ಬೆಂಗಳೂರು: ಏರ್ ಇಂಡಿಯಾ ಕಂಪನಿಯ ಏರ್‌ಬಸ್ ಎ350–900 ವಿಮಾನ ಸೇವೆಯು ಬೆಂಗಳೂರು–ಮುಂಬೈ ನಡುವೆ ಸೋಮವಾರ ಆರಂಭಗೊಂಡಿತು.

ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿಗದಿತ ಸಮಯಕ್ಕೆ ವಿಮಾನವು (ಫ್ಲೈಟ್ ಎಐ 589) ಮುಂಬೈಗೆ ಹೊರಟಿತು. ವಿಮಾನದ ಆಸನಗಳು ಬಹುತೇಕ ಭರ್ತಿಯಾಗಿದ್ದವು.

ಆರಂಭದಲ್ಲಿ ದೇಶೀಯ ಮಾರ್ಗಗಳಲ್ಲಿ ಏರ್‌ಬಸ್ ಸೇವೆ ಲಭ್ಯವಿದ್ದು, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್ ಮತ್ತು ಮುಂಬೈಗೆ ತೆರಳುವ ಪ್ರಯಾಣಿಕರಿಗೆ ದೊರೆಯಲಿದೆ.

ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ವಿಂಗ್ಸ್ ಇಂಡಿಯಾ ಗ್ಲೋಬಲ್ ಏವಿಯೇಷನ್ ಶೃಂಗಸಭೆಯಲ್ಲಿ ಈ ವಿಮಾನವನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಮೂರು ವರ್ಗದ ಕ್ಯಾಬಿನ್ ಹೊಂದಿರುವ ಏರ್‌ಬಸ್ ಒಟ್ಟು 316 ಆಸನಗಳ ಸೌಲಭ್ಯ ಹೊಂದಿದೆ. 18 ಪ್ರೈವೆಟ್ ಬ್ಯುಸಿನೆಸ್ ಕ್ಲಾಸ್, 24 ಪ್ರೀಮಿಯಂ ಎಕಾನಮಿ ಮತ್ತು 264 ವಿಶಾಲವಾದ ಎಕಾನಮಿ ದರ್ಜೆಯ ಸೀಟುಗಳಿವೆ.

ವಿಮಾನವು ಮಂಗಳವಾರ ಹೊರತುಪಡಿಸಿ ವಾರದ ಪ್ರತಿದಿನವೂ ಕಾರ್ಯ ನಿರ್ವಹಿಸುತ್ತದೆ. ಬೆಂಗಳೂರಿನಿಂದ ಬೆಳಿಗ್ಗೆ 7.05ಗಂಟೆಗೆ ನಿರ್ಗಮಿಸಲಿದ್ದು, ಮುಂಬೈಗೆ ಬೆಳಿಗ್ಗೆ 8.50 ಗಂಟೆಗೆ ತಲುಪಲಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.