ಬೆಂಗಳೂರು: ದೇಶದಲ್ಲಿ ತಂತ್ರಜ್ಞಾನ ವಲಯದ ದೊಡ್ಡ ಕಂಪನಿಗಳು ಹಣಕಾಸು ಸೇವೆ ಒದಗಿಸಲು ಮುಂದಾಗುತ್ತಿರುವುದು ಸಾಂಪ್ರದಾಯಿಕ ಬ್ಯಾಂಕ್‌ಗಳಿಗೆ ಸವಾಲಾಗಿ ಪರಿಣಮಿಸಬಹುದು ಎಂಬ ಕಳವಳ ವ್ಯಕ್ತವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ. ತಂತ್ರಜ್ಞಾನ ವಲಯದ ಕಂಪನಿಗಳು ಹಣಕಾಸು ಸೇವೆಗಳನ್ನು ಒದಗಿಸುವಲ್ಲಿ ತಾವೇ ದೊಡ್ಡ ಪಾಲು ಹೊಂದುವ ಸಾಮರ್ಥ್ಯ ಪಡೆದಿವೆ ಎಂದೂ ಆರ್‌ಬಿಐ ಅಭಿಪ್ರಾಯ ವ್ಯಕ್ತಪಡಿಸಿದೆ.

ಆರ್‌ಬಿಐ ಗುರುವಾರ ಬಿಡುಗಡೆ ಮಾಡಿರುವ ಹಣಕಾಸು ಸ್ಥಿರತೆ ವರದಿಯಲ್ಲಿ ಈ ಬಗ್ಗೆ ಕೆಲವು ಮಾತುಗಳು ಇವೆ. ‘ತಂತ್ರಜ್ಞಾನ ವಲಯದ ದೊಡ್ಡ ಕಂಪನಿಗಳು ಬಗೆಬಗೆಯ ಹಣಕಾಸು ಸೇವೆಗಳನ್ನು ಒದಗಿಸುತ್ತವೆ. ಪಾವತಿ ವ್ಯವಸ್ಥೆ, ಹಣಕಾಸು ಆಸ್ತಿ ನಿರ್ವಹಣೆ, ವಿಮಾ ಸೇವೆಗಳನ್ನು ಪಡೆದುಕೊಳ್ಳಲೂ ನೆರವಾಗುತ್ತಿವೆ. ಇವುಗಳಿಂದ ಹಣಕಾಸು ಸೇವೆಗಳು ಹೆಚ್ಚಿನವರಿಗೆ ಲಭ್ಯವಾಗುವ, ಬ್ಯಾಂಕ್‌ಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಭರವಸೆ ಇದೆ. ಆದರೆ, ನೀತಿ ನಿರೂಪಣೆಗೆ ಸಂಬಂಧಿಸಿದ ಕೆಲವು ಪ್ರಶ್ನೆಗಳು ಮೂಡುತ್ತವೆ’ ಎಂದು ಆರ್‌ಬಿಐ ಹೇಳಿದೆ.

ತಂತ್ರಜ್ಞಾನ ಕಂಪನಿಗಳು ಸೈಬರ್ ಭದ್ರತೆ, ದತ್ತಾಂಶಗಳ ಖಾಸಗಿತನದ ಭದ್ರತೆ ಹಾಗೂ ಮಾರುಕಟ್ಟೆಯ ಪಾರಮ್ಯಕ್ಕೆ ಸಂಬಂಧಿಸಿದ ಸವಾಲುಗಳನ್ನು ಹುಟ್ಟುಹಾಕುತ್ತವೆ ಎಂಬುದು ಆರ್‌ಬಿಐ ಅಭಿಪ್ರಾಯ. ಇಂತಹ ಕಂಪನಿಗಳು ಬೇರೆ ಬೇರೆ ವಹಿವಾಟುಗಳಲ್ಲಿ ಕೂಡ ಆಸಕ್ತಿ ಹೊಂದಿರುತ್ತವೆ ಎಂದು ಆರ್‌ಬಿಐ ಹೇಳಿದೆ.

ಭಾರತದ ಹಣಕಾಸು ಪಾವತಿ ಮಾರುಕಟ್ಟೆಯಲ್ಲಿ ತಂತ್ರಜ್ಞಾನ ವಲಯದ ದೊಡ್ಡ ಕಂಪನಿಗಳಾದ ಅಮೆಜಾನ್, ಗೂಗಲ್ ಹಾಗೂ ವಾಟ್ಸ್‌ಆ್ಯಪ್ ಸೇವೆ ಒದಗಿಸುತ್ತಿವೆ. ಅಮೆಜಾನ್ ಹಾಗೂ ಗೂಗಲ್ ಕಂಪನಿಗಳು ತಮ್ಮ ಆ್ಯಪ್ ಮೂಲಕ ಪಾವತಿ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿವೆ. ಪಾವತಿ ಸೇವಾ ಕ್ಷೇತ್ರಕ್ಕೆ ಈಚೆಗೆ ಪ್ರವೇಶ ಪಡೆದಿರುವ ವಾಟ್ಸ್‌ಆ್ಯಪ್, ಫೇಸ್‌ಬುಕ್‌ನ ಒಡೆತನದಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.