ಷೇರು ಸೂಚ್ಯಂಕಗಳು ಸತತ ಎರಡನೇ ವಾರವೂ ಕುಸಿತ ದಾಖಲಿಸಿವೆ. 79705 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.58ರಷ್ಟು ಇಳಿಕೆ ಕಂಡಿದೆ. 24367 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 1.42ರಷ್ಟು ತಗ್ಗಿದೆ. ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಭಾರತ ಮತ್ತು ಜಾಗತಿಕವಾಗಿ ಸ್ಥೂಲ ಆರ್ಥಿಕತೆಯಲ್ಲಿನ ನಕಾರಾತ್ಮಕತೆ ವಿದೇಶಿ ಮಾರುಕಟ್ಟೆಗಳಲ್ಲಿ ಕಂಡುಬಂದ ಹಿಂಜರಿಕೆ ಲಾಭ ಗಳಿಕೆಗಾಗಿ ಷೇರುಗಳ ಮಾರಾಟದ ಒತ್ತಡ ಸೇರಿ ಹಲವು ಅಂಶಗಳು ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಗಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ಶೇ 2.97 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.82 ಎನರ್ಜಿ ಶೇ 2.52 ಮಾಹಿತಿ ತಂತ್ರಜ್ಞಾನ ಶೇ 1.73 ನಿಫ್ಟಿ ಬ್ಯಾಂಕ್ ಶೇ 1.69 ನಿಫ್ಟಿ ಫೈನಾನ್ಸ್ ಶೇ 1.64 ರಿಯಲ್ ಎಸ್ಟೇಟ್ ಶೇ 1.44 ನಿಫ್ಟಿ ಆಟೊ ಶೇ 1.43 ಮತ್ತು ಅನಿಲ ಮತ್ತು ತೈಲ ಸೂಚ್ಯಂಕ ಶೇ 1.25ರಷ್ಟು ಕುಸಿದಿವೆ. ನಿಫ್ಟಿ ಫಾರ್ಮಾ ಸೂಚ್ಯಂಕ ಶೇ 1.4 ಎಫ್‌ಎಂಸಿಜಿ ಶೇ 0.67 ಮತ್ತು ನಿಫ್ಟಿ ಮಾಧ್ಯಮ ಸೂಚ್ಯಂಕ ಶೇ 0.06ರಷ್ಟು ಗಳಿಸಿಕೊಂಡಿವೆ. ಇಳಿಕೆ–ಏರಿಕೆ: ನಿಫ್ಟಿಯಲ್ಲಿ ಗ್ರಾಸಿಮ್ ಇಂಡಸ್ಟ್ರೀಸ್ ಶೇ 4.85 ಟಾಟಾ ಸ್ಟೀಲ್ ಶೇ 4.05 ಮಾರುತಿ ಸುಜುಕಿ ಶೇ 3.96 ಬಿಪಿಸಿಎಲ್ ಶೇ 3.95 ಇಂಡಸ್ ಇಂಡ್ ಬ್ಯಾಂಕ್ ಶೇ 3.87 ಅಲ್ಟ್ರಾಟೆಕ್ ಸಿಮೆಂಟ್ ಶೇ 3.85 ಟೈಟನ್ ಕಂಪನಿ ಶೇ 3.79 ಬಜಾಜ್ ಫಿನ್‌ಸರ್ವ್ ಶೇ 3.77 ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 3.62 ಅದಾನಿ ಪೋರ್ಟ್ಸ್ ಶೇ 3.44ರಷ್ಟು ಮತ್ತು ಪವರ್ ಗ್ರಿಡ್ ಶೇ 3.32ರಷ್ಟು ಕುಸಿದಿವೆ. ಸಿಪ್ಲಾ ಶೇ 3.11 ಐಷರ್ ಮೋಟರ್ಸ್ ಶೇ 2.3 ಎಚ್‌ಯುಎಲ್ ಶೇ 2.05 ಐಟಿಸಿ ಶೇ 1.32 ಬಜಾಜ್ ಆಟೊ ಶೇ 1.19 ಜೆಎಸ್‌ಡಬ್ಲ್ಯು ಸ್ಟೀಲ್ ಶೇ 0.84 ಕೋಲ್ ಇಂಡಿಯಾ ಶೇ 0.83 ಅದಾನಿ ಎಂಟರ್ ಪ್ರೈಸಸ್ ಶೇ 0.77 ಒಎನ್‌ಜಿಸಿ ಶೇ 0.74 ಮತ್ತು ನೆಸ್ಲೆ ಇಂಡಿಯಾ ಶೇ 0.51ರಷ್ಟು ಹೆಚ್ಚಳ ಕಂಡಿವೆ. ಮುನ್ನೋಟ: ಷೇರುಪೇಟೆಯಲ್ಲಿ ಅನಿಶ್ಚಿತ ವಾತಾವರಣ ಇರಲಿದ್ದು ಸೂಚ್ಯಂಕಗಳು ತ್ವರಿತ ಮತ್ತು ಹರಿತ ಏರಿಳಿತ ಕಾಣಲಿವೆ. ಜಾಗತಿಕ ವಿದ್ಯಮಾನಗಳು ಮತ್ತು ದೇಶೀಯ ಬೆಳವಣಿಗೆಗಳನ್ನು ಆಧರಿಸಿ ಮಾರುಕಟ್ಟೆ ಮತ್ತಷ್ಟು ಕುಸಿತ ಕಾಣುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ವಾರ ಐಆರ್‌ಎಫ್‌ಸಿ ಎನ್‌ಎಂಡಿಸಿ ಎಂಟಾರ್ ಟೆಕ್ನಾಲಜೀಸ್ ಹಿಂಡಾಲ್ಕೋ ಇಂಡಸ್ಟ್ರೀಸ್ ಹೀರೊ ಮೋಟೊಕಾರ್ಪ್ ಐಆರ್‌ಸಿಟಿಸಿ ಎಚ್ಎಎಲ್ ಎಂಡೂರೆನ್ಸ್ ಟೆಕ್ನಾಲಜೀಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.