ನವದೆಹಲಿ:ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರ ಬ್ರೆಂಟ್ ಕಚ್ಚಾ ತೈಲದ ಬೆಲೆ ತುಸು ಇಳಿಕೆಯಾಗಿದೆ.

ಜಾಗತಿಕ ಆರ್ಥಿಕ ಹಿಂಜರಿತದಿಂದ ಬೇಡಿಕೆ ಕುಸಿಯುವ ಸಾಧ್ಯತೆ, ರಷ್ಯಾದಿಂದ ತೈಲ ಆಮದು ನಿಷೇಧಿಸುವ ವಿಚಾರವಾಗಿ ಯುರೋಪ್ ಒಕ್ಕೂಟದ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಮಾತುಕತೆಗಳು ಹಾಗೂ ಪೂರೈಕೆಗೆ ಅಡ್ಡಿಯಾಗುವ ಸಾಧ್ಯತೆಗಳ ಮೆಲೆ ಹೂಡಿಕೆದಾರರು ಕಣ್ಣಿಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದ ಬೆಲೆ ಇಳಿಕೆಯಾಗಿದೆ ಎನ್ನಲಾಗಿದೆ.

ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 28 ಸೆಂಟ್ಸ್ ಅಥವಾ ಶೇ 0.3ರಷ್ಟು ಇಳಿಕೆಯಾಗಿ, 112.11 ಡಾಲರ್ ಆಗಿದೆ.

ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್‌ಮಿಡಿಯೇಟ್ (ಡಬ್ಲ್ಯುಟಿಐ) ದರ್ಜೆಯ ಕಚ್ಚಾ ತೈಲ ದರ41 ಸೆಂಟ್ಸ್ ಅಥವಾ ಶೇ 0.04ರಷ್ಟು ಇಳಿಕೆಯಾಗಿ ಬ್ಯಾರಲ್‌ಗೆ 109.36 ಆಗಿದೆ.

‘ಆರ್ಥಿಕ ಹಿಂಜರಿತದ ಭೀತಿ, ಚೀನಾದಲ್ಲಿ ಲಾಕ್‌ಡೌನ್ ತೈಲ ಬೆಲೆ ಇಳಿಕೆಗೆ ಮುಖ್ಯ ಕಾರಣಗಳು’ ಎಂದು ಸಿಎಂಸಿ ಮಾರುಕಟ್ಟೆ ವಿಶ್ಲೇಷಕ ಟಿನಾ ಟೆಂಗ್ ಹೇಳಿದ್ದಾರೆ.

ಭಾನುವಾರವಷ್ಟೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 113.3 ಡಾಲರ್‌ಗೆ ಏರಿಕೆ ಆಗಿತ್ತು. ಮೇ 2ರಿಂದ 6ರ ವರೆಗಿನ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಒಟ್ಟು9 ಡಾಲರ್‌ಗಳಷ್ಟು ಹೆಚ್ಚಾಗಿದೆ. ಪೂರೈಕೆ ಸಮಸ್ಯೆ ಎದುರಾಗಿರುವುದರಿಂದ ಬೆಲೆ ಏರಿಕೆಯಾಗಿತ್ತು.

ಕಚ್ಚಾ ತೈಲ: ಬ್ಯಾರಲ್‌ಗೆ 9 ಡಾಲರ್ ಹೆಚ್ಚಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.