ಬೆಂಗಳೂರು: ದೇಶದಲ್ಲಿ ಒಟ್ಟಾರೆ ಚಲಾವಣೆಯಲ್ಲಿ ಇರುವ ನಗದು ಪ್ರಮಾಣವು ಇದೇ ಮೊದಲ ಬಾರಿಗೆ ₹ 20 ಲಕ್ಷ ಕೋಟಿ ದಾಟಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ನವೆಂಬರ್ 16ಕ್ಕೆ ಚಲಾವಣೆಯಲ್ಲಿದ್ದ ನಗದಿನ ಪ್ರಮಾಣವು ₹ 20.15 ಲಕ್ಷ ಕೋಟಿಗಳಷ್ಟಿತ್ತು.

2016ರ ನವೆಂಬರ್‌ನಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರದ ದಿನಗಳಲ್ಲಿ ಚಲಾವಣೆಯಲ್ಲಿದ್ದ ನಗದು ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿತ್ತು. ಆ ವರ್ಷದ ಡಿಸೆಂಬರ್ 23ರಂದು ₹ 9.4 ಲಕ್ಷ ಕೋಟಿ ನಗದು ಚಲಾವಣೆಯಲ್ಲಿತ್ತು. ಅದಕ್ಕೆ ಹೋಲಿಸಿದರೆ ಸದ್ಯಕ್ಕೆ ಚಲಾವಣೆಯಲ್ಲಿ ಇರುವ ನಗದು ಪ್ರಮಾಣವು 1.14 ಪಟ್ಟು ಹೆಚ್ಚಾಗಿದೆ.

ನೋಟು ರದ್ದತಿ ಮುಂಚಿನ ದಿನಗಳಲ್ಲಿ ಚಲಾವಣೆಯಲ್ಲಿದ್ದ ನಗದು ಪ್ರಮಾಣವು ₹ 17.97 ಲಕ್ಷ ಕೋಟಿಗಳಷ್ಟಿತ್ತು. ಅದಕ್ಕೆ ಹೋಲಿಸಿದರೆ ಸದ್ಯದ ಚಲಾವಣೆಯಲ್ಲಿರುವ ನಗದು ಶೇ 12.1ರಷ್ಟು ಹೆಚ್ಚಾಗಿದೆ.

ಒಂದು ವರ್ಷದಿಂದೀಚೆಗೆ ಆರ್‌ಬಿಐ, ₹ 3.56 ಲಕ್ಷ ಕೋಟಿ ಚಲಾವಣೆಗೆ ತಂದಿದೆ. ಕೆಲ ತಿಂಗಳ ಹಿಂದೆ ಉದ್ಭವಿಸಿದ್ದ ನಗದುತನ ಕೊರತೆ ನೀಗಿಸಲು ಹೆಚ್ಚುವರಿ ನಗದನ್ನು ಮಾರುಕಟ್ಟೆಗೆ ತರಲಾಗಿತ್ತು.

ನಗದುರಹಿತ (ಡಿಜಿಟಲ್) ವಹಿವಾಟಿನ ಬಗ್ಗೆ ಪ್ರತಿ ತಿಂಗಳೂ ಅಂಕಿ ಅಂಶ ಬಿಡುಗಡೆ ಮಾಡುತ್ತಿದ್ದ ಆರ್‌ಬಿಐ, ಫೆಬ್ರುವರಿ ತಿಂಗಳಿನಿಂದೀಚೆಗೆ ಇದನ್ನು ಕೈಬಿಟ್ಟಿದೆ. ಈ ವರ್ಷದ ಫೆಬ್ರುವರಿಯಲ್ಲಿನ ತಿಂಗಳ ಡಿಜಿಟಲ್ ಪಾವತಿಯ ಒಟ್ಟಾರೆ ಮೊತ್ತವು ₹ 115.5 ಲಕ್ಷ ಕೋಟಿಗಳಷ್ಟಿತ್ತು.

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್, ಯುಪಿಐ, ಮೊಬೈಲ್ ವಾಲೆಟ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ನಡೆಯುವ ನಗದುರಹಿತ ವಹಿವಾಟು ಕಡಿಮೆಯಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.