ಬೆಂಗಳೂರು: ‘ಅಮುಲ್‘ ಬ್ರಾಂಡ್‌ನಡಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟವು ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಿದೆ.

ಶುಕ್ರವಾರದಿಂದಲೇ ಈ ದರ ಜಾರಿಗೆ ಬಂದಿದೆ. ಗುಜರಾತ್ ಹೊರತುಪಡಿಸಿ, ದೇಶದ ಉಳಿದ ಎಲ್ಲಾ ಭಾಗಗಳಿಗೂ ಹೊಸ ದರ ಅನ್ವಯವಾಗಲಿದೆ ಎಂದು ಅಮುಲ್ ಹೇಳಿದೆ.

‘ಗುಜರಾತ್ ಹೊರೆತುಪಡಿಸಿ ದೇಶದ ಎಲ್ಲಾ ಮಾರುಕಟ್ಟೆಗಳಲ್ಲಿ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ಸದ್ಯದ ಮಟ್ಟಿಗೆ ಗುಜರಾತ್‌ನಲ್ಲಿ ಯಾವುದೇ ದರ ವ್ಯತ್ಯಾಸವಾಗುವುದಿಲ್ಲ‘ ಎಂದು ಅಮುಲ್‌ನ ಎಂ.ಡಿ ಜಯೆನ್ ಮೆಹ್ತಾ ಹೇಳಿದ್ದಾರೆ.

ಹೊಸ ದರ ಜಾರಿಗೆ ಬಂದ ಬಳಿಕ ಅಮುಲ್ ತಾಜಾ ಹಾಲು ಲೀಟರ್‌ಗೆ ₹54, ಒಂದು ಲೀಟರ್ ಅಮುಲ್ ಗೋಲ್ಡ್ ಹಾಲಿಗೆ ₹66, ಒಂದು ಲೀಟರ್ ಅಮುಲ್ ಎ2 ಎಮ್ಮೆ ಹಾಲು ₹70 ವೆಚ್ಚವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.