ಕೋಲ್ಕತ್ತ: ಬಂಧನ ಬ್ಯಾಂಕ್ನ ಸ್ಥಾಪಕ ಚಂದ್ರಶೇಖರ್ ಘೋಷ್ ಅವರು ವೈಯಕ್ತಿಕವಾಗಿ ಮತ್ತು ತಾವು ಸ್ಥಾಪಿಸಿರುವ ಫೈನಾನ್ಶಿಯಲ್ ಇನ್ಕ್ಲುಷನ್ ಟ್ರಸ್ಟ್ (ಎಫ್ಐಟಿ) ಮತ್ತು ನಾರ್ತ್ ಈಸ್ಟ್ ಫೈನಾನ್ಶಿಯಲ್ ಇನ್ಕ್ಲುಷನ್ ಟ್ರಸ್ಟ್ (ಎನ್ಇಎಫ್ಐಟಿ) ಮೂಲಕ ಪ್ರೈಮ್ ಮಿನಿಸ್ಟರ್ ಕೇರ್ಸ್ ಫಂಡ್ಗೆ ₹ 25 ಕೋಟಿ ದೇಣಿಗೆ ನೀಡಿದ್ದಾರೆ.

ಲಾಕ್ಡೌನ್ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದವರಿಗೆ ಆಹಾರ ಧಾನ್ಯ ವಿತರಿಸಲು ವಿವಿಧ ರಾಜ್ಯ ಸರ್ಕಾರಗಳಿಗೆ 25 ಕೋಟಿ ನೆರವು ನೀಡಲಾಗಿದೆ. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ತೊಂದರೆಗೆ ಸಿಲುಕಿದವರ ನೆರವಿಗೆ ಚಂದ್ರಶೇಖರ್ ಘೋಷ್ ಅವರ ಮುಂದಾಳತ್ವದಲ್ಲಿ ಒಟ್ಟಾರೆ ₹ 50 ಕೋಟಿ ನೆರವು ನೀಡಿದಂತಾಗಿದೆ.

ಘೋಷ್ ಅವರು ಸ್ಥಾಪಿಸಿರುವ ‘ಎಫ್ಐಟಿ’ ಮತ್ತು ‘ಎನ್ಇಎಫ್ಐಟಿ’ಗಳು ಲಾಕ್ಡೌನ್ ಸಂದರ್ಭದಲ್ಲಿ ಸಾವಿರಾರು ಸಂತ್ರಸ್ತ ಕುಟುಂಬಗಳಿಗೆ ನೆರವು ಒದಗಿಸಿವೆ. ಪ್ರತಿ ಕುಟುಂಬಕ್ಕೆ ₹ 1,000 ಮೊತ್ತದ ಆಹಾರ ಧಾನ್ಯ ಒದಗಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.