪ್ರದೇಶದಲ್ಲಿ ವಿತರಣೆ ಮಾಡಲಾಗಿದೆ. ಈಗ 5 ಟನ್ನಷ್ಟು ಆಮದಾಗುತ್ತಿದ್ದು, ಗುರುವಾರ ಮಾರಾಟ ಮಾಡಲಾಗುವುದು ಎಂದು ಎನ್ಸಿಸಿಎಫ್ನ ವ್ಯವಸ್ಥಾಪಕ ನಿರ್ದೇಶಕಿ ಆ್ಯನ್ಸಿ ಜೋಸೆಫ್ ಚಂದ್ರಾ ತಿಳಿಸಿದ್ದಾರೆ.

ಆಗಸ್ಟ್ 15ರಂದು ದೇಶದಲ್ಲಿ ಟೊಮೆಟೊ ಸರಾಸರಿ ಸಗಟು ದರವು ಕೆ.ಜಿಗೆ ₹88.22 ಆಗಿದೆ. ತಿಂಗಳ ಹಿಂದೆ ಕೆ.ಜಿಗೆ ₹97.56ರಷ್ಟು ಇತ್ತು ಎಂದು ಸರ್ಕಾರ ಮಾಹಿತಿ ನೀಡಿದೆ. ರಿಟೇಲ್ ದರವು ಕೆ.ಜಿಗೆ ₹118.7ರಿಂದ ₹107.87ಕ್ಕೆ ಇಳಿಕೆ ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.