ಮುಂಬೈ: ಬಿರ್ಲಾ ಸಮೂಹದ ಮುಖ್ಯಸ್ಥ ಬಿ. ಕೆ. ಬಿರ್ಲಾ (98) ಅವರು ಬುಧವಾರ ಇಲ್ಲಿ ನಿಧನರಾದರು.

ದೇಶಿ ಕೈಗಾರಿಕಾ ರಂಗದ ದಿಗ್ಗಜರಾಗಿದ್ದ ಬಿರ್ಲಾ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರಿಗೆ ಮೊಮ್ಮಗ ಕುಮಾರ್ಮಂಗಳಂ ಬಿರ್ಲಾ, ಪುತ್ರಿಯರಾದ ಮಂಜುಶ್ರೀ ಖೇತಾನ್ ಮತ್ತು ಜಯಶ್ರೀ ಮೊಹ್ತಾ ಇದ್ದಾರೆ. ಅವರ ಪತ್ನಿ ಸರಳಾ 2015ರಲ್ಲಿ ಮತ್ತು ಪುತ್ರ ಆದಿತ್ಯ ವಿಕ್ರಂ ಬಿರ್ಲಾ 1995ರಲ್ಲಿ ಮೃತಪಟ್ಟಿದ್ದಾರೆ.

ದಾನಿ ಘನಶಾಂ ದಾಸ್ ಬಿರ್ಲಾ ಅವರ ಕಿರಿಯ ಮಗನಾಗಿದ್ದ ಇವರು, ತಮ್ಮ 15ನೆ ವಯಸ್ಸಿನಿಂದಲೇ ಉದ್ದಿಮೆಯಲ್ಲಿ ತೊಡಗಿಕೊಂಡಿದ್ದರು. ಸೆಂಚುರಿ ಟೆಕ್ಸ್ಟೈಲ್ಸ್, ಸೆಂಚುರಿ ಇಂಕಾ, ಜಯಶ್ರೀ ಟೀ ಮತ್ತು ಕೆಸೊರಂ ಇಂಡಸ್ಟ್ರೀಸ್ಗಳನ್ನು ಬಿ. ಕೆ. ಬಿರ್ಲಾ ಗ್ರೂಪ್ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.