ನವದೆಹಲಿ: ಟಾಟಾ ಸನ್ಸ್ ವಿರುದ್ದದ ಕಾನೂನು ಸಮರದಲ್ಲಿ ಸೈರಸ್ ಮಿಸ್ತ್ರಿ ಅವರಿಗೆ ಕೊನೆಗೂ ಜಯ ಸಿಕ್ಕಿದೆ.

ಟಾಟಾ ಸನ್ಸ್ನ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಸೈರಸ್ ಮಿಸ್ತ್ರಿ ಅವರನ್ನು ಮರು ನೇಮಕ ಮಾಡುವಂತೆರಾಷ್ಟ್ರೀಯ ಕಂಪನಿ ಕಾಯ್ದೆ ಮೇಲ್ಮನವಿ ನ್ಯಾಯಮಂಡಳಿಯು (ಎನ್ಸಿಎಲ್ಎಟಿ) ಬುಧವಾರ ಆದೇಶ ನೀಡಿದೆ.

ಕಾನೂನು ಬಾಹಿರವಾಗಿ ಎನ್. ಚಂದ್ರ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದೂ ಎನ್ಸಿಎಲ್ಎಟಿ ತಿಳಿಸಿದೆ.ಈ ಸಂಬಂಧ ಟಾಟಾ ಸನ್ಸ್ಗೆ ಮನವಿ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.

ಇದನ್ನೂ ಓದಿ:ಪದಚ್ಯುತಿ: ಸೈರಸ್ ಮಿಸ್ತ್ರಿ ಮನವಿ ವಜಾ

ಟಾಟಾ ಸನ್ಸ್ ಅಧ್ಯಕ್ಷ ಹುದ್ದೆಯಿಂದ ಪದಚ್ಯುತಿಗೊಳಿಸಿದ್ದನ್ನು ಪ್ರಶ್ನಿಸಿ, ಮಿಸ್ತ್ರಿ ಅವರು ಮುಂಬೈನ ಎನ್ಸಿಎಲ್ಟಿ ಮೆಟ್ಟಿಲೇರಿದ್ದರು.ತಮ್ಮ ಪದಚ್ಯುತಿ ವಿಷಯದಲ್ಲಿ ಟಾಟಾ ಸನ್ಸ್ನ ನಿರ್ದೇಶಕ ಮಂಡಳಿ ಮತ್ತು ರತನ್ ಟಾಟಾ ಅವರಿಂದ ದುರ್ನಡತೆ ನಡೆದಿದೆ ಎನ್ನುವ ಮಿಸ್ತ್ರಿ ಅವರ ಆರೋಪಿಸಿದ್ದರು.ಅಧ್ಯಕ್ಷನನ್ನು ಪದಚ್ಯುತಿಗೊಳಿಸಲು ಕಾಯ್ದೆಯಲ್ಲಿ ಅವಕಾಶ ಇದೆ. ನಿರ್ದೇಶಕ ಮಂಡಳಿಯ 9 ಸದಸ್ಯರ ಪೈಕಿ 7 ಮಂದಿ ಮಿಸ್ತ್ರಿ ಅವರ ಪದಚ್ಯುತಿ ನಿರ್ಧಾರದ ಪರ ಮತ ಚಲಾಯಿಸಿದ್ದರು ಎಂದು ಟಾಟಾ ಸಮೂಹವು ತನ್ನ ನಿಲುವನ್ನು ಸಮರ್ಥಿಸಿಕೊಂಡಿತ್ತು.

2018ರ ಜುಲೈನಲ್ಲಿ ಮಿಸ್ತ್ರಿ ಸಲ್ಲಿಸಿದ್ದ ಅರ್ಜಿಯನ್ನು ಮುಂಬೈ ಎನ್ಸಿಎಲ್ಟಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿಎನ್ಸಿಎಲ್ಎಟಿಗೆ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.