ನವದೆಹಲಿ:ಆ್ಯಪಲ್ ಕಂಪನಿಯು ತನ್ನ ‘ಐಸ್ಟೋರ್’ ಮೂಲಕ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ವಾಣಿಜ್ಯ ವಟಹಿವಾಟು ನಡೆಸುತ್ತಿದೆ ಎಂಬ ಆರೋಪದ ಕುರಿತು ವಿಸ್ತೃತ ತನಿಖೆ ನಡೆಸುವಂತೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಶುಕ್ರವಾರ ಆದೇಶಿಸಿದೆ.

ಐಒಎಸ್ ಕಾರ್ಯಾಚರಣೆ ವ್ಯವಸ್ಥೆಗೆ ಆ್ಯಪ್ ಅಭಿವೃದ್ಧಿಪಡಿಸುವವರು, ಅವುಗಳನ್ನು ಐಒಎಸ್ ಗ್ರಾಹಕರಿಗೆ ತಲುಪಿಸುವ ಮಾರ್ಗ ಆ್ಯಪಲ್‌ನ ಆ್ಯಪ್ ಸ್ಟೋರ್ ಮಾತ್ರ. ಆದರೆ ಇತರ ಆ್ಯಪ್ ಸ್ಟೋರ್‌ಗಳು ತಮ್ಮನ್ನು ‘ಆ್ಯಪಲ್ ಆ್ಯಪ್ ಸ್ಟೋರ್’ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶವಿಲ್ಲ. ಆ್ಯಪಲ್‌ನ ಈ ಮಾರ್ಗಸೂಚಿಯು ಐಒಎಸ್ ಆ್ಯಪ್ ಅಭಿವೃದ್ಧಿಪಡಿಸುವ ಶಕ್ತಿ ಇರುವವರಿಗೆ ಮಾರುಕಟ್ಟೆಯ ಅವಕಾಶವನ್ನು ನಿರಾಕರಿಸುವುದಕ್ಕೆ ಸಮ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂದು 20 ಪುಟಗಳ ಆದೇಶದಲ್ಲಿ ಸಿಸಿಐ ಹೇಳಿದೆ.

ಆ್ಯಪ್ ಅಭಿವೃದ್ಧಿಪಡಿಸುವವರಿಗೆ ಹೀಗೆ ಮಾರುಕಟ್ಟೆಯ ಲಭ್ಯತೆಯನ್ನು ನಿರಾಕರಿಸುವುದು ಸ್ಪರ್ಧಾ ನಿಯಮಗಳ ಉಲ್ಲಂಘನೆ ಎಂದು ಸಿಸಿಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.