ನವದೆಹಲಿ: ದೇಶಿ ವಾಹನ ತಯಾರಿಕಾ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಮಾರಾಟ ಕುಸಿತ ಸಮಸ್ಯೆ ಎದುರಿಸುತ್ತಿದ್ದು, ಬೇಡಿಕೆಗೆ ಅನುಗುಣವಾಗಿ ತಯಾರಿಕೆಯಲ್ಲಿ ಕಡಿತ ಮಾಡಲು ಮುಂದಾಗಿವೆ.

ಕೆಲ ಸಂಸ್ಥೆಗಳು ಪ್ರತಿ ತಿಂಗಳ ತಯಾರಿಕೆಯನ್ನು ಕಡಿತಗೊಳಿಸಿದ್ದರೆ, ಇನ್ನೂ ಕೆಲ ಸಂಸ್ಥೆಗಳು ತಯಾರಿಕೆ ನಿಧಾನಗೊಳಿಸಿವೆ.ದೇಶದ ಅತಿದೊಡ್ಡ ಕಾರ್ ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ) ಮೇ ತಿಂಗಳಿನಲ್ಲಿಯೂ ತನ್ನ ವಾಹನಗಳ ತಯಾರಿಕೆಯಲ್ಲಿ ಶೇ 18ರಷ್ಟು ಕಡಿತ ಮಾಡಿದೆ. ಸತತ ನಾಲ್ಕನೇ ತಿಂಗಳೂ ಕಡಿತ ಪ್ರಕ್ರಿಯೆ ಮುಂದುವರೆದಿದೆ.

ಮಾರುಕಟ್ಟೆಯ ಬೇಡಿಕೆ ಸರಿದೂಗಿಸಲು ಮಹೀಂದ್ರಾ ಆ್ಯಂಡ್ ಮಹೀಂದ್ರಾ (ಎಂಆ್ಯಂಡ್ಎಂ) ತನ್ನ ವಿವಿಧ ಘಟಕಗಳಲ್ಲಿ 13 ದಿನಗಳ ಕಾಲ ತಯಾರಿಕೆ ಸ್ಥಗಿತಗೊಳಿಸಿತ್ತು.

ಪ್ರಯಾಣಿಕ ವಾಹನಗಳ ಮಾರಾಟವು ಏಪ್ರಿಲ್ ತಿಂಗಳಲ್ಲಿ ಶೇ 17ರಷ್ಟು ಕುಸಿತಗೊಂಡು ಎಂಟು ವರ್ಷಗಳಲ್ಲಿನ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.

ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ ನಗದು ಬಿಕ್ಕಟ್ಟಿನ ಕಾರಣಕ್ಕೆ ವಾಹನಗಳ ಖರೀದಿ ಕುಸಿದಿದೆ. ಮಾರಾಟವಾಗದ ವಾಹನಗಳ ಒಟ್ಟಾರೆ ಮೊತ್ತವು ₹ 35 ಸಾವಿರ ಕೋಟಿಗಳಷ್ಟು ಇರುವ ಅಂದಾಜಿದೆ. ವಾಹನಗಳ ಮಾರಾಟ ಚೇತರಿಸಿಕೊಳ್ಳುವವರೆಗೆ ತಯಾರಿಕೆಗೆ ಕಡಿವಾಣ ಹಾಕಲು ಸಂಸ್ಥೆಗಳು ನಿರ್ಧರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.