ನವದೆಹಲಿ: ನೇರ ತೆರಿಗೆ ಮತ್ತು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಅನುಪಾತವು 2017–18ನೆ ಹಣಕಾಸು ವರ್ಷದಲ್ಲಿ
ಶೇ 5.98ರಷ್ಟಾಗಿದ್ದು, ಇದು 10 ವರ್ಷಗಳಲ್ಲಿನ ಗರಿಷ್ಠ ಪ್ರಮಾಣವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ತೆರಿಗೆ ಪಾವತಿಸಲು ಬದ್ಧತೆ ತೋರದ ತೆರಿಗೆದಾರರ ಪ್ರವೃತ್ತಿ ಬದಲಿಸಿ, ತೆರಿಗೆ ಪಾವತಿಸುವ ಬದ್ಧತೆ ಪ್ರದರ್ಶಿಸುವಂತಹ ಬದಲಾವಣೆ ತರುವುದು ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿಯ ಮುಖ್ಯ ಉದ್ದೇಶವಾಗಿತ್ತು. ಸಂಗ್ರಹವಾಗಿರುವ ವೈಯಕ್ತಿಕ ಆದಾಯ ತೆರಿಗೆ ಪ್ರಮಾಣವನ್ನು ಪರಿಗಣಿಸಿದರೆ ಈ ಸಂಗತಿ ಮನದಟ್ಟಾಗುತ್ತದೆ.

ಮೂರು ವರ್ಷಗಳಿಂದ ನೇರ ತೆರಿಗೆ ಮತ್ತು ಜಿಡಿಪಿ ಅನುಪಾತದಲ್ಲಿ ನಿರಂತರವಾಗಿ ಬೆಳವಣಿಗೆ ಕಂಡು ಬರುತ್ತಿದೆ. ಈ ಅನುಪಾತವು, 2016–17ರಲ್ಲಿ ಶೇ 5.57 ಮತ್ತು 2015–16ರಲ್ಲಿ ಶೇ 5.47ರಷ್ಟಿತ್ತು ಎಂದು ಸಚಿವಾಲಯವು 2018ರ ಪರಾಮರ್ಶೆ ವರದಿಯಲ್ಲಿ ತಿಳಿಸಿದೆ.

ಹಿಂದಿನ ನಾಲ್ಕು ಹಣಕಾಸು ವರ್ಷಗಳಲ್ಲಿ ಸಲ್ಲಿಕೆಯಾಗಿರುವ ರಿಟರ್ನ್‌ಗಳ ಸಂಖ್ಯೆಯಲ್ಲಿ ಶೇ 80ರಷ್ಟು ಏರಿಕೆ ಕಂಡು ಬಂದಿದೆ. 2013–14ರಲ್ಲಿ 3.79 ಕೋಟಿಗಳಷ್ಟಿದ್ದ ರಿಟರ್ನ್‌ಗಳು 2017–18ರಲ್ಲಿ 6.85 ಕೋಟಿಗೆ ಏರಿಕೆಯಾಗಿವೆ. ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸುವ ವ್ಯಕ್ತಿಗಳ ಸಂಖ್ಯೆಯಲ್ಲಿಯೂ 3.31 ಕೋಟಿಗಳಿಂದ 5.44 ಕೋಟಿಗಳಿಗೆ ಏರಿಕೆಯಾಗಿದೆ. ಮೂರು ಅಂದಾಜು ವರ್ಷಗಳಲ್ಲಿ ಎಲ್ಲ ಬಗೆಯ ತೆರಿಗೆದಾರರು ಘೋಷಿಸಿರುವ ಆದಾಯದಲ್ಲಿಯೂ ಹೆಚ್ಚಳವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.