ನವದೆಹಲಿ: ಪರೋಟ ಮಾತ್ರವಲ್ಲ ಇನ್ನು ಮುಂದೆ ಪಾನ್ ಮಸಾಲಕ್ಕೂ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಕೋವಿಡ್ ನಂತರದ ಆರ್ಥಿಕತೆ ಸುಧಾರಣೆಗಾಗಿ ಹೊಸ ಸಂಪನ್ಮೂಲಗಳಿಂದ ತೆರಿಗೆ ಸಂಗ್ರಹಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚಿಂತನೆ ನಡೆಸಿವೆ.

'ಡಿಮೆರಿಟ್ ಮತ್ತು ಸಿನ್' ಸರಕುಗಳು ಈಗಾಗಲೇ ಶೇ.28ರಷ್ಟು ಸರಕು ಮತ್ತು ಸೇವಾ ತೆರಿಗೆ ನೀಡುತ್ತಿದ್ದು, ಅವುಗಳ ಮೇಲೆ ಶೇ.60ರಷ್ಟು ಸೆಸ್ ವಿಧಿಸಲ್ಪಡುತ್ತದೆ. ಮುಂದಿನ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಇದು ಶೇ.100ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಗುಟ್ಕಾ ಹೊಂದಿರುವ ಪಾನ್ ಮಸಾಲಕ್ಕೆ ಶೇ.204ರಷ್ಟು ಸೆಸ್ ವಿಧಿಸಲಾಗುವುದು. ಹಾಗಾಗಿ ಇವುಗಳ ಮೇಲೆ ತೆರಿಗೆ ಮತ್ತು ಸೆಸ್ ಮತ್ತಷ್ಟು ಏರಿಕೆ ಆಗಲಿದೆ.

ಅಷ್ಟೇ ಅಲ್ಲ, ಪಾನ್ ಮಸಾಲಾ ಮತ್ತು ಗುಟ್ಕಾ ತಯಾರಿಸಲು ಬಳಸುವ ಕಚ್ಚಾ ಉತ್ಪನ್ನವಾದ ವರ್ಜೀನಿಯಾ ಹೊಗೆಸೊಪ್ಪು ಅಲ್ಲದ ತಂಬಾಕು ಮೇಲೆಯೂ ತೆರಿಗೆ ವಿಧಿಸಲು ಸರ್ಕಾರ ಮುಂದಾಗಿದೆ.ಇದನ್ನು ರೈತರು ನೇರವಾಗಿ ತಯಾರಕರಿಗೆ ಮಾರಾಟ ಮಾಡುವುದರಿಂದ ಇದಕ್ಕೆ ಯಾವುದೇ ತೆರಿಗೆ ಇರುವುದಿಲ್ಲ.

ದೇಶೀಯ ಪಾನ್ ಮಸಾಲಾ ಮತ್ತು ಗುಟ್ಕಾ ಉದ್ಯಮವು ಪ್ರಸ್ತುತ ವಾರ್ಷಿಕ ₹42,000 ಕೋಟಿ ಆದಾಯ ಹೊಂದಿದ್ದು , ವಾರ್ಷಿಕವಾಗಿ 10% ರಷ್ಟು ಅಭಿವೃದ್ಧಿ ಹೊಂದುತ್ತಿದೆ. ಸಿಗರೇಟ್ ಮತ್ತು ಪಾನ್ ಮಸಾಲಗಳು ಜಿಎಸ್ಟಿ ತೆರಿಗೆಯಡಿಯಲ್ಲಿ ಸಿನ್ ಟ್ಯಾಕ್ಸ್ಗೆ ಒಳಪಟ್ಟಿದ್ದು ಕಂದಾಯ ಇಲಾಖೆಗೆ ಆದಾಯ ತಂದುಕೊಡುವುದು ಮಾತ್ರವಲ್ಲದೆ ಮತ್ತು ಅತೀ ಹೆಚ್ಚು ನೌಕರನ್ನು ಹೊಂದಿದೆ.

ಕಳೆದ ವರ್ಷ ಕೈಗಾರಿಕಾ ಅಧ್ಯಯನವೊಂದರ ಪ್ರಕಾರ ತಂಬಾಕು ಕ್ಷೇತ್ರವು ಆರ್ಥಿಕತೆಗೆ ಸುಮಾರು ₹12 ಲಕ್ಷ ಕೋಟಿ ಮತ್ತು 4.6 ಕೋಟಿ ಜನರಿಗೆ ಉದ್ಯೋಗ ನೀಡುತ್ತದೆ.

ಆದಾಗ್ಯೂ,ರೆಸ್ಟೊರೆಂಟ್ನಲ್ಲಿ ನೀಡುವ ಪರೋಟ ಅಥವಾ ಸಿದ್ಧ ಪರೋಟ ಅಂದರೆ ಬಿಸಿಮಾಡದೆ ಅಥವಾ ಬೇಯಿಸದೆ ತಿನ್ನಬಹುದಾದ ಪರೋಟಕ್ಕೆ ಶೇ.5ರಷ್ಟು ಜಿಎಸ್ಟಿ ವಿಧಿಸಲಾಗುವುದು.ಸಂಸ್ಕರಿಸಿದ ಅಥವಾ ಬ್ರಾಂಡೆಡ್ ಪರೋಟಗಳಿಗೆ ಶೇ.18ರಷ್ಟು ಜಿಎಸ್ಟಿ ವಿಧಿಸಲಾಗುವುದು ಎಂದು ಹಣಕಾಸು ಸಚಿವಾಲಯ ಶನಿವಾರ ಸ್ಪಷ್ಟಪಡಿಸಿದೆ.

ಕರ್ನಾಟಕದಲ್ಲಿನ ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್ಸ್ನ (ಎಎಆರ್) ಪ್ರಕಾರ ಘನೀಕೃತ ಮತ್ತು ಸಂಸ್ಕರಿಸಿದ ಗೋಧಿ ಪರೋಟ ಮತ್ತು ಮಲಬಾರ್ ಪರೋಟಕ್ಕೆ ಶೇ. 18ರಷ್ಟು ಜಿಎಸ್ಟಿ ವಿಧಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.