ಬೆಂಗಳೂರು: ಕಾರ್ಪೊರೇಟ್ ಸಂಸ್ಥೆಗಳು ಮತ್ತು ನವೋದ್ಯಮಗಳಿಗೆ ಬೇಕಾದ ಅತ್ಯಾಧುನಿಕ ಸೌಲಭ್ಯಗಳನ್ನೆಲ್ಲ ಒಳಗೊಂಡ ಸುಸಜ್ಜಿತ ಕಚೇರಿ ಸ್ಥಳಾವಕಾಶ ಒದಗಿಸುವ ‘ಬಝ್ ವರ್ಕ್ಸ್’ಗಳನ್ನು ರಿಯಲ್ ಎಸ್ಟೇಟ್ ಸಂಸ್ಥೆ ಬ್ರಿಗೇಡ್ ಗ್ರೂಪ್ ನಗರದಲ್ಲಿ ಆರಂಭಿಸಿದೆ.

ವೈಟ್ಫೀಲ್ಡ್ ಮತ್ತು ರಾಜಾಜಿ ನಗರದ ಬ್ರಿಗೇಡ್ ಮೆಟ್ರೊಪೊಲೀಸ್ ಮತ್ತು ಬ್ರಿಗೇಡ್ ಗೇಟ್ವೇ ಕ್ಯಾಂಪಸ್ಗಳಲ್ಲಿ 15 ಸಾವಿರ ಚದರ ಅಡಿ ಜಾಗದಲ್ಲಿ ಈ ‘ಬಝ್ ವರ್ಕ್ಸ್’ಗಳು ಕಾರ್ಯನಿರ್ವಹಿಸಲಿವೆ.

‘ಆಕರ್ಷಕ ಒಳಾಂಗಣ ವಿನ್ಯಾಸ, ಗರಿಷ್ಠ ವೇಗದ ಸುರಕ್ಷಿತ ಅಂತರ್ಜಾಲ, ಉಪಾಹಾರ ಘಟಕ, ಜಿಮ್, ಸಲೂನ್, ವಿಶ್ರಾಂತಿ ಕೊಠಡಿ ಮತ್ತಿತರ ಸೌಲಭ್ಯಗಳನ್ನು ಒದಗಿಸಲಾಗಿದೆ. ನಗರದ ಇತರ ಭಾಗಗಳಲ್ಲಿಯೂ ಇದೇ ಬಗೆಯ ’ಬಝ್ ವರ್ಕ್ಸ್’ಗಳನ್ನು ಆರಂಭಿಸಲಾಗುವುದು’ ಎಂದು ಬ್ರಿಗೇಡ್ ಎಂಟರ್ ಪ್ರೈಸಸ್ನ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಜೈಶಂಕರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.