ನವದೆಹಲಿ: ದೇಶದ ರಫ್ತು ವಹಿವಾಟು ಡಿಸೆಂಬರ್‌ನಲ್ಲಿ ಶೇ 0.8ರಷ್ಟು ಇಳಿಕೆ ಆಗಿದ್ದು, ₹ 1.96 ಲಕ್ಷ ಕೋಟಿಗಳಿಗೆ ತಲುಪಿದೆ. ಈ ಮೂಲಕ ಸತತ ಮೂರನೇ ತಿಂಗಳಿನಲ್ಲಿಯೂ ಇಳಿಕೆ ಕಂಡಂತಾಗಿದೆ.

ಪೆಟ್ರೋಲಿಯಂ, ಚರ್ಮ ಮತ್ತು ಸಾಗರೋತ್ಪನ್ನ ವಲಯಗಳ ಬೆಳವಣಿಗೆ ಇಳಿಕೆ ಕಂಡಿರುವುದೇ ಇದಕ್ಕೆ ಕಾರಣ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

2019ರ ಡಿಸೆಂಬರ್‌ನಲ್ಲಿ ₹ 1.97 ಲಕ್ಷ ಕೋಟಿ ಮೌಲ್ಯದ ರಫ್ತು ವಹಿವಾಟು ನಡೆದಿತ್ತು.

ಆಮದು ವಹಿವಾಟು ಶೇ. 7.6ರಷ್ಟು ಹೆಚ್ಚಾಗಿದೆ. ಇದರಿಂದಾಗಿ ವ್ಯಾಪಾರ ಕೊರತೆ ಅಂತರ ₹ 1.14 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. 2019ರ ಡಿಸೆಂಬರ್‌ನಲ್ಲಿ ₹ 91,177 ಕೋಟಿಗಳಷ್ಟಿತ್ತು.

ಡಿಸೆಂಬರ್‌ನಲ್ಲಿ ತೈಲ ಆಮದು ಶೇ 10ರಷ್ಟು ಇಳಿಕೆ ಆಗಿದೆ. ಏಪ್ರಿಲ್–ಡಿಸೆಂಬರ್‌ನಲ್ಲಿ ಶೇ 44ರಷ್ಟು ಇಳಿಕೆ ಕಂಡಿದೆ.

2020ರ ಏಪ್ರಿಲ್–ಡಿಸೆಂಬರ್ ಅವಧಿಯಲ್ಲಿ ರಫ್ತು ವಹಿವಾಟು ಶೇ 15.8ರಷ್ಟು ಇಳಿಕೆ ಕಂಡಿದ್ದು, ₹ 14.64 ಲಕ್ಷ ಕೋಟಿಗಳಷ್ಟಾಗಿದೆ. 2019ರ ಏಪ್ರಿಲ್–ಡಿಸೆಂಬರ್ ಅವಧಿಯಲ್ಲಿ ₹ 17.37 ಲಕ್ಷ ಕೋಟಿಗಳಷ್ಟಿತ್ತು. ಆಮದು ವಹಿವಾಟು ಶೇ 29.08ರಷ್ಟು ಕುಸಿತ ಕಂಡಿದ್ದು, ₹ 18.83 ಲಕ್ಷ ಕೋಟಿಗಳಷ್ಟಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ₹ 26.57 ಲಕ್ಷ ಕೋಟಿಗಳಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.