ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಿಯಾಲ್ಟಿ: ₹5,300 ಕೋಟಿ ಹೂಡಿಕೆ

Published 13 ಜುಲೈ 2024, 15:35 IST
Last Updated 13 ಜುಲೈ 2024, 15:35 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ಜೂನ್‌ವರೆಗೆ ದೇಶೀಯ ಹೂಡಿಕೆದಾರರು ರಿಯಲ್‌ ಎಸ್ಟೇಟ್‌ ವಲಯದಲ್ಲಿ ₹5,300 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಾರೆ ಎಂದು ಆಸ್ತಿ ಸಲಹಾ ಸಂಸ್ಥೆ ವೆಸ್ಟಿಯನ್ ತಿಳಿಸಿದೆ.

ರಿಯಾಲ್ಟಿ ವಲಯದಲ್ಲಿನ ಬೇಡಿಕೆ ಸದೃಢವಾಗಿದೆ. ಅಲ್ಲದೆ, ಉತ್ತಮ ಗಳಿಕೆಯ ಭರವಸೆಯಿದೆ. ಹಾಗಾಗಿ, ವಾರ್ಷಿಕ ಲೆಕ್ಕಾಚಾರದಲ್ಲಿ ಹೂಡಿಕೆ ಪ್ರಮಾಣವು 5 ಪಟ್ಟು ಹೆಚ್ಚಳವಾಗಿದೆ ಎಂದು ಶನಿವಾರ ಬಿಡುಗಡೆಯಾಗಿರುವ ವರದಿ ವಿವರಿಸಿದೆ. 

ಕಳೆದ ವರ್ಷದ ಇದೇ ಅವಧಿಯಲ್ಲಿ ಈ ವಲಯದಲ್ಲಿನ ಸಾಂಸ್ಥಿಕ ಹೂಡಿಕೆಯು ₹13,300 ಕೋಟಿ ಇತ್ತು. ಪ್ರಸಕ್ತ ವರ್ಷದಲ್ಲಿ ₹25,800 ಕೋಟಿಗೆ ತಲುಪಿದೆ. ಒಟ್ಟಾರೆ ಹೂಡಿಕೆಯಲ್ಲಿ ಶೇ 96ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ.

‘ಪ್ರಸಕ್ತ ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ರಿಯಾಲ್ಟಿ ವಲಯದಲ್ಲಿ ಬಂಡವಾಳದ ಒಳಹರಿವು ಹೆಚ್ಚಿದೆ. ಜಾಗತಿಕ ಮಟ್ಟದಲ್ಲಿ ಪ್ರಮುಖ ದೇಶಗಳ ಆರ್ಥಿಕತೆ ಬೆಳವಣಿಗೆಗೆ ಸಂಬಂಧಿಸಿದಂತೆ ತಲೆದೋರಿದ್ದ ಅನಿಶ್ಚಿತತೆ ದೂರವಾಗಿದೆ. ಇದರಿಂದ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಳವಾಗಿದೆ. ದೇಶದ ಆರ್ಥಿಕತೆ ಸದೃಢವಾಗಿರುವುದು ದೇಶೀಯ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿಸಿದೆ’ ಎಂದು ವೆಸ್ಟಿಯನ್ ಸಿಇಒ ಶ್ರೀನಿವಾಸ ರಾವ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT