ಬೆಂಗಳೂರು: ಡ್ರೀಮ್11 ಕಂಪನಿಯು ಕರ್ನಾಟಕದಲ್ಲಿನ ತನ್ನ ಕಾರ್ಯಾಚರಣೆಗಳನ್ನು ಅಮಾನತಿನಲ್ಲಿ ಇರಿಸಿದೆ. ರಾಜ್ಯ ಸರ್ಕಾರವು ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು, ಆನ್‌ಲೈನ್ ಮೂಲಕ ನಡೆಯುವ ಜೂಜನ್ನು ನಿಷೇಧಿಸಿದ ನಂತರದಲ್ಲಿ ಕಂಪನಿಯು ಈ ತೀರ್ಮಾನ ಕೈಗೊಂಡಿದೆ.

‘ಆನ್‌ಲೈನ್ ಮೂಲಕ ನಡೆಯುವ ಜೂಜು, ಬೆಟ್ಟಿಂಗ್ ಚಟುವಟಿಕೆಗಳನ್ನು ನಿಷೇಧಿಸಿ ಕರ್ನಾಟಕದಲ್ಲಿ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಆದರೆ, ಈ ತಿದ್ದುಪಡಿಯು ತನ್ನ ಸದಸ್ಯರು ಅಭಿವೃದ್ಧಿಪಡಿಸಿರುವ ಫ್ಯಾಂಟಸಿ ಆಟಗಳಿಗೆ ಅನ್ವಯ ಆಗುವುದಿಲ್ಲ ಎಂದು ಭಾರತೀಯ ಫ್ಯಾಂಟಸಿ ಆಟಗಳ ಸಂಘವು (ಎಫ್‌ಐಎಫ್‌ಎಸ್) ನಮಗೆ ಸಲಹೆ ನೀಡಿದೆ. ಈ ವಿಚಾರವಾಗಿ ಸಂಘವು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ಅಭಿಪ್ರಾಯವನ್ನು ಕೂಡ ಹಂಚಿಕೊಂಡಿದೆ’ ಎಂದು ಡ್ರೀಮ್11 ಹೇಳಿದೆ.

‘ಎಫ್‌ಐಎಫ್‌ಎಸ್ ಅಭಿವೃದ್ಧಿಪಡಿಸುವ ಫ್ಯಾಂಟಸಿ ಆಟದ ಮಾದರಿಗಳು ಜೂಜು, ಬೆಟ್ಟಿಂಗ್ ಅಲ್ಲ ಎಂದು ದೇಶದ ನ್ಯಾಯಾಲಯಗಳು ಹೇಳಿವೆ. ಹೀಗಿದ್ದರೂ, ಈಚೆಗೆ ಮಾಧ್ಯಮಗಳಲ್ಲಿ ಪ್ರಕಟವಾದ, ಪ್ರಸಾರವಾದ ಕೆಲವು ವರದಿಗಳನ್ನು ಗಮನಿಸಿ ಕರ್ನಾಟಕದಲ್ಲಿನ ನಮ್ಮ ಬಳಕೆದಾರರು ತೀವ್ರ ಕಳವಳ ಮತ್ತು ತಮ್ಮ ಸುರಕ್ಷತೆ ಕುರಿತು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಅವರ ಆತಂಕವನ್ನು ಹೋಗಲಾಡಿಸುವ ಉದ್ದೇಶದಿಂದ ನಾವು ಕರ್ನಾಟಕದಲ್ಲಿನ ನಮ್ಮ ಕಾರ್ಯಾಚರಣೆಗಳನ್ನು ಅಮಾನತಿನಲ್ಲಿ ಇರಿಸುತ್ತಿದ್ದೇವೆ’ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.